HomePage_Banner
HomePage_Banner
HomePage_Banner

ಇಂದ್ರಪ್ರಸ್ಥ ವಿದ್ಯಾಲಯದಲ್ಲಿ – ಬ್ಯಾಗ್ ರಹಿತ ದಿನ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ : ನಿತ್ಯನೂತನ ಚಟುವಟಿಕೆಗಳಿಗೆ ಹೆಸರಾದ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಜೂ. 22ರಂದು 2019-20 ರ ಶೈಕ್ಷಣಿಕ ಸಾಲಿನ ಬ್ಯಾಗ್ ರಹಿತ ದಿನ (NO BAG DAY)ವನ್ನು ಆಚರಿಸಲಾಯಿತು.

ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿದ ಶಾಲಾ ಪ್ರಾಂಶುಪಾಲ ರವೀಂದ್ರ ಡಿ ವಿದ್ಯಾರ್ಥಿಗಳೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬ್ಯಾಗ್ ರಹಿತ ದಿನದ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿಗಳೆಲ್ಲರು ಈ ದಿನದಂದು ಶಾಲೆಗೆ ರಜೆ ಮಾಡದೆ ಶಾಲೆಯಲ್ಲಿ ನಡೆಯುವ ಪಠ್ಯೇತ್ತರ ಚಟುವಟಿಕೆಯಲ್ಲಿ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಹುರಿದುಂಬಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಉಪಪ್ರಾಂಶುಪಾಲ ಜೋಸ್ ಎಂ.ಜೆ ರವರು ವಿದ್ಯಾರ್ಥಿಗಳಿಗೆ ಸಮಯದ ಸದುಪಯೋಗ ಮಾಡಿಕೊಂಡು ಪಠ್ಯೇತ್ತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಶಿಕ್ಷಕರು ಮಾದರಿಯಾಗಿರುತ್ತಾರೆ. NO BAG DAY ಎಂಬ ಶೀರ್ಷಿಕೆಯಡಿಯಲ್ಲಿ ಪ್ರಾಥಮಿಕ ವಿಭಾಗದ ಶಿಕ್ಷಕರು ನಾಟಕ ಪ್ರದರ್ಶನ ಮಾಡಿ ಹಾಸ್ಯದೊಂದಿಗೆ ಬ್ಯಾಗ್ ರಹಿತ ದಿನದ ಮಹತ್ವವನ್ನು ಸಾರಿದರು ನಂತರ ಒಂದನೇ ತರಗತಿಯಿಂದ ಏಳನೇ ತರಗತಿ ವಿದ್ಯಾರ್ಥಿಗಳನ್ನು ಗುಂಪುಗಳನ್ನಾಗಿ ಮಾಡಿ ಸಂಗೀತ, ಅಭಿನಯ ಗೀತೆ, ಆಟ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಏಳನೇ ತರಗತಿಯ ಫಾತಿಮತುಲ್ ಅಕ್ಸಾ ಹಾಗೂ ಅಧಿತಿ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. 2ನೇ ತರಗತಿಯ ನವೀಶ್ ಸ್ವಾಗತಿಸಿ, 6ನೇ ತರಗತಿಯ ಸನಿಯ್ಯಾ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.