
ನರಿಮೊಗರು: ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ ವತಿಯಿಂದ ಸರ್ವೆ ಗ್ರಾಮದಲ್ಲಿ ನಡೆಯುತ್ತಿರುವ “ನೀರಿಂಗಿಸೋಣ ಬನ್ನಿ” ಅಭಿಯಾನದ 4ನೇ ಕಾರ್ಯಕ್ರಮವಾಗಿ ಯುವಕ ಮಂಡಲದ ಗೌರವ ಸಲಹೆಗಾರ ಶಶಿಧರ್. ಎಸ್. ಡಿ.ರವರ ಜಮೀನಿನಲ್ಲಿ ನೀರಿಂಗಿಸಲು ಬೃಹತ್ ಹೊಂಡ ನಿರ್ಮಿಸಲಾಯಿತು.
ಶಶಿಧರ್. ಎಸ್. ಡಿ.ರವರು ಮಾತನಾಡಿ, ಯುವಕ ಮಂಡಲದ ಗೌರವ ಸಲಹೆಗಾರನ ನೆಲೆಯಲ್ಲಿ ನನ್ನ ಜಮೀನಿನಲ್ಲಿ ಬೀಳುವ ಮಳೆಯ ನೀರು ಪೋಲಾಗದಂತೆ ಭೂಮಿಗೆ ಇಂಗಿಸುವ ಸಲುವಾಗಿ ಯುವಕ ಮಂಡಲದ ಅಭಿಯಾನಕ್ಕೆ ಪೂರಕವಾಗಿ ಇಂಗುಗುಂಡಿ ನಿರ್ಮಿಸಿದ್ದೇನೆ. ಅಭಿಯಾನದ ಭಾಗವಾಗಿ ಯುವಕ ಮಂಡಲದ ಎಲ್ಲ 45 ಸದಸ್ಯರ ಮನೆಗಳಲ್ಲಿ ಕೂಡ ಸಣ್ಣ ಅಥವಾ ದೊಡ್ಡ ಇಂಗುಗುಂಡಿಗಳ ನಿರ್ಮಾಣವಾಗಬೇಕು ಎಂದರು.

ಕಾರ್ಯಕ್ರಮ ಸಂಯೋಜಕರಾದ ನಾಗೇಶ್ ಪಟ್ಟೆಮಜಲು ಕಾರ್ಯಕ್ರಮ ಸಂಯೋಜಿಸಿದರು. ಯುವಕ ಮಂಡಲದ ಗೌರವಾಧ್ಯಕ್ಷರು ಹಾಗೂ ಮುಂಡೂರು ಗ್ರಾಮ ಪಂ. ಅಧ್ಯಕ್ಷರಾದ ವಸಂತ್ ಎಸ್ ಡಿ, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾದ ಸುಬ್ರಮಣ್ಯ ಕರಂಬಾರು, ಯುವಕ ಮಂಡಲದ ಅಧ್ಯಕ್ಷರಾದ ಕಮಲೇಶ್ ಸರ್ವೆದೋಳಗುತ್ತು, ಪ್ರ.ಕಾರ್ಯದರ್ಶಿ ತಿಲಕ್ ರಾಜ್ ಕರಂಬಾರು, ಗೌರವ ಸಲಹೆಗಾರರಾದ ಶಶಿಧರ್ ಎಸ್ ಡಿ, ಮಾಜಿ ಅಧ್ಯಕ್ಷರಾದ ಸುರೇಶ್ ಸರ್ವೆದೋಳಗುತ್ತು, ಪದಾಧಿಕಾರಿಗಳಾದ ಶರೀಫ್ ಎಸ್ ಎಂ, ರಾಮಣ್ಣ ಪೂಜಾರಿ ವಿಜಯ ಬ್ಯಾಂಕ್, ಡಾ. ಪ್ರವೀಣ್ ಸರ್ವೆದೋಳಗುತ್ತು, ಅಶೋಕ್ ಎಸ್ ಡಿ, ಕಿಶೋರ್ ಸರ್ವೆದೋಳಗುತ್ತು, ಕೀರ್ತನ್ ಸರ್ವೆದೋಳಗುತ್ತು, ಗೌತಮ್ ರಾಜ್ ಕರಂಬಾರು, ಜಯರಾಜ್ ಸುವರ್ಣ ಸೊರಕೆ, ಮನೋಜ್ ಸುವರ್ಣ ಸೊರಕೆ, ಸದಸ್ಯರಾದ ವಸಂತ ಪೂಜಾರಿ ಕೈಪಂಗಳದೋಳ, ರಾಮಕೃಷ್ಣ ಸರ್ವೆದೋಳಗುತ್ತು, ನಂದನ್ ಸರ್ವೆದೋಳಗುತ್ತು, ಯೋಗೀಶ್ ಮಡಿವಾಳ ಕಲ್ಪಣೆ, ಲಕ್ಷ್ಮಣ ಆಚಾರ್ಯ ಭಕ್ತಕೋಡಿ, ಅರುಣ್ ಕೆ ಜೆ, ಸರ್ವೆ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಉಮಾವತಿ ಜಯರಾಜ್ ಸುವರ್ಣ, ಗೀತಾ ಮರಿಯ, ದೇವಕಿ ಯೋಗೀಶ್, ಮಾಜಿ ಪಂಚಾಯತ್ ಸದಸ್ಯರಾದ ಯತೀಶ್ ರೈ ಮೇಗಿನಗುತ್ತು, ಸಾಮಾಜಿಕ ಕಾರ್ಯಕರ್ತ ಧನಂಜಯ ಕುಲಾಲ್ ಮುಂಡೂರು, ವಿಶ್ವನಾಥ್ ಗೌಡ ಮೊದಲಾದವರು ಭಾಗವಹಿಸಿದರು.