Home_Page_Advt
Home_Page_Advt
Home_Page_Advt

ಕಡಬ: ಕಲ್ಲಂತಡ್ಕ ಸಾರ್ವಜನಿಕ ಸ್ಮಶಾನಕ್ಕೆ ಶಾಸಕ ಎಸ್. ಅಂಗಾರ ಭೇಟಿ

Puttur_Advt_NewsUnder_1
Puttur_Advt_NewsUnder_1

ಸ್ಮಶಾನ ಅಭಿವೃದ್ದಿಗೆ ಶಾಸಕರ ಭರವಸೆ – ಸರಕಾರಿ ಭೂಮಿ ಒತ್ತುವರಿಯಾಗಿದ್ದರೆ ಅಧಿಕಾರಿಗಳೆ ಹೊಣೆ

ಕಡಬ: ಕೋಡಿಂಬಾಳ ಗ್ರಾಮದಲ್ಲಿರುವ ಕಲ್ಲಂತಡ್ಕ ಸಾರ್ವಜನಿಕ ಸ್ಮಶಾನಕ್ಕೆ ಸುಳ್ಯ ಶಾಸಕ ಎಸ್. ಅಂಗಾರ  ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಈ ಸಂದರ್ಭದಲ್ಲಿ ಸ್ಮಶಾನದ ಅಭಿವೃದ್ದಿಗೆ ಶಾಸಕರು ಭರವಸೆ ನೀಡಿದ್ದಾರೆ. ಅಲ್ಲದೆ ಸ್ಮಶಾನ ಹಾಗೂ ಇದರ ಸಮೀಪ ಇರುವ ಸರಕಾರಿ ಜಾಗಗಳನ್ನು ಸರ್ವೆ ನಡೆಸಿ, ಗಡಿ ಗುರುತು ಮಾಡಲು ಸಂಬಂಧಪಟ್ಟ ಇಲಾಖೆಗೆ ಸೂಚಿಸುವುದಾಗಿ ತಿಳಿಸಿದರು.

ಕೋಡಿಂಬಾಳ ಗ್ರಾಮದ ಕಲ್ಲಂತಡ್ಕ ಸಾರ್ವಜನಿಕ ಸ್ಮಶಾನವು ತೀರ ನಾದುರಸ್ತಿಯಲ್ಲಿದ್ದು ಇದನ್ನು ಶಾಸಕರು ವೀಕ್ಷಣೆ ಮಾಡಿದರು. ಬಳಿಕ ಶಾಸಕರು ತಾಲೂಕು ಪಂಚಾಯತ್ ಮುಖ್ಯ ಕಾರ್‍ಯನಿರ್ವಾಹಣಾಧಿಕಾರಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಕಡಬ ಸಾರ್ವಜನಿಕ ಸ್ಮಶಾನದ ಬಗ್ಗೆ ಪೂರ್ಣ ಮಾಹಿತಿ ಮತ್ತು ಅದರ ಅಭಿವೃದ್ದಿಗೆ ಸರಕಾರಿ ನಿಯಗಳ ಬಗ್ಗೆ ಜೂ. 25ರೊಳಗೆ ವರದಿ ನೀಡುವಂತೆ ಸೂಚಿಸಿದರು. ಬಳಿಕ ಮಾತನಾಡಿದ ಅವರು ಸ್ಮಶಾನದ ಅಭಿವೃದ್ದಿ ಪಡಿಸಲು ಕ್ರಮ ಕೈಗೊಳ್ಳುತ್ತೇನೆ, ಮುಂದೆ ವಿದ್ಯುತ್ ಚಿತಗಾರ, ಕಟ್ಟಡ ಅಭಿವೃದ್ದಿ ಹಾಗೂ ಸ್ಮಶಾನಕ್ಕೆ ರಸ್ತೆ ನಿರ್ಮಾಣ ಮಾಡಿ ಸಾರ್ವಜನಿಕ ಸ್ಮಶಾನವನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ಶಾಸಕರು ಹೇಳಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಎ.ಬಿ. ಮನೋಹರ್ ರೈ, ಸತೀಶ್ ನಾಯಕ್, ಅಶೋಕ್ ಕುಮಾರ್, ಪ್ರಕಾಶ್ ಎನ್.ಕೆ, ಆದಂ ಕುಂಡೋಳಿ, ಸೋಮಯ್ಯ ದೇರೊಡಿ, ರಮೇಶ್ ಕುಂಡಿಲು,ಗಣೇಶ್ ಕುಂಡಿಲು, ಪುರುಷೋತ್ತಮ, ಸುಂದರ, ಶ್ರೀಮತಿ ಪ್ರೀತ ಮೊದಲಾದವರು ಉಪಸ್ಥಿತರಿದ್ದರು.ಸ್ಮಶಾನ ಹಾಗೂ ಸರಕಾರಿ ಜಾಗದ  ಸರ್ವೆ ನಡೆಸಲು ಶಾಸಕರ ಸೂಚನೆ
ಕಡಬ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಕಲ್ಲಂತಡ್ಕ ಸ್ಮಶಾನದ ಬಳಿ ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಸ್ಥಳೀಯರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿರುವ ವಿಚಾರ ಹಾಗೂ ದೂರಿನ ಹಿನ್ನೆಲೆಯಲ್ಲಿ ಕಡಬ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅಲ್ಲಿ ಅಕ್ರಮವಾಗಿ ನಿರ್ಮಿಸಲಾಗುತ್ತಿದ್ದ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಆದೇಶಿಸಿರುವ ಬಗ್ಗೆ ಶಾಸಕರ ಗಮನಕ್ಕೆ ತಂದಾಗ ಸ್ಮಶಾನ ಹಾಗೂ ಅದಕ್ಕೆ ಹೊಂದಿಕೊಂಡಿರುವ ಸರಕಾರಿ, ಗೋಮಳ ಜಮೀನುಗಳನ್ನು ಸರ್ವೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಸರಕಾರಿ ಅಥವಾ ಗೋಮಾಳದಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿ ಒತ್ತುವರಿ ಮಾಡಿಕೊಂಡಿದ್ದರೆ ಅದಕ್ಕೆ ಅಧಿಕಾರಿಗಳೆ ಹೊಣೆಯಾಗುತ್ತಾರೆ, ಮುಂದೆ ಸೂಕ್ತ ಕ್ರಮಕ್ಕಾಗಿ ಸಂಬಂಧಪಟ್ಟವರಿಗೆ ಸೂಚನೆ ನೀಡುತ್ತೇನೆ, ಕಡಬ ತಾಲೂಕು ಆಗಿರುವುದರಿಂದ ಸರಕಾರಿ ಭೂಮಿಯ ಅಗತ್ಯವಿದ್ದು ಇಲಾಖೆಗಳ ನಿರ್ಮಾಣಕ್ಕೆ ಕಾದಿರಿಸಲಾಗುವುದು ಎಂದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.