ಪುತ್ತೂರು: ಜೂ.20ರಂದು ಕಕ್ಕೆಪದವು ನಿವಾಸಿ ಸುಂದರ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನಗರಸಭೆ ಸ್ವಚ್ಚತಾ ಸಿಬಂದಿ ನೆಲ್ಲಿಗುಂಡಿಯ ಸರಸ್ವತೀಯ ಅವರನ್ನು ಕೊಂಬೆಟ್ಟು ವಾರ್ಡ್ನ ನಾಗರಿಕರು ಜೂ. 22ರಂದು ಕೊಂಬೆಟ್ಟು ಅಟಲ್ ಉದ್ಯಾನದಲ್ಲಿ ಗೌರವಿಸಿದರು.
ಸರಸ್ವತಿ ಅವರು ಕೊಂಬೆಟ್ಟು ವಾರ್ಡ್ನಲ್ಲಿ ಹಲವು ಸಮಯಗಳಿಂದ ಸ್ವಚ್ಚತಾ ಕಾರ್ಯ ನಿರ್ವಹಿಸುತ್ತಿದ್ದು, ಅವರ ಸೇವೆಯನ್ನು ವಾರ್ಡ್ನ ಬಿಜೆಪಿ ಸಮಿತಿ ಮತ್ತು ನಾಗರಿಕರು ಗುರುತಿಸಿ ನೂತನ ದಂಪತಿಗೆ ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಿದರು.
ಪ್ರಧಾನ ಮಂತ್ರಿ ಕನಸನ್ನು ನನಸು ಮಾಡಿದ ಕೊಂಬೆಟ್ಟು ವಾರ್ಡ್:
ನಗರ ಬಿಜಪಿ ಮಂಡಲದ ಅಧ್ಯಕ್ಷ ಜೀವಂಧರ್ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸನ್ನು ಕೊಂಬೆಟ್ಟು ವಾರ್ಡ್ನ ನಾಗರಿಕರು ಸಾಕಾರಗೊಳಿಸಿದ್ದಾರೆ. ಸ್ವಚ್ಛತಾ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ಕೊಟ್ಟ ನಾಗಕರಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದವರನ್ನು ಗುರುತಿಸುವ ಮೂಲಕ ಅವರಿಗೆ ಇನ್ನಷ್ಟು ಪ್ರೋತ್ಸಾಹ ನೀಡಿರುವುದು ಶ್ಲಾಘನೀಯ ಕೆಲಸ ಎಂದರು.
ಸ್ವಚ್ಛತೆಯೇ ನಮ್ಮ ಗುರಿ:
ನಗರಸಭಾ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ವಾರ್ಡ್ನಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸ್ವಚ್ಚತಾ ಕಾರ್ಯ ನಿರ್ವಹಿಸಿದವರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದರು. ನಗರಸಭೆ ಮಾಜಿ ಅಧ್ಯಕ್ಷ ಪ್ರೇಮಲತಾ ರಾವ್, ನಗರಸಭಾ ಸದಸ್ಯೆ ವಿದ್ಯಾ ಆರ್ ಗೌರಿ, ಹಿರಿಯರಾದ ವಿಶ್ವನಾಥ ನಾಯಕ್, ಇಂಜಿನಿಯರ್ ರಾಮಚಂದ್ರ ಘಾಟೆ, ಪಾಂಡುರಂಗ ನಾಯಕ್, ಎಮ್.ಎಸ್ ಎನ್. ಕಾಮತ್, ನಿವೃತ್ತ ಪ್ರಾಂಶುಪಾಲ ಶ್ರೀಪತಿ ರಾವ್ ರವರು ನೂತನ ದಂಪತಿಗೆ ಉಡುಗೊರೆ ನೀಡಿ ಗೌರವಿಸಿದರು. ವಾರ್ಡ್ನ ಬಿಜೆಪಿ ಸಮಿತಿ ಕಾರ್ಯದರ್ಶಿ ನವೀನ್ ಪಡಿವಾಳ್, ವಿಜಯಾ ನಾಯಕ್, ಲಕ್ಷ್ಮೀ ನಾರಾಯಣ ರಾವ್, ಪ್ರಕಾಶ್ಚಂದ್ರ ಐತ್ತಾಳ್, ರಂಗನಾಥ ರಾವ್, ಸವಿತಾ ದೇವಿ, ರವೀಂದ್ರ ಬಾಳ್ತಿಲ್ಲಾಯ, ನಾರಾಯಣ ನಾಯಕ್, ರೇಖಾ, ಮೋಹನ್ ರಾವ್, ನೀಲಂತ್ ಕುಮಾರ್, ವೆಂಕಪ್ಪ ಕಕ್ಕೆಪದವು, ಚಿನ್ನಪ್ಪ, ಅಣ್ಣು, ಬಾಬು ಸೇಡಿಯಾಪು, ಶ್ಯಾಮೊಲ, ಪುನಿತ್, ಶಿಕ್ಷಕಿ ಶ್ರಿವಿದ್ಯಾ ಜೆ ರಾವ್, ವೈಷ್ಣವ್, ರಾಘವೇಂದ್ರ ಐತಾಳ್, ಲಕ್ಷ್ಮೀ, ಶ್ರೀಪತಿ ಎರ್ಕಡಿತ್ತಾಯ, ಚಂದ್ರಶೇಖರ್ ಟಿ, ಭಾಸ್ಕರ, ವಿಜಯಾ, ರಮೇಶ್ ಉಪಸ್ಥಿತರಿದ್ದರು.