Home_Page_Advt
Home_Page_Advt
Home_Page_Advt

ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ನಮ್ಮ ಸಮಾಜ ಗೌರವಯುತವಾದ ಸಮಾಜ. ಸಮಾಜದ ಆಚರಣೆ, ಕಟ್ಟುಪಾಡುಗಳಿಗೆ ತನ್ನದೇ ಆದ ಇತಿಹಾಸವಿದೆ. ಇಂತಹ ಆಚರಣೆ, ಕಟ್ಟಿಪಾಡುಗಳನ್ನು ಮುಂದಿನ ಪೀಳಿಗೆಗೂ ಉಳಿಯಬೇಕು. ಇದಕ್ಕಾಗಿ ಪೆರ್ಣೆ ಕ್ಷೇತ್ರದಲ್ಲಿ ಪ್ರತಿವರ್ಷ ನಡೆಯುವ ಮೂರು ದಿನದ ಶಿಬಿರ ನಡೆಸುವ ಮೂಲಕ ಮಕ್ಕಳಿಗೂ ಆಚರಣೆ, ಅನುಷ್ಠಾನಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಈ ಶಿಬಿರಕ್ಕೆ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪೆರ್ಣೆ ವಾಣಿಯ/ಗಾಣಿಗ ಸಮಾಜ ಸಂಘದ ಅಧ್ಯಕ್ಷ ಶಂಕರ ಬೆಳ್ಳಿಗೆ ಮನವಿ ಮಾಡಿದರು.


ತಾಲೂಕು ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘದ ವತಿಯಿಂದ ಜೂ.23ರಂದು ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆದ 14ನೇ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಹಾಗೂ ವಾರ್ಷಿಕ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಸಮಾಜ ಸೇವಾ ಸಂಘವು ಪದಾಧಿಕಾರಿಗಳಿಗೆ ಸೀಮಿತವಲ್ಲ. ಸಂಘ ಸಮಾಜದ ಅಭಿವೃದ್ಧಿಗೆ ಅದಕ್ಕಾಗಿ ಪ್ರತಿಯೊಬ್ಬ ಸಮಾಜ ಬಾಂಧವರು ಸಂಘದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು. ಮಕ್ಕಳಲ್ಲಿಯೂ ಧಾರ್ಮಿಕ ಪ್ರಜ್ಷೆ ಮೂಡಿಸುವ ನಿಟ್ಟಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಹೆಚಾಗಿ ಜೋಡಿಕೊಳ್ಳಬೇಕು ಎಂದು ಹೇಳಿದ ಅವರು ಪೆರ್ಣೆ ಭಗವತಿ ಕ್ಷೇತ್ರದ ಜೀರ್ಣೋದ್ದಾರ ಕಾರ್ಯಗಳು ನಡೆಯುತ್ತಿದ್ದು ಸಮಾಜ ಬಾಂಧವರು ಸಹಕರಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಪೆರ್ನೆ ಮುಚ್ಚಿಲೋಟ್ ಭಗವತೀ ಕ್ಷೇತ್ರದ ಚಂದಪ್ಪ ಕೋಮರ ಕುಂತೂರು ಮಾತನಾಡಿದರು. ಮಂಗಳೂರು ಗಾಣಿಗ ಸಮುದಾಯ ಸೇವಾ ಸಂಘದ ಅಧ್ಯಕ್ಷ ಕೆ.ಮಹಾಲಿಂಗ ಪಾಟಾಳಿ, ಸುಳ್ಯ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ ಕೊಡೆಕಲ್ಲು, ಸಂಘದ ಅಧ್ಯಕ್ಷ ತಿಮ್ಮಪ್ಪ ಪಾಟಾಳಿ, ಅಡೂರು ವಾಣಿಯ/ಗಾಣಿಗ ಸಭಾ ಅಧ್ಯಕ್ಷ ಮೋಹನ್, ಈಶ್ವರಮಂಗಲ ಗಾಣಿಗ ಸಮುದಾಯ ಸೇವಾನಿರತ ಸಂಘದ ಅಧ್ಯಕ್ಷ ರಾಜೇಶ್ ಡಿ., ಪೆರ್ಣೆ ಕ್ಷೇತ್ರದ ಜಂಡಡ್ಕ್ ಕೇಶವ ಪಾಟಾಳಿ ಸಂದರ್ಭೋಚಿತವಾಗಿ ಮಾತನಾಡಿದರು.
ಸನ್ಮಾನ :
ಪೆರ್ಣೆ ಕ್ಷೇತ್ರದ ಹಿರಿಯರಾದ ಚಂದಪ್ಪ ಕೋಮರ ಕುಂತೂರು, ಕೇಶವ ಪಾಟಾಳಿ ಅರಂತನಡ್ಕ ಹಾಗೂ ಸರವು ತೇರಪ್ಪ ಚೆಟ್ಟಿಯಾನ್, ಕರ್ತವ್ಯ ನಿರತಯೋಧ ಲಕ್ಷ್ಮೀಶ ಕಡಮಜಲು, ಗೋಪಾಲಕೃಷ್ಣ ಮಾಸ್ತರ್ ಪಂಜತೊಟ್ಟಿ, ಸಮಾಜದ ಹಿರಿಯರಾದ ಮಹಾಲಿಂಗ ಗೋಬಾ, ಕಲ್ಯಾಣಿ ಅರಂತನಡ್ಕ, ಸುಬ್ಬ ಪಾಟಾಳಿ ಮುಕ್ರಂಪಾಡಿ, ಮಹಾಲಿಂಗ ಪಾಟಾಳಿ ಪಟ್ಟೆ, ವಿದ್ಯಾದಾಯಿನಿ ಪುತ್ತೂರು, ಕೇಶವ ಪಾಟಾಳಿ ಉಪ್ಪಳಿಗೆ, ಲಕ್ಷ್ಮೀ ಪಾಂಗಳಾಯಿ, ಯಮುನಾ ಕೆಮ್ಮಾಯಿ, ಗಿರಿಜಾ ಪಟ್ಟೆ, ಮಾಕುಅಮ್ಮ ದೇಲಂಪಾಡಿ, ಪರಮೇಶ್ವರಿ ಮುಕ್ರಂಪಾಡಿ ಹಾಗೂ ಅಪ್ಪಣ್ಣ ಟೈಲರ್‌ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಪ್ರಾಯೋಜಕರಾಗಿ ಸಹಕರಿಸಿದರ ಪ್ರಸಾದ್ ಕಲ್ಲರ್ಪೆ ಹಾಗೂ ರವಿ ಬಾಕಿತ್ತಿಮಾರ್ ಅವರನ್ನು ಗೌರವಿಸಲಾಯಿತು. ಎಸ್.ಎಸ್.ಎಲ್.ಸಿಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸತ್ಯನಾರಾಯಣ ಪೂಜೆ:
ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀಗಣಪತಿ ಹೋಮ ಹಾಗೂ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ ನಡೆಯಿತು.
ಧನುಷಾ ಪ್ರಾರ್ಥಿಸಿದರು. ಭವ್ಯ ಮನೋಹರ್ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಯಂ.ಗೋಪಾಲಕೃಷ್ಣ ವರದಿ ವಾಚಿಸಿದರು. ದಾಮೋದರ ಪಾಟಾಳಿ ಸನ್ಮಾನಿತರ ಪರಿಚಯ ಮಾಡಿದರು. ಮಹೇಶ್ ಆಲಂಕಾರು ಕಾರ್ಯಕ್ರಮ ನಿರೂಪಿಸಿ, ಜಯಲಕ್ಷ್ಮಿ ಡಿ.ಎಸ್ ವಂದಿಸಿದರು. ಹರಿಪ್ರಸಾದ್ ಡಿ,ಎಸ್, ರವಿ ಬಾಕಿತ್ತಿಮಾರ್, ಮಹಾಲಿಂಗ ಪಾಟಾಳಿ, ಮನೋಹರ್, ಲಕ್ಷ್ಮೀಶ ಮೊಟ್ಟೆತ್ತಡ್ಕ, ಪ್ರಸಾದ್ ಕಲ್ಲರ್ಪೆ ಅತಿಥಿಗಳನ್ನು ತಾಂಬೂಲ ನೀಡಿ ಸ್ವಾಗತಿಸಿದರು. ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆದು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.