ನಿಡ್ಪಳ್ಳಿ: ಇತ್ತೀಚೆಗೆ ನೀರಿನ ಟ್ಯಾಂಕಿಗೆ ಆಕಸ್ಮಿಕವಾಗಿ ಬಿದ್ದು ಮರಣ ಹೊಂದಿದ ಬೆಟ್ಟಂಪಾಡಿ ಗ್ರಾಮದ ಉಡ್ಡಂಗಳದ ಎರಡು ಕುಟುಂಬದ ಮಕ್ಕಳ ಹೆತ್ತವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಬಿಡುಗಡೆಗೊಳಿಸಿದ ಸಾಂತ್ವನ ಪರಿಹಾರ ಮೊತ್ತದ ಚೆಕ್ಕನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಜೂ. 23ರಂದು ಹಸ್ತಾಂತರಿಸಿದರು.
ಬೆಟ್ಟಂಪಾಡಿ ಒಕ್ಕೂಟದ ಅಶ್ವಿನಿ ಸ್ವಸಹಾಯ ಸಂಘದ ಸದಸ್ಯೆ ಕಾವೇರಿ ರವಿ ಕುಲಾಲ್ ರವರಿಗೆ 10 ಸಾವಿರ ಮತ್ತು ರಶ್ಮೀ ಸ್ವಸಹಾಯ ಸಂಘದ ಸದಸ್ಯೆ ಅರುಣಾ ಹರೀಶ್ ಕುಲಾಲ್ ರವರಿಗೆ 20 ಸಾವಿರದ ಚೆಕ್ಕನ್ನು ಹಸ್ತಾಂತರಿಸಿದರು. ಪುತ್ತೂರು ಯೋಜನಾಧಿಕಾರಿ ಜನಾರ್ದನ ಎಸ್, ಸೇವಾ ಪ್ರತಿನಿಧಿ ಜಗನ್ನಾಥ ಪಾಟಾಳಿ ಉಪಸ್ಥಿತರಿದ್ದರು.