HomePage_Banner
HomePage_Banner
HomePage_Banner
HomePage_Banner

ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಶಿವಪ್ಪ ನಾಯ್ಕ, ಕಾರ್‍ಯದರ್ಶಿ ರಾಮಚಂದ್ರ ನಾಯ್ಕ

Puttur_Advt_NewsUnder_1
Puttur_Advt_NewsUnder_1

                                                     ಶಿವಪ್ಪ ನಾಯ್ಕ ಎಸ್. ನೆಹರುನಗರ

 

                                                       ರಾಮಚಂದ್ರ ನಾಯ್ಕ ಕೇಪುಳು
                                                       ವೆಂಕಪ್ಪ ನಾಯ್ಕ ವಿದ್ಯಾನಗರ

ಪುತ್ತೂರು: ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಪುತ್ತೂರು ಇದರ 2019-20ನೇ ಸಾಲಿನ ಅಧ್ಯಕ್ಷರಾಗಿ ಶಿವಪ್ಪ ನಾಯ್ಕ ಎಸ್. ನೆಹರುನಗರ ಮತ್ತು ಕಾರ್‍ಯದರ್ಶಿಯಾಗಿ ರಾಮಚಂದ್ರ ನಾಯ್ಕ ಕೇಪುಳು ಮತ್ತು ಕೋಶಾಧಿಕಾರಿಯಾಗಿ ವೆಂಕಪ್ಪ ನಾಯ್ಕ ವಿದ್ಯಾನಗರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಯಾದ ಶಿವಪ್ಪ ನಾಯ್ಕರವರು ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಯಾಗಿದ್ದು, ಕಳೆದ ಅವದಿಯಲ್ಲಿ ಸಂಘದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಕಳೆದ ಸಾಲಿನಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮಚಂದ್ರ ನಾಯ್ಕರವರು ಮತ್ತೆ ಈ ಸಾಲಿಗೆ ಪುನರಾಯ್ಕೆಗೊಂಡಿದ್ದಾರೆ. ಇವರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ನಿವೃತ್ತ ಉದ್ಯೋಗಿ. ಕೋಶಾಧಿಕಾರಿ ವೆಂಕಪ್ಪ ನಾಯ್ಕರವರು ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಉದ್ಯೋಗಿ. ಉಪಾಧ್ಯಕ್ಷರಾಗಿ ಪೂವಪ್ಪ ನಾಯ್ಕ ಕುಂಞಕುಮೇರು ಅವರು ಪುನರಾಯ್ಕೆಗೊಂಡಿದ್ದಾರೆ. ಉಳಿದಂತೆ ಜತೆ ಕಾರ್ಯದರ್ಶಿಯಾಗಿ ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಉದ್ಯೋಗಿ ಬಾಲಕೃಷ್ಣ ನಾಯ್ಕ ತೆಂಕಿಲ, ಸಂಘಟನಾ ಕಾರ್ಯದರ್ಶಿಗಳಾಗಿ ಅಶೋಕ್ ಬಲ್ನಾಡು, ನಾರಾಯಣ ನಾಯ್ಕ ಸಾಜ, ಬಾಬು ನಾಯ್ಕ ಕೊಳ್ತಿಗೆ ಮತ್ತು ಶ್ಯಾಮ್‌ಶ್ರವಣ್ ಕಾವು ಆಯ್ಕೆಯಾಗಿದ್ದಾರೆ. ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ಜೂ. 23ರಂದು ನಡೆದ 36 ಮಂದಿ ಕಾರ್‍ಯಕಾರಿ ಸಮಿತಿ ಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಡಾ| ಗೋವಿಂದ ನಾಯ್ಕ ಕೃಷ್ಣನಗರ ಅವರು ಚುನಾವಣಾಧಿಕಾರಿಯಾಗಿ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.