Home_Page_Advt
Home_Page_Advt
Home_Page_Advt

ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವನಮಹೋತ್ಸವ

  • “ಪ್ರಕೃತಿ ಮೇಲಿನ ಮಾನವ ಸವಾರಿಯಿಂದಾಗಿ ದುಷ್ಪರಿಣಾಮ ಅನುಭವಿಸುವಂತಾಗಿದೆ”-ಸುರೇಶ್ ಅತ್ರಮಜಲು
  • ಮಕ್ಕಳಿಗೆ ಪರಿಸರ ಕಾಳಜಿ ಪ್ರಬಂಧ ಬರೆಯುವುದಕ್ಕಷ್ಠೆ ಸೀಮಿತವಾಗತೊಡಗಿದೆ-ಸುಬ್ಬಪ್ಪ ಕೈಕಂಬ
  • ವಿದ್ಯಾರ್ಥಿಗಳು ಪರಿಸರ, ಸ್ವಚ್ಚತೆ ಬಗೆಗಿನ ಜಾಗೃತಿ ಮೂಡಿಸಬೇಕು-ಮರಿಯಮ್ಮ

ಉಪ್ಪಿನಂಗಡಿ: ಮನುಷ್ಯನ ದುರಾಸೆ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ಮೇಲೆ ಮಾನವ ನಡೆಸುವ ಸವಾರಿಯಿಂದಾಗಿ ಪ್ರಕೃತಿ ಮುನಿಸುಕೊಂಡಿದ್ದು, ನಾವಿಂದು ಅದರ ದುಷ್ಪರಿಣಾಮವನ್ನು ಎದುರಿಸುವಂತಾಗಿದೆ ಎಂದು ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಕಾರ್‍ಯಾಧ್ಯಕ್ಷ ಸುರೇಶ್ ಅತ್ರಮಜಲು ಹೇಳಿದರು.
ಅವರು ಜೂ 25ರಂದು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಜಂಟಿ ಆಶ್ರಯದಲ್ಲಿ ಸ್ವಚ್ಚಮೇವ ಜಯತೇ ಆಂದೋಲನದ ಪ್ರಯುಕ್ತ ಹಮ್ಮಿಕೊಳ್ಳಲಾದ ವನಮಹೋತ್ಸವ ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಹಿಂದೆಲ್ಲ ಮರ, ಗಿಡಗಳಿಂದ ಕೂಡಿದ ಸ್ಚಚ್ಚ ಪರಿಸರ ಸಮತೋಲನವನ್ನು ಕಾಪಾಡುತ್ತಿತ್ತು, ಮಳೆಗಾಲ, ಚಳಿಗಾಲ, ಬೇಸಿಗೆ ಕಾಲದ ಪ್ರತ್ಯೇಕತೆ ಮತ್ತು ಬದಲಾವಣೆಯೊಂದಿಗೆ ಸಮತೋಲನವನ್ನು ಕಾಪಾಡುತ್ತಿತ್ತು, ಆದರೆ ಇದೀಗ ಅದೆಲ್ಲ ನಮ್ಮಿಂದ ದೂರವಾಗುತ್ತಿದೆ, ಮಳೆ, ನೀರಿನ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದ ಅವರು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇದೆಲ್ಲವನ್ನು ಗಂಭೀರವಾಗಿ ಪರಿಗಣಿಸಿ ಗಿಡ, ಮರಗಳನ್ನು ನೆಡುವ ಮತ್ತು ಅವುಗಳನ್ನು ಪೋಷಣೆ ಮಾಡಿ ಮುಂದಿನ ತಲೆಮಾರಿಗೆ ಅದರ ಪ್ರಯೋಜನ ದೊರಕುವಂತೆ ಮಾಡಬೇಕು ಎಂದರು.

ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಚಾರ್ಯ ಸುಬ್ಬಪ್ಪ ಕೈಕಂಬ ಅಧ್ಯಕ್ಷತೆ ವಹಿಸಿ ಮಾತನಾಡಿ ಈಗೀಗ ಶಾಲಾ ಮಕ್ಕಳಿಗೆ ಪರಿಸರ ಕಾಳಜಿ ಕೇವಲ ಪ್ರಬಂಧ  ಬರೆಯುವುದಕ್ಕಷ್ಟೆ ಸೀಮಿತವಾಗತೊಡಗಿದೆ, ಆದರೆ ಇಲ್ಲಿ ಹಾಗಾಗಬಾರದು ಕಾಲೇಜಿನ ಸುತ್ತ ನೆಡಲ್ಪಟ್ಟ ಗಿಡಗಳನ್ನು ವಿದ್ಯಾರ್ಥಿಗಳು ದತ್ತು ಪಡೆದುಕೊಂಡು ಪೋಷಣೆ ಮಾಡಬೇಕು ಆಗ ಮಾತ್ರ ಇಂತಹ ಕಾರ್‍ಯಕ್ರಮಗಳು ಅರ್ಥಪೂರ್ಣವಾಗುವುದು ಎಂದರು.

ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಕಾರ್‍ಯದರ್ಶಿ ಮರಿಯಮ್ಮ ಮಾತನಾಡಿ 1 ಮರವನ್ನು ಕಡಿದರೆ 10 ಗಿಡ ನೆಡಬೇಕು ಎಂಬ ನಿಯಮ ಇದೆ, ವಿದ್ಯಾರ್ಥಿಗಳು ಇದನ್ನು ಅರಿತುಕೊಂಡು ತಮ್ಮ ಮನೆ, ಊರುಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಪರಿಸರ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಮತ್ತು ಪ್ಲಾಸ್ಟಿಕ್ ಬಳಕೆಯನ್ನು ದೂರ ಮಾಡುವ ನಿಟ್ಟಿನಲ್ಲಿಯೂ ತಮ್ಮ ಮನೆಯ ಸುತ್ತಮುತ್ತ, ಊರು, ಗ್ರಾಮಗಳಲ್ಲಿ ಜನರಿಗೆ ತಿಳಿ ಹೇಳಬೇಕು, ಆ ರೀತಿಯಲ್ಲಿ ವಿದ್ಯಾರ್ಥಿಗಳು ಪರಿಸರ ಮತ್ತು ಸ್ವಚ್ಚತೆಗೆ ತನ್ನ ಸಹಭಾಗಿತ್ವವನ್ನು ತೋರ್ಪಡಿಸಬೇಕು ಎಂದರು.

ಸಮಾರಂಭದಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಯು.ಟಿ. ತೌಶೀಫ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾಧವ ಕೆ., ಕಾಲೇಜಿನ ಉಪನ್ಯಾಸಕ ಅಹಮದ್ ಉಪಸ್ಥಿತರಿದ್ದರು.  ಕಾಲೇಜಿನ ಉಪನ್ಯಾಸಕರಾದ ಹುಚ್ಚೇ ಗೌಡ ಸ್ವಾಗತಿಸಿ, ಎವರೆಸ್ಟ್ ರೋಡ್ರಿಗಸ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.