HomePage_Banner
HomePage_Banner
HomePage_Banner

ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿರುವ ಪುತ್ತೂರು ಲಯನ್ಸ್‌ಕ್ಲಬ್

Puttur_Advt_NewsUnder_1
Puttur_Advt_NewsUnder_1
  • ಜೂ. 25 ನೂತನ ಅಧ್ಯಕ್ಷ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಪುತ್ತೂರು: ಪ್ರಪಂಚದ ಅತಿ ದೊಡ್ಡ ಸೇವಾ ಸಂಸ್ಥೆಯಾದ ಲಯನ್ಸ್ ಕ್ಲಬ್ ಪುತ್ತೂರಿನಲ್ಲಿ ಕಳೆದ 49 ವರ್ಷಗಳಿಂದ ಸಕ್ರಿಯವಾಗಿ ಹಲವು ವಿವಿಧ ಸೇವಾ ಕಾರ್ಯ ನಡೆಸುತ್ತಾ ಬಂದಿದ್ದು, ಇದೀಗ ಸುವರ್ಣ ಮಹೋತ್ಸವದ ಹೊಸ್ತಿಲಿಗೆ ಕಾಲಿರಿಸಿದೆ. ಇದೇ ಸಂದರ್ಭದಲ್ಲಿ 2019-20ನೇ ಸಾಲಿನ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಜೂ. 25ರಂದು ನಡೆಯಲಿದೆ.

ಸವಣೂರು ಎನ್.ಸಂಕಪ್ಪ ಶೆಟ್ಟಿ, ವಾರಿಜ ದಂಪತಿ ಪುತ್ರ ಶಿವಪ್ರಸಾದ್ ಶೆಟ್ಟಿ ಅವರು ನೂತನ ಅಧ್ಯಕ್ಷರಾಗಿ, ದಿ. ಕುಂಜ್ಞಣ್ಣ ಗೌಡ, ದಿ. ಕಮಲಾವತಿ ದಂಪತಿ ಪುತ್ರ ಹರಿಪ್ರಸಾದ್ ಅವರು ಕಾರ್ಯದರ್ಶಿಯಾಗಿ, ವಿಜಯ ಬ್ಯಾಂಕ್‌ನ ಅಧಿಕಾರಿಯಾಗಿದ್ದ ದಿ. ಸಂಜೀವ ಶೆಟ್ಟಿ ಅವರ ಪತ್ನಿ ಜಯಶ್ರಿ ಎಸ್ ಶೆಟ್ಟಿಯವರು ಕೋಶಾಧಿಕಾರಿಯಾಗಿ ಈಗಾಗಲೇ ನಿಯೋಜಿತರಾಗಿ ಆಯ್ಕೆಗೊಂಡಿದ್ದು ಜೂ. 25ರ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಪಡೆದುಕೊಳ್ಳಲಿದ್ದಾರೆ. ವಂಗಳೂರು ಲಯನ್ಸ್ ಕ್ಲಬ್  ಅಧ್ಯಕ್ಷ ವಿಜಯ ವಿಷ್ಣು ಮಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪದಗ್ರಹಣ ನಡೆಸಿಕೊಡಲಿದ್ದಾರೆ ಎಂದು ಲಯನ್ಸ್ ಕ್ಲಬ್ ಪ್ರಕಟಣೆ ತಿಳಿಸಿದೆ.

                                                                             ಶಿವಪ್ರಸಾದ್

ಶಿವಪ್ರಸಾದ್ ಶೆಟ್ಟಿ:
ಸವಣೂರು ಎನ್.ಸಂಕಪ್ಪ ಶೆಟ್ಟಿ, ವಾರಿಜ ಶೆಟ್ಟಿ ದಂಪತಿ ಪುತ್ರ ಶಿವಪ್ರಸಾದ್ ಶೆಟ್ಟಿಯವರು ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ನೀಡಿದ್ದಾರೆ. ಪುತ್ತೂರಿನಲ್ಲಿ ಪ್ರಸಾದ್ ಇಂಡಸ್ಟ್ರೀಸ್ ಹೊಂದಿರುವ ಇವರು ಪುತ್ತೂರಿನಲ್ಲಿ ಮಹೇಶ್‌ಪ್ರಸಾದ್, ಗಣೇಶ್ ಪ್ರಸಾದ್, ಕೃಷ್ಣಪ್ರಸಾದ್ ಎಂಬ ವಾಣಿಜ್ಯ ಸಂಕೀರ್ಣ ಹೊಂದಿದ್ದಾರೆ. ಇವರ ಪತ್ನಿ ಸುಜಾತಾ ಶೆಟ್ಟಿ, ಪುತ್ರ ಶ್ರವಣ ಕುಮಾರ್, ಪುತ್ರಿ ಶಾಯರಿ ಶೆಟ್ಟಿಯವರೊಂದಿಗೆ ಸುಖಿ ಸಂಸಾರ ನಡೆಸುತ್ತಿದ್ದಾರೆ.

                                                                      ಹರಿಪ್ರಸಾದ್

ಹರಿಪ್ರಸಾದ್:
ಎಲೆಕ್ಟ್ರಿಕಲ್ ಗುತ್ತಿಗೆದಾರರಾಗಿರುವ ಹರಿಪ್ರಸಾದ್ ಅವರು ಪುತ್ತೂರಿನ ಸಾಮೆತ್ತಡ್ಕದಲ್ಲಿ ವಾಸ್ತವ್ಯ ಹೊಂದಿದ್ದು, ಇವರು ದಿ. ಕುಂಜ್ಞಣ್ಣ ಗೌಡ ಮತ್ತು ದಿ. ಕಮಲಾವತಿ ಅವರ ಪುತ್ರರಾಗಿದ್ದಾರೆ. ಇವರು ವಿದ್ಯುತ್ ಗುತ್ತಿಗೆದಾರರ ಸಂಘದಲ್ಲಿ ಸಕ್ರೀಯರಾಗಿದ್ದು, ಹಲವಾರು ಸಂಘ ಸಂಸ್ಥೆಗಳನ್ನು ತೊಡಗಿಸಿಕೊಂಡಿದ್ದಾರೆ. ಇವರ ಪತ್ನಿ ಉಷಾ, ಪುತ್ರಿ ಆಧ್ಯಾ ಪ್ರಸಾದ್, ಪುತ್ರ ಅಧ್ವಿಕ್ ಪ್ರಸಾದ್ ಅವರೊಂದಿಗೆ ಸಾಮೆತ್ತಡ್ಕದಲ್ಲಿ ವಾಸ್ತವ್ಯ ಹೊಂದಿದ್ದಾರೆ.

                                                                                ಜಯಶ್ರೀ

ಜಯಶ್ರೀ ಎಸ್ ಶೆಟ್ಟಿ:
ವಿಜಯ ಬ್ಯಾಂಕ್‌ನ ಅಧಿಕಾರಿಯಾಗಿದ್ದ ದಿ. ಸಂಜೀವ ಶೆಟ್ಟಿಯವರ ಪತ್ನಿಯಾಗಿರುವ ಜಯಶ್ರೀ ಎಸ್ ಶೆಟ್ಟಿಯವರು ಹಲವಾರು ಸಂಘ ಸಂಸ್ಥೆಗಳಲ್ಲಿ ಮತ್ತು ರಾಜಕೀಯವಾಗಿ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಮಹಿಳಾ ಮೋರ್ಛಾದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಇವರ ತಂದೆ ದಿ. ಬಾಬು ಶೆಟ್ಟಿ, ತಾಯಿ ರಂಜಿನಿ ಶೆಟ್ಟಿಯಾಗಿದ್ದು, ಪ್ರಸ್ತುತ ಪರ್ಲಡ್ಕದಲ್ಲಿ ವಾಸ್ತವ್ಯ ಹೊಂದಿದ್ದಾರೆ. ಇವರು ಪುತ್ರರಾದ ಅಕ್ಷಯ್ ಶೆಟ್ಟಿ, ಅಜಯ್ ಶೆಟ್ಟಿ, ಪುತ್ರಿ ಅಂಜನಾ ಶೆಟ್ಟಿಯವರೊಂದಿಗೆ ಸುಖಿ ಸಂಸಾರ ನಡೆಸುತ್ತಿದ್ದಾರೆ.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.