ಪುತ್ತೂರು: ಮಾರ್ಗ ಮಧ್ಯೆ ಬಿದ್ದು ಸಿಕ್ಕಿದ್ದ ಚಿನ್ನದ ಬ್ರೇಸ್ಲೆಟನ್ನು ವಾರೀಸುದಾರರಿಗೆ ಹಸ್ತಾಂತರಿಸುವ ಮೂಲಕ ಯುವತಿಯೋರ್ವರು ಪ್ರಾಮಾಣಿಕತೆ ಮೆರೆದಿದ್ದಾರೆ. ಪುತ್ತೂರು ಎಪಿಎಂಸಿ ರಸ್ತೆಯಲ್ಲಿರುವ ಕ್ರಿಸ್ತೋಫರ್ ಬಜಾಜ್ ಶೋರೂಮ್ನಲ್ಲಿ ಮೆಕ್ಯಾನಿಕ್ ಆಗಿರುವ ಕಲ್ಲಾರೆ ನಿವಾಸಿ ಅಶೋಕ್ರವರು ತನ್ನ ಪತ್ನಿಯೊಂದಿಗೆ ಬೈಕ್ನಲ್ಲಿ ಹೋಗುತ್ತಿದ್ದಾಗ 60 ಸಾವಿರ ರೂ. ಮೌಲ್ಯದ ಚಿನ್ನದ ಬೇಸ್ಲೆಟ್ ಕಳೆದುಕೊಂಡಿದ್ದರು.
ಈ ಬ್ರೇಟ್ಲೆಟ್ ಧನ್ವಂತರಿ ಹಾಸ್ಪಿಟಲ್ನ ಲ್ಯಾಬ್ ಟೆಕ್ನೀಶಿಯನ್ ಚಂದ್ರಿಕಾರವರಿಗೆ ಸಿಕ್ಕಿತ್ತು. ಬ್ರೆಸ್ಲೆಟ್ ಕಳೆದುಹೋಗಿರುವ ಬಗ್ಗೆ ಅಶೋಕ್ರವರು ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ನೀಡಿದ್ದ ಜಾಹೀರಾತು ಗಮನಿಸಿದ ಚಂದ್ರಿಕಾರವರು ಬಜಾಜ್ ಶೋ ರೂಮ್ಗೆ ಬಂದು ಚಿನ್ನದ ಬ್ರೇಸ್ಲೆಟನ್ನು ಅಶೋಕ್ರವರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.