HomePage_Banner
HomePage_Banner
HomePage_Banner

ಪುತ್ತೂರು ನ್ಯಾಯಾಲಯಕ್ಕೆ ಎಸ್‌ಪಿಪಿಯಾಗಿ ಪುಷ್ಪರಾಜ ಅಡ್ಯಂತಾಯ ನೇಮಕ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪೋಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಪ್ರಾಸಿಕ್ಯೂಶನ್ ಪರ ವಾದಿಸಲು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವಿಶೇಷ ಸರಕಾರಿ ಅಭಿಯೋಜಕರಾಗಿ ಕೆ. ಪುಷ್ಪರಾಜ ಅಡ್ಯಂತಾಯ ಕುದ್ರಿಯರವರರು ನೇಮಕಗೊಂಡಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ ಅಧಿನಿಯಮ(ಪೋಕ್ಸೋ) 2012ರ ಕಲಂಗಳಡಿ ದಾಖಲಾದ ಪ್ರಕರಣಗಳಲ್ಲಿ ಕಾರ್ಯ ನಿರ್ವಹಿಸಲು ಸದ್ರಿ ಅಧಿ ನಿಯಮದ ಕಲಂ-32ರಡಿಯಲ್ಲಿ ನಿವೃತ್ತ ಸರಕಾರಿ ಅಭಿಯೋಜಕರಾದ ಕೆ.ಪುಷ್ಪರಾಜ ಅಡ್ಯಂತಾಯರವರನ್ನು ಈ ಕೂಡಲೇ ಜಾರಿಗೆ ಬರುವಂತೆ ನೇಮಿಸಿ ಮತ್ತು ಮುಂದಿನ ಆದೇಶದವರೆಗೆ ನೇಮಕಗೊಳಿಸಿ ಆದೇಶಿಸಿರುವುದಾಗಿ ಕರ್ನಾಟಕ ಸರಕಾರದ ಒಳಾಡಳಿತ ಇಲಾಖೆಗಳ ಅಧೀನ ಕಾರ್ಯದರ್ಶಿ ಎ. ವಿಜಯ ಕುಮಾರ್‌ರವರು ಅಧಿಸೂಚನೆ ಹೊರಡಿಸಿದ್ದಾರೆ. ಬಂಟ್ವಾಳ ತಾಲೂಕಿನ ಕುದ್ರಿಯದವರಾದ ಪುಷ್ಪರಾಜ ಅಡ್ಯಂತಾಯರವರು ಬಿ.ಎ., ಎಲ್‌ಎಲ್‌ಬಿ ಪದವೀಧರರಾಗಿದ್ದು 1984ರಿಂದ 1994ರವರೆಗೆ ಕ್ರಿಮಿನಲ್ ಮತ್ತು ಸಿವಿಲ್ ನ್ಯಾಯವಾದಿಯಾಗಿ ಕಾರ್ಯ ನಿರ್ವಹಿಸಿದ್ದರು. 1994ರ ಜೂನ್ 23ರಿಂದ 2019ರ ಎಪ್ರಿಲ್ 30ರವರೆಗೆ ಮಂಗಳೂರಿನ ನ್ಯಾಯಾಲಯದಲ್ಲಿ ಪ್ರಿನ್ಸಿಪಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಇದೀಗ ಅವರನ್ನು ಪುತ್ತೂರಿನ 5ನೇ ಹೆಚ್ಚುವರಿ ನ್ಯಾಯಾಲಯಕ್ಕೆ ನಿಯುಕ್ತಿಗೊಳಿಸಲಾಗಿದೆ. ಪುಷ್ಪರಾಜ ಅಡ್ಯಂತಾಯರವರು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈಯವರ ಸಹೋದರ, ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ದಿ. ಕೆ. ರಮಾನಂದ ರೈವರ ಪುತ್ರಿ ಅನಿತಾರವರ ಪತಿ. ಬಂಟ್ವಾಳ ಕುದ್ರಿಯದಲ್ಲಿ ಪತ್ನಿ ಅನಿತಾ, ಪುತ್ರರಾದ ವಕೀಲ ಅತುಲ್ ಅಡ್ಯಂತಾಯ ಮತ್ತು ಇಂಜಿನೀಯರ್ ಅನೂಜ್ ಅಡ್ಯಂತಾಯರವರೊಂದಿಗೆ ವಾಸವಿರುವ ಪುಷ್ಪರಾಜ ಅಡ್ಯಂತಾಯರವರು ಜೂನ್ 26ರಂದು ಪುತ್ತೂರು ನ್ಯಾಯಾಲಯಕ್ಕೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

 

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.