Home_Page_Advt
Home_Page_Advt
Home_Page_Advt

ಜೈನ್ ಮಿಲನ್‌ನ ಮಾಸಿಕಸಭೆ, ಸಮಾಜ ಬಾಂಧವರ ಸಮಾಗಮ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಜೈನ್ ಮಿಲನ್ ಪುತ್ತೂರು ಇದರ ಮಾಸಿಕ ಸಭೆ ಹಾಗೂ ಸಮಾಜ ಬಾಂಧವರ ಸಮಾಗಮ ಕಾರ್ಯಕ್ರಮಗಳು ಜೂ. 23ರಂದು ಅಪರಾಹ್ನ ನೆಲ್ಲಿಕಟ್ಟೆ ಶ್ರೀರಾಮಕೃಷ್ಣ ಸೇವಾ ಸಮಾಜದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ದ.ಕ ಜೈನ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ ವಿಜಯ ಕುಮಾರ್ ಜೈನ್ ಮಾತನಾಡಿ, ಧರ್ಮದ ಬಗ್ಗೆ ತಪ್ಪು ಅಭಿಪ್ರಾಯಗಳಿವೆ. ದೇವಸ್ಥಾನಗಳಿಗೆ ಹೋಗುವುದೇ ಧರ್ಮವಲ್ಲ. ಮನುಷ್ಯ ಧರ್ಮವೇ ನಿಜವಾದ ಧರ್ಮ. ಯಾರಿಗೂ ತೊಂದರೆ ಆಗದಂತೆ ಬದುಕುವುದೇ ಧರ್ಮ. ಧರ್ಮದ ಸರಿಯಾದ ಅರ್ಥ ಅರಿಯದೇ ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ, ಕೊಲೆ ಮೊದಲಾದ ಸಮಾಜ ಘಾತುಕ ಕೆಲಸಗಳು ನಡೆಯುತ್ತಿರುವ ಬಗ್ಗೆ ಖೇದ ವ್ಯಕ್ತಪಡಿಸಿದ ಅವರು ನಮ್ಮದು ಅಹಿಂಸಾ ಧರ್ಮ ಪ್ರತಿಪಾದನೆಯೇ ಪ್ರಮುಖವಾಗಬೇಕು. ಜೈನ್ ಧರ್ಮದಲ್ಲಿ ಉಲ್ಲೇಖವಾದಂತೆ ಜಗತ್ತಿನ ಯಾವುದೇ ಜೀವಿಗೂ ತೊಂದರೆ ಆಗದಂತೆ ಬದುಕುವುದೇ ಪ್ರಮುಖವಾಗಿರಬೇಕು ಎಂದು ಅವರು ಹೇಳಿದರು.

ಜೈನ್ ಮಿಲನ್ ವಲಯ 8ರ ನಿರ್ದೇಶಕ ಧನ್ಯಕುಮಾರ್ ಬಿಳಿಯೂರು ಮಾತನಾಡಿ, ನಮ್ಮ ಸಮಾಜದ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸೇವಾ ಕಾರ್ಯಗಳು ನಡೆಯಬೇಕು. ಸರಕಾರದಿಂದ ದೊರೆಯುವಂತ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಹಿಂಜರಿಕೆ ಮಾಡದೆ ಸಧುಪಯೋಗಪಡಿಸಿಕೊಳ್ಳುವಲ್ಲಿ ಸಂಘಟನೆ ಸಹಕರಿಸುವಂತೆ ಅವರು ತಿಳಿಸಿದರು. ಬೆಳ್ತಂಗಡಿ ಭೂ ಅಭಿವೃದ್ಧಿ ಬ್ಯಾಂಕ್‌ನ ನಿರ್ದೇಶಕ ಜಯರಾಜ ಹೆಗ್ಡೆ ಪುತ್ತಿಲ ಮಾತನಾಡಿ, ಪುತ್ತೂರಿನಲ್ಲಿ ಜೈನ್ ಮಿಲನ್‌ನಲ್ಲಿ ಯುವಕರು ಸಾಕಷ್ಟು ಸಂಖ್ಯೆಯಲ್ಲಿದ್ದು ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಸಹಕಾರಿಯಾಗಲಿದೆ. ಪುತ್ತೂರಿನ ಬಸದಿಗೆ ಸೋಲಾರ್ ದೀಪವನ್ನು ಅಳವಡಿಸುವಂತೆ ಅವರು ಸಲಹೆ ನೀಡಿದರು. ಕಾರ್ಯಕ್ರಮದ ಆತಿಥ್ಯ ವಹಿಸಿದ್ದ ಗುಣಪಾಲ ಜೈನ್ ಮಾತನಾಡಿ, ಸಮಾಜದಲ್ಲಿ ಕಷ್ಟದಲ್ಲಿರುವ ಸಮಸ್ಯೆಗಳ ಪರಿಹರಿಸುವಲ್ಲಿ ಸಂಘಟನೆ ಸಮಾಜದ ಧ್ವನಿಯಾಗಬೇಕು. ಸಮಾಜವನ್ನು ಬಲಪಡಿಸುವ ನಿಟ್ಟಿನಲ್ಲಿ ಮುಂದಿನ ಡಿಸೆಂಬರ್‌ನಲ್ಲಿ ಜೈನ ಸಮಾಜದ ತಾಲೂಕು ಸಮಾವೇಶವನ್ನು ಆಯೋಜಿಸಿಕೊಳ್ಳಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಜೈನ್ ಮಿಲನ್ ಅಧ್ಯಕ್ಷ ರಾಜಶೇಖರ ಜೈನ್ ಮಾತನಾಡಿ, ಮಿಲನ್ ವತಿಯಿಂದ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳಿಗೂ ಸಮಾಜ ಬಾಂಧವರು ಸಹಕರಿಸುವಂತೆ ಮನವಿ ಮಾಡಿದರು.

ಸನ್ಮಾನ:
ನ್ಯಾಯವಾದಿ ನಿರ್ಮಲ್ ಕುಮಾರ್ ಜೈನ್, ಡಾ.ಅಶೋಕ್ ಕುಮಾರ್ ಪಡಿವಾಳ್, ದ.ಕ ಜೈನ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ ವಿಜಯ ಕುಮಾರ್ ಜೈನ್ ಹಾಗೂ ಬೆಳ್ತಂಗಡಿ ಭೂ ಅಭಿವೃದ್ಧಿ ಬ್ಯಾಂಕ್‌ನ ನಿರ್ದೇಶಕ ಜಯರಾಜ್ ಹೆಗ್ಡೆ ಪುತ್ತಿಲರವರನ್ನು ಸನ್ಮಾನಿಸಲಾಯಿತು. ಸಂತೃಪ್ತಿ ಪಡಿವಾಳ್ ಪ್ರಾರ್ಥಿಸಿದರು. ಯಶೋಧರ ಜೈನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸತೀಶ್ ಪಡಿವಾಳ್ ವರದಿ ವಾಚಿಸಿದರು. ಗುಣಪಾಲ ಜೈನ್ ಸ್ವಾಗತಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.