

ಪುತ್ತೂರು: ಪುಣಚ ಗ್ರಾಮದ ದೇವಿನಗರ ಶ್ರೀ ಮಹಮ್ಮಾಯಿ ಜೈ ಭಾರತಿ ಮರಾಟಿ ಸಂಘದ ಮಹಾಸಭೆಯು ಇತ್ತೀಚೆಗೆ ನಡೆಯಿತು. ಸಂಘದ ಮಾಜಿ ಅಧ್ಯಕ್ಷ ನಾರಾಯಣ ನಾಯ್ಕ ಅಗ್ರಾಳರವರು ಸಂಘದ ಅಭಿವೃದ್ಧಿಯ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ಕಲ್ಲಾಜೆಯವರು ಒಂದನೇ ತರಗತಿಯಿಂದ 10 ನೇ ತರಗತಿಯವರೆಗಿನ ಸುಮಾರು 160 ಕ್ಕೂ ಅಧಿಕ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಿ ಸಂಘದ ಏಳಿಗೆಗೆ ಎಲ್ಲಾ ಸ್ವಜಾತಿ ಬಾಂಧವರು ಕೈ ಜೋಡಿಸಬೇಕೆಂದು ವಿನಂತಿಸಿದರು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸುಬ್ಬ ನಾಯ್ಕ ಮೊಟ್ಟೆತ್ತಡ್ಕ, ಉಪಾಧ್ಯಕ್ಷರಾಗಿ ಚನಿಯಪ್ಪ ನಾಯ್ಕ ನೂಜಿ, ಕಾರ್ಯದರ್ಶಿಯಾಗಿ ಬಾಬು ನಾಯ್ಕ ಅಜ್ಜಿನಡ್ಕ, ಜತೆ ಕಾರ್ಯದರ್ಶಿಯಾಗಿ ಪ್ರಕಾಶ್ ನಾಯ್ಕ ಮಲ್ಲಿಪ್ಪಾಡಿರವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಕೋಶಾಧಿಕಾರಿಯಾಗಿ ದಿನೇಶ್ ನಾಯ್ಕ ದೇವಿನಗರ, ಸಂಘಟನಾ ಕಾರ್ಯದರ್ಶಿಯಾಗಿ ಸುರೇಶ್ ನಾಯ್ಕ ದೇವಿನಗರ, ಸಂಚಾಲಕರಾಗಿ ರಾಜೇಶ ನಾಯ್ಕ ಕುಟ್ಟಿತ್ತಡ್ಕ, ಮಹಿಳಾ ಪ್ರತಿನಿಧಿಯಾಗಿ ಕವಿತಾ ಎಸ್.ನಾಯ್ಕ, ಮಹಿಳಾ ಸಂಚಾಲಕರಾಗಿ ನಳಿನಾಕ್ಷಿ ಸಂಕೇಸ, ಸಲಹಾ ಸಮಿತಿ ಸದಸ್ಯರಾಗಿ ವೇದಕೃಷ್ಣ ಕೊಪ್ಪರಕೊಟ್ಟು, ಸತ್ಯಪ್ರಕಾಶ್ ಆಜೇರು, ಅಪ್ಪಣ್ಣ ನಾಯ್ಕ ನೂಜಿ, ಕೊರಗಪ್ಪ ನಾಯ್ಕ ಗರಡಿ, ಚಂದ್ರಶೇಖರ ನಾಯ್ಕ ಮೂಡಾಯಿಬೆಟ್ಟು, ದೇವಪ್ಪ ನಾಯ್ಕ ಆಜೇರು, ಶೀಣ ನಾಯ್ಕ ಸಂಕೇಸ, ರಾಜೇಶ ನಾಯ್ಕ ದಂಬೆ, ಕೃಷ್ಣ ನಾಯ್ಕ ಅಜ್ಜಿನಡ್ಕ, ಪ್ರವೀಣ ಕಮ್ಮಾಜೆ, ಗುರುವಪ್ಪ ಪಟಿಕಲ್ಲು, ರವಿ ನಾಯ್ಕ ಪಟಿಕಲ್ಲು, ಕೃಷ್ಣ ನಾಯ್ಕ ಚೆಕ್ಕುತ್ತಿರವರನ್ನು ಆಯ್ಕೆ ಮಾಡಲಾಯಿತು.
ಸಂಘದ ಮಹಿಳಾ ವೇದಿಕೆಯ ಅಧ್ಯಕ್ಷೆ ನಳಿನಾಕ್ಷಿ ಸಂಕೇಸ ಸ್ವಾಗತಿಸಿದರು. ಸಂಘದ ಜತೆ ಕಾರ್ಯದರ್ಶಿ ಜಾನು ನಾಯ್ಕ ಮಹಾಸಭೆಯ ನೋಟೀಸನ್ನು ಓದಿ ದಾಖಲಿಸಿದರು. ಕಾರ್ಯದರ್ಶಿ ಚಂದ್ರಶೇಖರ ನಾಯ್ಕ ಅಜಕ್ಕಳ 2018-19ನೇ ಸಾಲಿನ ವರದಿ ವಾಚಿಸಿದರು. ಸಂಘದ ಕೋಶಾಧಿಕಾರಿ ಸುಬ್ಬ ನಾಯ್ಕ ಮೊಟ್ಟೆತ್ತಡ್ಕ ಲೆಕ್ಕಪತ್ರ ಮಂಡಿಸಿದರು. ಚಂದ್ರಶೇಖರ ಎ ವಂದಿಸಿದರು. ಬಾಬು ನಾಯ್ಕ ಅಜ್ಜಿನಡ್ಕ ಕಾರ್ಯಕ್ರಮ ನಿರೂಪಿಸಿದರು.