Home_Page_Advt
Home_Page_Advt
Home_Page_Advt

ಬೇರಿಕೆ ಅಂಗನವಾಡಿಯಲ್ಲಿ ಸ್ವಚ್ಛಮೇವ ಜಯತೇ: ಪುಟಾಣಿಗಳಲ್ಲಿ ಪರಿಸರದ ಆಸಕ್ತಿ ಮೂಡಿಸಿದ ಎ.ಸಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸ್ವಚ್ಛಮೇವ ಜಯತೇ ಮತ್ತು ನಮ್ಮ ಗ್ರಾಮ ಹಸಿರು ಗ್ರಾಮ ಕಾರ್ಯಕ್ರಮ ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಜೆ ಬೇರಿಕೆ ಅಂಗನವಾಡಿ ಕೇಂದ್ರದಲ್ಲಿ ಜೂ.೨೫ರಂದು ಗ್ರಾ.ಪಂ ಅದ್ಯಕ್ಷೆ ರಮಣಿ ಡಿ. ಗಾಣಿಗ ಉಪಸ್ಥಿತಿಯಲ್ಲಿ ನಡೆಯಿತು.

ಸಹಾಯಕ ಕಮಿಷನರ್ ಎಚ್.ಕೆ. ಕೃಷ್ಣಮೂರ್ತಿ ಅವರು ಹಾರೆಯಿಂದ ತಾನೆ ಹೊಂಡ ತೆಗೆದು ಗಿಡ ನೆಡುವ ಮೂಲಕ ಮಕ್ಕಳಿಗೆ ಪರಿಸರದ ಆಸಕ್ತಿ ಮೂಡಿಸಿದರು. ಪ್ರತಿ ಮಕ್ಕಳಿಗೂ ಸಸಿಗಳನ್ನು ವಿತರಣೆ ಮಾಡಿ ಮಕ್ಕಳೊಂದಿಗೆ ಸರಳೆಯಿಂದ ಸ್ವಲ್ಪ ಹೊತ್ತು ಮಾತನಾಡಿರುವುದು ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಗ್ರಾ.ಪಂ ಉಪಾದ್ಯಕ್ಷ ಜಿನ್ನಪ್ಪ ಗೌಡ, ಸದಸ್ಯರಾದ ರತ್ನಾಕರ ಪ್ರಭು, ಅಣ್ಣಿ ಪೂಜಾರಿ, ಚಿಗುರು ಗೆಳೆಯರ ಬಳಗದ ಸದಸ್ಯ ಸಂತೋಷ್ ಕುಮಾರ್, ದಾಮೋದರ್ ಅಚಾರ್ಯ, ಕೃಷಿಕ ರಾಮ್ ಪ್ರಸಾದ್ ಮಯ್ಯ, ಬಾಲ ವಿಕಾಸ ಸಮಿತಿಯ ಅದ್ಯಕ್ಷೆ ಮಮತ ಎಸ್., ಸೂರಜ್ ಗೊಳ್ತಿಲ, ರಾಜೇಶ್ ಗೊಳ್ತಿಲ, ಅಂಗನವಾಡಿ ಕಾರ್ಯಕರ್ತೆ ರೇಖಾ ಡಿ.ಎಸ್. ಸಹಾಯಕಿ ಮಾಲತಿ ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.