ಸುದ್ದಿ ಬಿಡುಗಡೆ ಪ್ರತಿನಿಧಿ ಕುರಿತು ಮಾನಹಾನಿ ವರದಿ ಪ್ರಕಟಿಸಿದ ಪ್ರಕರಣ: ನಿಖರ ನ್ಯೂಸ್ ವೆಬ್‌ಸೈಟ್‌ನ ಪ್ರದೀಪ್ ಶೆಟ್ಟಿವಿರುದ್ಧ ಕ್ರಿಮಿನಲ್ ಕೇಸ್ ದಾಖಲು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ‘ಸುದ್ದಿ ಬಿಡುಗಡೆ’ ಪತ್ರಿಕಾ ಪ್ರತಿನಿಧಿ ಸುಧಾಕರ ಕಾಣಿಯೂರುರವರ ಕುರಿತು ಅವಹೇಳನಕಾರಿ ಬರಹ ಪ್ರಕಟಿಸಿರುವ ‘ನಿಖರ ನ್ಯೂಸ್’ ವೆಬ್‌ಸೈಟ್‌ನ ಪ್ರದೀಪ್ ಕುಮಾರ್ ಶೆಟ್ಟಿ ವಿರುದ್ಧ ಪುತ್ತೂರಿನ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸು ದಾಖಲಾಗಿದೆ.  ಬನ್ನೂರು ಗ್ರಾಮದ ಕಂಜೂರು ನಿವಾಸಿಯಾಗಿರುವ ನಿವೃತ್ತ ಶಿಕ್ಷಕ ಸೀತಾರಾಮ ಶೆಟ್ಟಿಯವರ ಪುತ್ರರಾದ ಪ್ರದೀಪ್ ಕುಮಾರ್ ಶೆಟ್ಟಿಯವರು ತಮ್ಮ ನಿಖರ ನ್ಯೂಸ್ ವೆಬ್‌ಸೈಟ್‌ನಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಯ ಕಾಣಿಯೂರು ಭಾಗದ ಪ್ರತಿನಿಧಿಯಾಗಿರುವ ಸುಧಾಕರರವರ ಕುರಿತು ಅವಹೇಳನಕಾರಿಯಾಗಿ ವರದಿ ಪ್ರಕಟಿಸಿದ್ದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಚಾರ ಮಾಡಿದ್ದರು.

ಕಾಣಿಯೂರು ಗ್ರಾಮ ಪಂಚಾಯತ್‌ನ ಸಭೆಯ ವರದಿಯ ವಿಚಾರವನ್ನು ಮುಂದಿಟ್ಟುಕೊಂಡು ವೆಬ್‌ಸೈಟ್‌ನಲ್ಲಿ ಬರಹ ಪ್ರಕಟಿಸಿದ್ದ ಪ್ರದೀಪ್ ಕುಮಾರ್ ಶೆಟ್ಟಿಯವರು ಅವಹೇಳನಕಾರಿ ಶಬ್ದ ಬಳಕೆ ಮಾಡುವ ಮೂಲಕ ಸುಧಾಕರರವರನ್ನು ತೇಜೋವಧೆ ಮಾಡಿ ಮಾನಹಾನಿ ಉಂಟು ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಸುಧಾಕರರವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಸುಧಾಕರರವರ ಪರ ವಾದ ಮಂಡಿಸಿದ ವಕೀಲರು ‘ಪುತ್ತೂರು ತಾಲೂಕಿನಲ್ಲಿ ಅತೀ ಹೆಚ್ಚು ಪ್ರಸಾರ ಇರುವ ಹಾಗೂ ಇತರ ತಾಲೂಕಿನಲ್ಲಿಯೂ ಪ್ರಸಾರ ಹೊಂದಿರುವ ಸುದ್ದಿ ಬಿಡುಗಡೆ ಪತ್ರಿಕೆಯ ಕಾಣಿಯೂರು ಪ್ರಾಂತ್ಯದ ವರದಿಗಾರರಾಗಿರುವ ಸುಧಾಕರ ಆಚಾರ್ಯರವರು ಕಳೆದ 8 ವರ್ಷಗಳಿಂದ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಣಿಯೂರಿನ ವಿಶ್ವಜ್ಞ ಯುವಕ ಮಂಡಲ, ಯುವ ವಿಶ್ವಕರ್ಮ ಸಂಘಟನೆ, ಯುವಜನ ಒಕ್ಕೂಟ ಇತ್ಯಾದಿ ಸಂಘಟನೆಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿಯೂ ಸೇವೆ ಸಲ್ಲಿಸಿದ ಅನುಭವ ಇರುವ ಸುಧಾಕರರವರ ಕುರಿತು ನಿಖರ ನ್ಯೂಸ್ ವೆಬ್‌ಸೈಟ್‌ನಲ್ಲಿ ಮಾನಹಾನಿ ಉಂಟು ಮಾಡಿ ಮಾನಸಿಕ ಹಿಂಸೆ ನೀಡುವ, ತೀರಾ ಅವಹೇಳನ ಮಾಡುವ ಮತ್ತು ಜೀವ ಬೆದರಿಕೆ ಹಾಕುವಂತಹ ವರದಿ ಪ್ರಕಟಿಸಲಾಗಿದೆ, ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಯಾರೂ ಜರ್ನಲಿಸಂ ಕಲಿತವರಿಲ್ಲ, ಅಲ್ಲಿನ ವರದಿಗಾರರು’ರೌಡಿ ಸಿಬ್ಬಂದಿಗಳು ಎಂದು ವೆಬ್‌ಸೈಟ್‌ನಲ್ಲಿ ಆಧಾರ ರಹಿತ ಬರಹ ಪ್ರಕಟಿಸಿದ್ದಾರೆ, ಅಲ್ಲದೆ, ಗ್ರಾಮಸಭೆಯಲ್ಲಿ ವರದಿಗಾರನ ವಿರುದ್ಧ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ ಎಂದು ಬಿಂಬಿಸುವ ನಕಲಿ ವಿಡಿಯೋ ಬಿಡುಗಡೆ ಮಾಡಿ ಮಾನಹಾನಿ ಮಾಡಲಾಗಿದೆ. ಈ ಕುರಿತು ಸುಧಾಕರರವರು ವೆಬ್‌ಸೈಟ್‌ನ ಪ್ರದೀಪ್ ಶೆಟ್ಟಿಯವರಿಗೆ ನೀಡಿರುವ ವಕೀಲರ ನೊಟೀಸ್‌ಗೆ ಉತ್ತರಿಸಿರುವುದಿಲ್ಲ. ನೊಟೀಸ್‌ನಲ್ಲಿ ಹೇಳಿದ ರೀತಿ ಪರಿಹಾರವನ್ನೂ ಕೊಟ್ಟಿಲ್ಲ. ಇದಲ್ಲದೆ, ಅತ್ಯಂತ ಪ್ರಸಾರ ಹೊಂದಿರುವ ಸುದ್ದಿ ಬಿಡುಗಡೆ ಪತ್ರಿಕೆಯ ಜನಪ್ರಿಯತೆಯನ್ನು ತಿಳಿದೂ ಇಂತಹ ಜನಪ್ರಿಯತೆಯನ್ನು ಕುಗ್ಗಿಸುವ ದುರುದ್ದೇಶಗಳಿಂದ ಹೀನ ಕೃತ್ಯ ಎಸಗಿದ್ದಾರೆ.

ಇಡೀ ರಾಜ್ಯಕ್ಕೆ ತಿಳಿದಿರುವ ಸುದ್ದಿ ಬಿಡುಗಡೆ ಪತ್ರಿಕಾ ಮಾಧ್ಯಮದವರು ಸಾರ್ವಜನಿಕ ಹಿತಾಸಕ್ತಿಯಿಂದ ನಡೆಸುವ ಸಾಮಾಜಿಕ ಚಟುವಟಿಕೆಗಳು, ಸಾಮಾಜಿಕ ಕಳಕಳಿಯ ಅಂಕಣಗಳು, ಸತ್ಯ ಸಂಗತಿಗಳ ನೇರ ಚಿತ್ರಣ ನೀಡುತ್ತಿರುವುದು, ಯಾವುದೇ ಕಾನೂನು ಬಾಹಿರ ಚಟುವಟಿಕೆ ಮಾಡದಿರುವುದು, ಆರ್ಥಿಕ ಲಾಭದ ಉದ್ದೇಶವಿಲ್ಲದೆ ಮಾಡುವ ಸಮಾಜ ಪರ ಕೆಲಸಗಳನ್ನು ಸಾರ್ವಜನಿಕರು ಮೆಚ್ಚಿಕೊಂಡಿರುವುದರಿಂದ ತನಗೆ ಹಿನ್ನಡೆಯಾಗಿರುವುದರಿಂದ ಕಂಗೆಟ್ಟು ಸತ್ಯ ಸಂಗತಿ ತಿಳಿದಿದ್ದರೂ ಉದ್ದೇಶಪೂರ್ವಕವಾಗಿ ಮನಸ್ಸಿಗೆ ತೋಚಿದಂತೆ ಮಾನಹಾನಿಕರ ಬರಹ ಪ್ರಕಟಿಸಿ ದುರ್ಲಾಭ ಪಡೆಯಲು ಯತ್ನಿಸಿದ್ದಾರೆ.

ಆದ್ದರಿಂದ ಪ್ರದೀಪ್ ಕುಮಾರ್ ಶೆಟ್ಟಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 499, 500, 501 ಮತ್ತು 502ರಂತೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಸಾಕ್ಷ್ಯಾಧಾರ ಸಹಿತ ವಾದ ಮಂಡಿಸಿದರು. ವಕೀಲರ ವಾದ ಪುರಸ್ಕರಿಸಿದ ನ್ಯಾಯಾಧೀಶ ಪ್ರಕಾಶ್‌ರವರು ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಿದ್ದಾರೆ. ವಕೀಲರಾದ ಶ್ರೀಹರಿ ಮತ್ತು ಪ್ರಸಾದ್ ಕುಮಾರ್ ರೈಯವರು ಸುಧಾಕರ್‌ರವರ ಪರ ವಾದ ಮಂಡಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.