Home_Page_Advt
Home_Page_Advt
Home_Page_Advt

ಕೊಣಾಲು: ತಿರ್ಲೆ ಶ್ರೀ ಮಂಜುನಾಥ ನವಜೀವನ ಸಮಿತಿ ಸಮಾಲೋಚನಾ ಸಭೆ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಕೊಣಾಲು ಗ್ರಾಮದ ತಿರ್ಲೆ ಶ್ರೀ ಮಂಜುನಾಥ ನವಜೀವನ ಸಮಿತಿ ಸಮಾಲೋಚನಾ ಸಭೆ ಗೋಳಿತ್ತೊಟ್ಟು ಸೇವಾ ಪ್ರತಿನಿಧಿಯವರ ಕಚೇರಿಯಲ್ಲಿ ಜೂ. 23 ರಂದು ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜನಜಾಗೃತಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯಾಧ್ಯಕ್ಷ ಜಯಾನಂದ ಬಂಟ್ರಿಯಾಲ್‌ರವರು ಮಾತನಾಡಿ, ಮುಂದಿನ ದಿನಗಳಲ್ಲಿ ನವಜೀವನ ಸಮಿತಿಯನ್ನು ಬಲಪಡಿಸಿಕೊಂಡು ತಿಂಗಳಲ್ಲಿ ನಡೆಯುವ ಮನೆ ಮನೆ ಭಜನೆ ಹಾಗೂ ವಾರದಲ್ಲಿ 1 ದಿನ ನಡೆಯುವ ಸದಸ್ಯರ ಸಭೆಯಲ್ಲಿ ಎಲ್ಲರೂ ಭಾಗವಹಿಸಬೇಕು. ಸಮಿತಿಯಿಂದ ಹೊರಗುಳಿದಿರುವ ಸದಸ್ಯರುಗಳನ್ನು ಸೇರ್ಪಡೆಗೆ ಸಂಬಂಧಿಸಿ ಮನೆ ಮನೆ ಭೇಟಿ ನಡೆಸಬೇಕೆಂದು ಹೇಳಿದರು. ಕೊಣಾಲು ಒಕ್ಕೂಟದ ಅಧ್ಯಕ್ಷ ವಿಶ್ವನಾಥ ಕುಲಾಲ್‌ರವರು ಅಧ್ಯಕ್ಷತೆ ವಹಿಸಿದರು. ನೆಲ್ಯಾಡಿ ವಲಯ ನವಜೀವನ ಸಮಿತಿ ಅಧ್ಯಕ್ಷ ಸುಂದರ ಪಾಲೇರಿ, ನೆಲ್ಯಾಡಿ ವಲಯ ಭಜನಾ ಮಂಡಳಿ ಅಧ್ಯಕ್ಷ ನೋಣಯ್ಯ ಗೌಡ ಡೆಬ್ಬೇಲಿ, ನೋಣಯ್ಯ ಶೆಟ್ಟಿ ಮರಂದೆ, ಸೀತಾರಾಮ ಶೆಟ್ಟಿ ಏಡ್ಮೆ, ರಾಮಚಂದ್ರ ಪಾಲೇರಿ, ಬಾಬು ಪಾಲೇರಿ, ಸೀತಾರಾಮ ಶೆಟ್ಟಿ ಮರಂದೆ ಮತ್ತಿತರರು ಉಪಸ್ಥಿತರಿದ್ದರು. ನವಜೀವನ ಕೊಣಾಲು ಗ್ರಾಮ ಸಮಿತಿ ಅಧ್ಯಕ್ಷ ಪುರಂದರ ಅಂಬರ್ಜೆ ಸ್ವಾಗತಿಸಿ, ಸೇವಾಪ್ರತಿನಿಧಿ ನೇಮಿರಾಜ ಕಲಾಯಿ ವಂದಿಸಿದರು. ನವಜೀವನ ತಾಲೂಕು ಸಮಿತಿ ಅಧ್ಯಕ್ಷ ಸುಂದರ ಪಾಲೇರಿ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.