ತಾಲೂಕು ಮಹಿಳಾ ಸಂಘಟನೆ ರಚನೆ: ಸೋಲು ಗೆಲುವಿಗೆ ಲೆಕ್ಕಿಸದೆ ನ್ಯಾಯಕ್ಕಾಗಿ ಹೋರಾಟ-ಜಗದೀಶ್ ಪಾಂಡೇಶ್ವರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ದಲಿತ ಪರ ಸಂಘಟನೆಯು ಸೋಲು ಗೆಲುವನ್ನು ಲೆಕ್ಕಿಸದೆ ದಲಿತರು ಸೇರಿದಂತೆ ಸಮಾಜದಲ್ಲಿ ಶೋಷಿತರು ದೌರ್ಜನ್ಯಕ್ಕೊಳಗಾದವರ ಪರವಾಗಿ ನ್ಯಾಯಯುತ ಹೋರಾಟಕ್ಕೆ ಬದ್ದರಾಗಿದ್ದೇವೆ ಎಂದು ದ.ಕ ಜಿಲ್ಲಾ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ಸಂಚಾಲಕ ಜಗದೀಶ್ ಪಾಂಡೇಶ್ವರ ಹೇಳಿದರು.

ಅವರು ಜೂ.23 ರಂದು ಕಡಬ ಅಂಬೇಡ್ಕರ್ ಭವನದಲ್ಲಿ ನಡೆದ ತಾಲೂಕು ಮಹಿಳಾ ಸಂಘಟನೆ ರಚನೆಗೊಳಿಸಿ ಮಾತನಾಡಿದರು. ನಾವು ಸಂಘಟನಾತ್ಮಕವಾಗಿ ಬೆಳೆಯುತ್ತಿದ್ದು ಯಾರೇ ಸಮಾಜದಲ್ಲಿ ಅನ್ಯಾಯಕ್ಕೊಳಗಾದವರ ಪರವಾಗಿ ಹೋರಾಟ ನಡೆಸಿ ನ್ಯಾಯ ಒದಗಿಸಲು ಬದ್ದರಾಗಿದ್ದೇವೆ ಎಂದ ಅವರು ನಾವು ಪ್ರಾಮಾಣಿಕವಾಗಿ, ಸತ್ಯಾಸತ್ಯತೆಯ ಬಗ್ಗೆ ಪರಮರ್ಶಿಸಿ ಸತ್ಯದ ಕಡೆ ನಿಲ್ಲಬೇಕಾಗಿದೆ ಸರಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಕೂಡಾ ಎಲ್ಲರಿಗೂ ಸಿಗುವಂತೆ ಪ್ರಯತ್ನಿಸಬೇಕೆಂದರು.

ಕಡಬ ತಾಲೂಕು ಮಹಿಳಾ ಸಂಚಾಲಕರಾಗಿ ಆಯ್ಕೆಗೊಂಡ ಸುಂದರಿ ಕಲ್ಲುಗುಡ್ಡೆಯವರು ಮಾತನಾಡಿ, ನಾವೀಗ ಕೆಲವು ಗ್ರಾಮಗಳಿಂದ ಬಂದವರಿದ್ದರೂ ಪದಾಧಿಕಾರಿಗಳಾಗಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಗೊಂಡವರು ಜಿಲ್ಲಾ ಹಾಗೂ ತಾಲೂಕು ಸಂಘಟನೆಯ ಮಾರ್ಗದರ್ಶನದಲ್ಲಿ ಪ್ರತೀ ಗ್ರಾಮಗಳಲ್ಲಿ ಗ್ರಾಮಸಮಿತಿಗಳನ್ನು ರಚಿಸುವುದಲ್ಲದೆ ತಾಲೂಕು ಸಮಿತಿಗೆ ಕೂಡಾ ಪ್ರತಿ ಗ್ರಾಮದಿಂದ ಸೇರಿಸಿಕೊಂಡು ವಿಶ್ವಾಸಾರ್ಹದಿಂದ ಎಲ್ಲರನ್ನೂ ಒಟ್ಟಾಗಿಸಿಕೊಂಡು ಪ್ರತೀ ತಿಂಗಳು ಸಭೆ ನಡೆಸುವ ಮೂಲಕ ದಲಿತರ ಮಹಿಳೆಯರ ಸಮಸ್ಯೆಗೆ ಸ್ಪಂದಿಸಲು ತಮ್ಮೆಲ್ಲರ ಸಹಕಾರ ಅತೀ ಅಗತ್ಯ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಸಂಚಾಲಕ ವಸಂತ ಕುಬುಲಾಡಿಯವರು ಮಾತನಾಡಿ, ನಮ್ಮ ದಲಿತರಿಗೆ ಸಂಕಷ್ಟ ಬಂದಾಗ ಮಾತ್ರ ಸಂಘಟನೆ ನೆನಪಾಗುತ್ತದೆ. ನಂತರ ಇಂತಹ ದಲಿತರ ಪರ ಸಂಘಟನೆಗಳ ಸಭೆಗೆ ಕರೆದರೆ ಅವರಿಗೆ ಸಮಯವೇ ಇರುವುದಿಲ್ಲ ನಾವು ಪದೇ ಪದೇ ಎಷ್ಟೇ ಕರೆ ನೀಡಿದರೂ ಕೆಲವರು ಮಾತ್ರ ಬರುತ್ತಾರೆ. ಈಗಾಗಲೇ ಇಲ್ಲಿ ಮಹಿಳಾ ಸಂಘಟನೆಯನ್ನು ಕೂಡಾ ರಚಿಸಲಾಗಿದೆ ಮುಂದಿನ ದಿನಗಳಲ್ಲಿ ನಾವು ಮಹಿಳಾ ಸಂಘಟನೆಯವರು ಒಟ್ಟಾಗಿ ತೊಂದರೆಗೊಳಗಾದವರ ಸಂಕಷ್ಟ, ದೌರ್ಜನ್ಯಕ್ಕೊಳಗಾದವರ ಪರ ಧ್ವನಿ ಎತ್ತಬೇಕಾಗಿದೆ. ಈಗಾಗಲೇ ಹಲವಾರು ಸೌಲಭ್ಯಗಳನ್ನು ನಮ್ಮ ಹೋರಾಟದ ಫಲವಾಗಿ ನಮ್ಮ ಸಮಾಜದವರು ಪಡೆದುಕೊಂಡಿದ್ದಾರೆ, ಮುಂದೆ ತಾವೆಲ್ಲರೂ ಸಂಘಟನೆ ಬಲಪಡಿಸುವಲ್ಲಿ ಸಹಕರಿಸಬೇಕೆಂದ ಅವರು ಮಹಿಳಾ ಸಂಘಟನೆ ಬಲ ವರ್ಧನೆಯಾಗಲಿ ಎಂದು ಹಾರೈಸಿದರು.

ಕಡಬ ತಾಲೂಕು ಸಂ.ಸಂಚಲಕ ಆನಂದ ಹೊಸ್ಮಠರವರು ಜಿಲ್ಲಾ ಸಂ.ಸಂಚಾಲಕರಾಗಿ ಆಯ್ಕೆಗೊಂಡಿದ್ದು ಅವರ ಸ್ಥಾನಕ್ಕೆ ರಮೇಶ್ ಕಡಬರನ್ನು ಆಯ್ಕೆ ಮಾಡಲಾಯಿತು. ನೂತನವಾಗಿ ಆಯ್ಕೆಗೊಂಡ ಸಂಘಟನಾ ಸಂಚಾಲಕಿ ಕಡಬ ಗ್ರಾ.ಪಂ ಮಾಜಿ ಸದಸ್ಯೆ ಜಾನಕಿಪಟ್ನ, ರಾಘವ ಕಳಾರ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಮೈಸೂರು ವಿಭಾಗೀಯ ಸಂಚಾಲಕ ವಸಂತ ಬಿ. ಕೆ, ಜಿಲ್ಲಾ ಸಂಘಟನಾ ಸಂಚಾಲಕ ಗಂಗಾಧರ ಕೆ, ಮಂಗಳೂರು ತಾಲೂಕು ಸಂಘಟನಾ ಸಂಚಾಲಕ ಚಂದ್ರ ಕೆ, ನೂಜಿಬಾಳ್ತಿಲ ಗ್ರಾ.ಪಂ ಸದಸ್ಯೆ ಜಾನಕಿ ಕಲ್ಲುಗುಡ್ಡೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆನಂದ ಹೊಸ್ಮಠ ಸ್ವಾಗತಿಸಿ, ಭವಾನಿ. ಕೆ ವಂದಿಸಿದರು. ಚಂದ್ರಹಾಸ ಕೆ.ಜೆ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.