ಪುತ್ತೂರು: ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಜು.21 ರಂದು ನಡೆಯಲಿರುವ ಆಟಿಟ್ ಕಂಡಟ್ ಒಂಜಿ ದಿನ ಕೆಸರುಗದ್ದೆ ಕ್ರೀಡಾಕೂಟದ ಸಮಾಲೋಚನಾ ಸಭೆ ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ನಡೆಯಿತು.
ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿವಪ್ಪ ನಾಯ್ಕ, ಆಟಿ ತಿಂಗಳ ಕ್ರೀಡಾ ಕೂಟದ ಸಂಚಾಲಕ ಮಂಜುನಾಥ ಯನ್.ಎಸ್. ಸಹ ಸಂಚಾಲಕರಾದ ಸಂದೀಪ್ ಆರ್ಯಾಪು, ಗೌರವ ಸಲಹೆಗಾರರಾದ ಸುಂದರ ನಾಯ್ಕ ಬಪ್ಪಲಿಗೆ, ಸಲಹೆಗಾರರಾದ ಪಿ.ಎಸ್. ನಾಯ್ಕ, ಆಟಿ ಕ್ರೀಡಾ ಕೂಟದ ಅಧ್ಯಕ್ಷ ಪದ್ಮಯ್ಯ ನಾಯ್ಕ ಎಲಿಯ, ಕಾರ್ಯದರ್ಶಿ ಗಿರೀಶ್ ನಾಯ್ಕ ಸೂರಕೆ, ಖಜಾಂಚಿ ಅಶೋಕ್ ನಾಯ್ಕ ಸೂರಕೆ, ಆಟಿ ಕ್ರೀಡಾ ಕೂಟದ ಸಂಘಟಕರಾದ ಅಶೋಕ್ ಬಲ್ನಾಡು, ರಾಮಚಂದ್ರ ನಾಯ್ಕ, ಪೂವಪ್ಪ ನಾಯ್ಕ ಹಾಗೂ ಯುವ ವೇದಿಕೆ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದರು.