Home_Page_Advt
Home_Page_Advt
Home_Page_Advt

ಅರಿಯಡ್ಕ: ಯೋಗ ದಿನಾಚರಣೆ – ಯೋಗ ಶಿಬಿರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಯುವ ಕಾರ್ಯ ಕ್ರೀಡಾ ಸಚಿವಾಲಾಯ ನೆಹರು ಯುವ ಕೇಂದ್ರ ಮಂಗಳೂರು ಹಾಗೂ ಯುವಜನ ಒಕ್ಕೂಟ ಇದರ ಸಹಯೋಗದಲ್ಲಿ ತಾಲೂಕು ಅತ್ಯುತ್ತಮ ಯುವ ಸಂಸ್ಥೆ ಪ್ರಶಸ್ತಿ ಪುರಸ್ಕೃತ ವಿವೇಕಾನಂದ ಯುವಕ ವೃಂದ ಕೌಡಿಚ್ಚಾರ್ ಅರಿಯಡ್ಕ ಇದರ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಯೋಗ ಶಿಬಿರ ಜೂ.21 ರಂದು ಪಾಪೆಮಜಲು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಯೋಗಶಿಕ್ಷಕ ನವೀನ್ ಕುಮಾರ್ ಯೋಗಶಿಬಿರ ಉದ್ಘಾಟಿಸಿದರು. ನಂತರ ಸತತ 3 ದಿನಗಳ ಕಾಲ ಯುವಕ ವೃಂದದ ಸದಸ್ಯರು ಹಾಗೂ ಸಾರ್ವಜನಿಕರಿಗೆ ಯೋಗ ತರಬೇತಿ ನಡೆಯಿತು.

ಸಮಾರೋಪ: ಜೂ.23ರಂದು ಶಿಬಿರದ ಸಮಾರೋಪ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ಯುವಕ ವೃಂದದ ಅಧ್ಯಕ್ಷ ವಸಂತ ಕುಲಾಲ್ ಆಕಾಯಿ ಮಾತನಾಡಿ, ಯುವಕ ವೃಂದವು ಸತತವಾಗಿ 5 ವರ್ಷ ಉಚಿತ ಶಿಬಿರ ನಡೆಸುತ್ತಾ ಬರುತ್ತಿದ್ದು ಹಲವು ಸಾರ್ವಜನಿಕರು ಇದರ ಪ್ರಯೋಜನ ಪಡೆದರು ಎಂದರು. ಮಾಜಿ ಸೈನಿಕ ಅಮ್ಮಣ್ಣ ರೈ ಡಿ. ಮಾತನಾಡಿ, ಯೋಗ ಮಾಡುವನಿಗೆ ರೋಗವಿಲ್ಲ, ಹಾಗೆ ಬಡವರಿಗೂ ಸುಲಭವಾಗಿ ಯಾವುದೇ ಖರ್ಚು ಇಲ್ಲದೆಯೇ ರೋಗನಿವಾರಣೆ ಮಾಡುವುದು ಯೋಗ ಎಂದರು. ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುಬ್ರಮಣ್ಯ ಕರಂಬಾರು ಮಾತನಾಡಿ, ಸರಳವಾಗಿ ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ವಿಯಾದ ವಿವೇಕಾನಂದ ಯುವಕ ವೃಂದ ಎಲ್ಲರಿಗೂ ಮಾದರಿ ಯೋಗ ಕಾರ್ಯಕ್ರಮದ ಮುಖೇನ ಸಾಬೀತು ಎಂದರು. ಯೋಗ ತರಬೇತಿ ನೀಡಿದ ಗುರುಗಳಾದ ನವೀನ್ ಕುಮಾರ್ ರವರಿಗೆ ಗುರುವಂದನೆ ಸಲ್ಲಿಸಲಾಯಿತು. ಗುರುವಂದನೆ ಸ್ವೀಕರಿಸಿ ಮಾತನಾಡಿದ ಅವರು ಯೋಗವು ಜೂನ್ 21ಕ್ಕೆ ಸೀಮಿತವಾಗದೆ ನಿತ್ಯ ಅಳವಡಿಸಿಕೊಳ್ಳಬೇಕು ಎಂದರು.

ಯುವಕ ವೃಂದದ ಸದಸ್ಯರಾದ ಅನೂಪ್ ಕೃಷ್ಣ ಕುತ್ಯಾಡಿ ಪ್ರಾರ್ಥಿಸಿ, ಸಾಂಸ್ಕೃತಿಕ ಕಾರ್ಯದರ್ಶಿ ದೀಪಕ್ ಕುಲಾಲ್ ಆಕಾಯಿ ಸ್ವಾಗತಿಸಿದರು. ಗೌರವಾಧ್ಯಕ್ಷ ದುರ್ಗಾಪ್ರಸಾದ್ ಕುತ್ಯಾಡಿ ವಂದಿಸಿ, ಪ್ರಧಾನ ಕಾರ್ಯದರ್ಶಿ ಚರಣ್ ರಾಜ್ ಯಂ. ಡಿ. ಕಾರ್ಯಕ್ರಮ ನಿರೂಪಿಸಿದರು. ಬಾಲಕೃಷ್ಣ ಕುಲಾಲ್, ಅಪ್ಪಯ್ಯ ನಾಯ್ಕ, ಯತೀಂದ್ರ. ಕೆ, ಉದಯ ಆಕಾಯಿ, ಕೃಷ್ಣ ಕುಲಾಲ್, ಸತೀಶ್ ರೈ, ಶ್ರೀಶಾ ಮಾವಿಲಕೊಚ್ಚಿ, ಪ್ರತೀಕ್ ಆಕಾಯಿ, ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.