ಉಪ್ಪಿನಂಗಡಿ: ಇಲ್ಲಿನ ಮಾಲಿಕುದ್ದಿನಾರ್ ಜುಮಾ ಮಸೀದಿ ಅಧೀನದಲ್ಲಿ ನಡೆಯುತ್ತಿರುವ ಹಿಫ್ಲ್ ಕಾಲೇಜು ನೂತನ ವರ್ಷದ ತರಗತಿ ಉದ್ಘಾಟನೆ ಜರಗಿತು.
ಮಾಲಿಕುದ್ದೀನಾರ್ ಜುಮಾ ಮಸೀದಿ ಖತೀಬ್ ನಝೀರ್ ಅಝ್ಹರಿ ಉದ್ಘಾಟಿಸಿದರು. ಮಸೀದಿ ಆಡಳಿತ ಮಂಡಳಿ ಉಪಾಧ್ಯಕ್ಷ ಹಾಜಿ ಹಾರೂನ್ ರಶೀದ್ ಅಗ್ನಾಡಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕ ಹಸೈನಾರ್ ಇಂದಾದಿ ತರಗತಿ ನಡೆಸಿಕೊಟ್ಟರು.
ಮಸೀದಿ ಕಾರ್ಯದರ್ಶಿ ಅಬ್ದುಲ್ ಶುಕೂರ್ ಶುಕ್ರಿಯ, ಜೊತೆ ಕಾರ್ಯದರ್ಶಿಗಳಾದ ಯೂಸುಫ್ ಹಾಜಿ, ಎಣ್ಮಾಡಿ ಯೂಸುಫ್ ಹಾಜಿ, ಕೋಶಾಧಿಕಾರಿ ಮಹಮ್ಮದ್ ಮುಸ್ತಫಾ,ಸದಸ್ಯರುಗಳಾದ ಅಶ್ರಫ್ ಹಾಜಿ, ಸಿದ್ದಿಕ್ ಕೆಂಪಿ, ಮುಹಮ್ಮದ್ ಕೂಟೇಲು ಉಪಸ್ಥಿತರಿದ್ದರು. ಮಸೀದಿ ಮುಅದ್ದಿಂ ಮುಹಮ್ಮದ್ ರಶೀದ್ ಮುಸ್ಲಿಯಾರ್ ಸ್ವಾಗತಿಸಿ, ವಂದಿಸಿದರು.