ಪುತ್ತೂರು: ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳ ಮಳಿಗೆ ಬಂಧನ್ ಜೂ.24ರಂದು ಮಾರ್ಕೆಟ್ ರೋಡ್ ಸಮೀಪದ ಯೂನಿಯನ್ ಕ್ಲಬ್ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಂಡಿತು. ಸಿಂಡಿಕೇಟ್ ಬ್ಯಾಂಕ್ನ ಶಾಖಾ ವ್ಯವಸ್ಥಾಪಕ ರಾಘವೇಂದ್ರ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತಿಮ್ಮಪ್ಪ ಗೌಡ ದೀಪ ಬೆಳಗಿಸಿ ಶುಭ ಹಾರೈಸಿದರು. ನಗರ ಸಭಾ ಸದಸ್ಯ ಬಾಲಚಂದ್ರ, ಮಾಜಿ ಅಧ್ಯಕ್ಷ ಜಗದೀಶ ಶೆಟ್ಟಿ ನೆಲ್ಲಿಕಟ್ಟೆ, ರೋಷನ್ ರೆಬೆಲ್ಲೋ, ಉದಯ ನಾಕ್ ಹಾಗೂ ಫೋಟೋ ಮ್ಯಾಜಿಕ್ನ ಅಶ್ರಫ್ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು.
32 ಇಂಚಿನ ಎಲ್ಇಡಿ ಟಿವಿಗೆ ರೂ.8990, 32 ಇಂಚಿನ ಸ್ಮಾರ್ಟ್ ಎಲ್ಇಡಿ ಟಿವಿಗೆ ರೂ.12,990, 40 ಇಂಚಿನ ಎಲ್ಇಡಿ ಟಿವಿಗೆ ರೂ.16,990 ಹಾಗೂ ಸ್ಮಾರ್ಟ್ ಎಲ್ಇಡಿ ಟಿವಿ ರೂ.19,990ಗೆ ದೊರೆಯಲಿದೆ. ಜೊತೆಗೆ ವಿಶೇಷ ಗಿಫ್ಟ್ಗಳು ದೊರೆಯಲಿದೆ. ಅಲ್ಲದೆ ನಮ್ಮಲ್ಲಿ ಎಲ್ಲಾ ತರದ ಎಲೆಕ್ಟ್ರಾನಿಕ್ಸ್, ಗೃಹೋಯೋಗಿ ಸಾಮಾಗ್ರಿಗಳು, ಫರ್ನಿಚೇರ್ಗಳು ಲಭ್ಯವಿದೆ ಎಂದು ಮಾಲಕರಾದ ಸಂಜಯ್ ಮತ್ತು ಅಮರ್ನಾಥ್ ತಿಳಿಸಿದ್ದಾರೆ.