HomePage_Banner
HomePage_Banner
HomePage_Banner

ತಿಂಗಳಾಡಿಯಲ್ಲಿ `ಅಭಿನಂದನ್ ಸ್ಪೋರ್ಟ್ಸ್ ಕ್ಲಬ್’ ಉದ್ಘಾಟನೆ, ಸಾಧಕರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಯುವ ಜನಾಂಗ ಈ ದೇಶದ ಆಸ್ತಿ ಇದ್ದಂತೆ. ಯುವಕರು ಮನಸ್ಸು ಮಾಡಿದರೆ ಸಮಾಜದಲ್ಲಿ ಒಳ್ಳೆಯ ಬದಲಾವಣೆ ತರಬಲ್ಲರು. ಯುವಕ ಮಂಡಲಗಳು ಬಹಳಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿದ ನಿದರ್ಶನಗಳು ನಮ್ಮ ಮುಂದಿವೆ. ದೇಶ ರಕ್ಷಣೆಯಲ್ಲಿ ನಮ್ಮ ಸೈನಿಕರು ಸದಾ ಸಿದ್ಧವಾಗಿದ್ದಾರೆ. ಆದ್ದರಿಂದ ನಾವೆಲ್ಲರೂ ನೆಲ, ಜಲ ಸಂರಕ್ಷಣೆಯ ಸೈನಿಕರಾಗಬೇಕು ಎಂದು ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಹೇಳಿದರು. ಅವರು ತಿಂಗಳಾಡಿಯಲ್ಲಿ ಆರಂಭವಾದ `ಅಭಿನಂದನ್ ಸ್ಪೋರ್ಟ್ಸ್ ಕ್ಲಬ್’ ಅನ್ನು ಜೂ.23ರಂದು ಕೆದಂಬಾಡಿ ಗ್ರಾಪಂ ಸಭಾ ಭವನದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಮಾಜ ಸೇವಕ, ಸುಬ್ರಹ್ಮಣ್ಯ ಅನುಗ್ರಹ ಕನ್‌ಸ್ಟ್ರಕ್ಷನ್‌ನ ಮಾಲಕ, ಆರ್ಯಭಟ ಪ್ರಶಸ್ತಿ ಪುರಸ್ಕೃತರಾದ ಜೆ.ಸಿ.ಐ ರವಿ ಕಕ್ಕೆಪದವು ಮಾತನಾಡಿದರು.


ಸನ್ಮಾನ ಕಾರ್ಯಕ್ರಮ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರನ್ನು ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು. ಭಾರತೀಯ ಸೇನೆಯ ನಿವೃತ್ತ ಸೈನಿಕ ರಮೇಶ್ ರೈ ಚಾವಡಿ, ಪತ್ರಕರ್ತ ಸಿಶೇ ಕಜೆಮಾರ್, ಜನಮೆಚ್ಚಿದ ರಿಕ್ಷಾ ಚಾಲಕ ಸಾಂತಪ್ಪ ಪೂಜಾರಿ ಓಲ್ತಾಜೆ ಹಾಗೂ ಹಿರಿಯ ವ್ಯಾಪಾರಸ್ಥ ಮೊದುಕುಟ್ಟಿರವರುಗಳನ್ನು ಶಾಲು,ಸ್ಮರಣಿಕೆ, ಹಾರ ಹಾಕಿ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಸಿಶೇ ಕಜೆಮಾರ್ ಮಾತನಾಡಿ ಕೃತಜ್ಞತೆ ಸಲ್ಲಿಸಿದರು.

ಅಭಿನಂದನ್ ಸ್ಪೋರ್ಟ್ಸ್ ಕ್ಲಬ್‌ – ಅಧ್ಯಕ್ಷ: ರವಿಕುಮಾರ್. ಕಾರ್ಯದರ್ಶಿ: ವರುಣ್ ತಿಂಗಳಾಡಿ, ಕೋಶಾಧಿಕಾರಿ: ಶರತ್ ಗೌಡ

ಅಭಿನಂದನ್ ಸ್ಪೋರ್ಟ್ಸ್ ಕ್ಲಬ್‌ನ ಸ್ಥಾಪಕ ಅಧ್ಯಕ್ಷರಾಗಿ ರವಿ ಕುಮಾರ್ ಕೆದಂಬಾಡಿಮಠ, ಕಾರ್ಯದರ್ಶಿಯಾಗಿ ವರುಣ್ ಕುಮಾರ್ ತಿಂಗಳಾಡಿ, ಜತೆ ಕಾರ್ಯದರ್ಶಿಯಾಗಿ ಲೋಕೇಶ್ ರೈ ಮಿತ್ತೋಡಿ, ಕೋಶಾಧಿಕಾರಿಯಾಗಿ ಶರತ್ ಗೌಡ ಗುತ್ತು, ಉಪಾಧ್ಯಕ್ಷರುಗಳಾಗಿ ರಮೇಶ್ ರೈ ಮಠ,ಸತೀಶ್ ರೈ ಮಿತ್ತೋಡಿ,ನಿತಿನ್ ರೈ ಸೊರಕೆ, ಶಫೀಕ್ ತಿಂಗಳಾಡಿ, ಪ್ರಜ್ವಲ್ ಶೆಟ್ಟಿ ಸಾಗು, ನಿರ್ದೇಶಕರುಗಳಾಗಿ ದಯನಂದ್ ರೈ ಕೊಲ್ಲಾಜೆ, ಸೂರ್ಯಪ್ರಸನ್ನ ರೈ ಎಂಡೆಸಾಗು, ವಿಕಾಸ್ ರೈ ಅರಿಯಡ್ಕ, ಪ್ರವೀಣ್ ಶೆಟ್ಟಿ ಮಠರವರುಗಳು ೨೦೧೯-೨೦ ನೇ ಸಾಲಿಗೆ ಪದಸ್ವೀಕಾರ ಸ್ವೀಕರಿಸಿದರು. ಸುರೇಶ್ ರೈ ಸೂಡಿಮುಳ್ಳುರವರು ಪದಪ್ರಧಾನ ನಡೆಸಿಕೊಟ್ಟರು.

ಕ್ಲಬ್‌ನ ಅಧ್ಯಕ್ಷ ರವಿಕುಮಾರ್ ಕೆದಂಬಾಡಿಮಠರವರು ಸಭಾಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕ್ಲಬ್‌ನ ಕಾರ್ಯದರ್ಶಿ ವರುಣ್ ತಿಂಗಳಾಡಿ ವರದಿ ವಾಚಿಸಿದರು. ರಮೇಶ್ ರೈ ಮಠ, ಸತೀಶ್ ರೈ ಮಿತ್ತೋಡಿ, ನಿಶಾಂತ್ ರೈ ಸೊರಕೆ, ಸಂಪತ್ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಶಫೀಕ್ ತಿಂಗಳಾಡಿ ವಂದಿಸಿದರು. ಶರತ್ ಗೌಡ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.