ಪುತ್ತೂರು: ಬೆಳಿಯೂರುಕಟ್ಟೆ ರೋಯಲ್ ಕಾಂಪ್ಲೆಕ್ಸ್ನಲ್ಲಿ 1 ವರ್ಷದಿಂದ ಕಾರ್ಯಾಚರಿಸುತ್ತಿರುವ ಕೆನರಾ ಕಂಪ್ಯೂಟರ್ ಎಜ್ಯುಕೇಶನ್ ಸೆಂಟರ್ನಲ್ಲಿ ಕೋರ್ಸ್ ಪೂರ್ಣಗೊಳಿಸಿದ 2ನೇ ಬ್ಯಾಚ್ನ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಜೂ. 22ರಂದು ನಡೆಯಿತು.
20 ಮಂದಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಲ್ನಾಡು ಗ್ರಾಮ ಪಂಚಾಯತು ಅಧ್ಯಕ್ಷೆ ವಿನಯ ವಸಂತರವರು ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣಕ್ಕಾಗಿ ಪಂಚಾಯತ್ನಲ್ಲಿ ಶೇ.25 ನಿಧಿಯಲ್ಲಿ ಅನುದಾನ ಕಾದಿರಿಸಲಾಗಿದ್ದು,ಅರ್ಹ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು.
ಮುಖ್ಯ ಅತಿಥಿಯಾಗಿದ್ದ ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎ.ಎಂ.ಪ್ರಕಾಶ್ಚಂದ್ರ ಆಳ್ವರವರು ಮಾತನಾಡಿ, ಕಂಪ್ಯೂಟರ್ ಕಲಿಯಲು ಆಸಕ್ತಿ ಇರುವ ಮಕ್ಕಳಿಗೆ ಸಂಘದಿಂದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ತಾಲೂಕು ಪಂಚಾಯತ್ ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವರವರು ಮಾತನಾಡಿ, ಕಂಪ್ಯೂಟರ್ ಶಿಕ್ಷಣಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಸಿಗುವ ಸೌಲಭ್ಯವನ್ನು ಒದಗಿಸುವ ಭರವಸೆ ನೀಡಿದರು. ಬಲ್ನಾಡು ಗ್ರಾ.ಪಂ.ಸದಸ್ಯರಾದ ಎ.ಎಂ.ಪ್ರವೀಣ್ಚಂದ್ರ ಆಳ್ವರವರು ಮಾತನಾಡಿ, ಈಗಿನ ವ್ಯವಸ್ಥೆಗೆ ಕಂಪ್ಯೂಟರ್ ಶಿಕ್ಷಣ ಅಗತ್ಯವಾಗಿದ್ದು, ಪ್ರತಿಯೊಬ್ಬರು ಕಂಪ್ಯೂಟರ್ ತರಬೇತಿ ಪಡೆಯುವುದು ಒಳ್ಳೆಯದು ಎಂದರು. ಚಮಿಷಾ ಪ್ರಾರ್ಥಿಸಿದರು. ಸಂಸ್ಥೆಯ ವ್ಯವಸ್ಥಾಪಕ, ಉದ್ಯಮಿ ಬಿ.ಎಂ. ಶೆರೀಫ್ ರೋಯಲ್ ಅವರು ಸ್ವಾಗತಿಸಿದರು. ಉದ್ಯಮಿ ಉಮೇಶ್ ವಂದಿಸಿದರು. ಕಂಪ್ಯೂಟರ್ ಶಿಕ್ಷಕಿ ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು.