

ನಿಡ್ಪಳ್ಳಿ: ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಮಂತ್ರಿಯಾಗಿ ಏಳನೇ ತರಗತಿಯ ಅಬ್ದುಲ್ ನಾಸಿರ್ ಹಾಗೂ ಉಪ ಮುಖ್ಯ ಮಂತ್ರಿಯಾಗಿ ಫಾತಿಮಾ ಅನಾಪರ್ಷಿನಾ ಆಯ್ಕೆಯಾದರು. ಚುನಾವಣಾ ಮೂಲಕ ಇವರ ಆಯ್ಕೆ ಮಾಡಲಾಯಿತು.
ಉಸ್ತುವಾರಿ ಮಂತ್ರಿಯಾಗಿ ರೋಹಿತ್ ಕುಮಾರ್, ಅಕ್ಮಲ್.ಬಿ, ಸಾಂಸ್ಕೃತಿಕ ಮಂತ್ರಿಯಾಗಿ ಲಿಖಿತಾ, ವಿಭಾಶ್ರೀ, ಕ್ರೀಡಾ ಮಂತ್ರಿಯಾಗಿ ಮಹಮ್ಮದ್ ಅಲಿಅನ್ಸಾದ್, ಧನುಷ್, ಅರೋಗ್ಯ ಮಂತ್ರಿಯಾಗಿ ರೆಹನಾ ಶಮ್ರಿನಾ, ಫಾತಿಮಾತ್ ತೌಸೀಫ್, ನೀರಾವರಿ ಮಂತ್ರಿಯಾಗಿ ರಂಜಿತ್, ರೋಹನ್, ಪರಿಸರ ಅನಾಪರ್ಷಿನಾ, ಪೂರ್ವಿ, ವಿದ್ಯಾಮಂತ್ರಿಯಾಗಿ ಧನ್ಯಶ್ರೀ, ಆಯಿಷಾತ್ ಹಿಬಾ, ಅಕ್ಷರ ದಾಸೋಹ ಶ್ರೇಯಾ, ಸನತ್ ಕುಮಾರ್, ವಿರೋಧ ಪಕ್ಷದ ನಾಯಕರಾಗಿ ನಿಕೇತ್, ಪವಿತ್ರಾ ಮತ್ತು ಜೀವಿಕಾ ಇವರನ್ನು ಆರಿಸಲಾಯಿತು.
ಮುಖ್ಯ ಶಿಕ್ಷಕಿ ಲಿಂಗಮ್ಮರವರ ಮಾರ್ಗದರ್ಶನದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಸಹಶಿಕ್ಷಕಿಯರಾದ ಪುಷ್ಪಾ.ಕೆ.ಅರ್, ಸರಿತಾ, ಮಮತಾ ಸಹಕರಿಸಿದರು.