HomePage_Banner
HomePage_Banner
HomePage_Banner

ಪಡುಬೆಟ್ಟು: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1


ನೆಲ್ಯಾಡಿ: ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಪಡುಬೆಟ್ಟು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಗಂಗಾಧರ ಶೆಟ್ಟಿಯವರು ವೈಯಕ್ತಿಕವಾಗಿ ವಿದ್ಯಾರ್ಥಿಗಳಿಗೆ ಹಾರಾರ್ಪಣೆ, ಶಾಲು ಹಾಕಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಪಡುಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದುಕೊಂಡ ನಿತೀಶ್ ಎಂ.,(607), ಚೈತ್ರಾ(553), ಲತಾ ಆರ್.,(531),ಅಂಜಿತಾ ಬಿ.ಜೆ.,(523)ರವರನ್ನು ಗಂಗಾಧರ ಶೆಟ್ಟಿಯವರು ಸನ್ಮಾನಿಸಿದರು. ಬಳಿಕ ಮಾತನಾಡಿ, ಯಾವುದೇ ಟ್ಯೂಶನ್ ಇಲ್ಲದೇ ಶಿಕ್ಷಕರ ಹಾಗೂ ಹೆತ್ತವರ ಪೋತ್ಸಾಹದಿಂದ ವಿದ್ಯಾರ್ಥಿಗಳು ಶ್ರಮಪಟ್ಟು ಕಲಿತು ಉತ್ತಮ ಸಾಧನೆಗೈದಿರುವುದು ಗ್ರಾಮಕ್ಕೆ ಹೆಮ್ಮೆಯ ವಿಚಾರವಾಗಿದೆ. ಈ ಶಾಲೆಯ ಮುಖ್ಯಶಿಕ್ಷಕಿ ಹೇಮಾವತಿ ಮತ್ತು ಶಿಕ್ಷಕವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿಯ ಪ್ರೋತ್ಸಾಹದಿಂದ ಪಡುಬೆಟ್ಟು ಪ್ರೌಢಶಾಲೆಗೆ ಉತ್ತಮ ಫಲಿತಾಂಶ ಬಂದಿದೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದಪ್ಪ ಗೌಡ ಶುಭಹಾರೈಸಿದರು. ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಹೇಮಾವತಿ ಸ್ವಾಗತಿಸಿ, ಶಿಕ್ಷಕ ಮಂಜುನಾಥ್ ವಂದಿಸಿದರು. ಶಿಕ್ಷಕರಾದ ಕುಶಾಲಪ್ಪ, ಮಸ್ಜೀದ್ ಆಲಿ ಮಾಹಿತಿ ನೀಡಿದರು. ಶಿಕ್ಷಕ ಜಯಪ್ಪ ಕಾರ್‍ಯಕ್ರಮ ನಿರೂಪಿಸಿದರು.

(ಫೋಟೋ ಇದೆ-ಪಡುಬೆಟ್ಟು)

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.