HomePage_Banner
HomePage_Banner
HomePage_Banner

ಡಾ.ಕೆ.ಶಿವರಾಮ ಕಾರಂತ ಶಾಲೆಯಲ್ಲಿ ಮಂತ್ರಿ ಮಂಡಲ ರಚನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರ: ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆಯಲ್ಲಿ 2019-20 ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲದ ಪ್ರಮಾಣವಚನ ಮತ್ತು ವಿವಿಧ ಸಂಘ ಗಳ ಉದ್ಘಾಟನೆಯು ಜೂ.19 ರಂದು ನಡೆಯಿತು. 10ನೇ ತರಗತಿಯ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯರಾದ ಜಲಜಾಕ್ಷಿ ಕೆ ಎಂ ದೀಪ ಬೆಳಗಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಹಿಂದಿ ಶಿಕ್ಷಕರಾದ ಅಬ್ರಹಾಂ .ಎಸ್ .ಎ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಲಾ ಶಿಕ್ಷಕರಾದ ನಳಿನಿ .ಎ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕನ್ನಡ ಶಿಕ್ಷಕರಾದ ಜ್ಯೋತಿ ಕುಮಾರಿ ಸ್ವಾಗತಿಸಿ ಇಂಗ್ಲಿಷ್ ಶಿಕ್ಷಕರಾದ ಚಾಂದಿನಿ ಧನ್ಯವಾದ ಸಲ್ಲಿಸಿದರು. ಸಂಗೀತ ಶಿಕ್ಷಕರಾದ ಶುಭಾರಾವ್ ಕಾರ್ಯಕ್ರಮ ನಿರೂಪಿಸಿದರು. ಗಣಿತ ಶಿಕ್ಷಕರಾದ ಅನ್ನಮ್ಮ ಪಿ.ಎಸ್ , ಸುರೇಖಾ ಮತ್ತು ದ್ವಿ.ದ.ಸ.ಮಲ್ಲರಾಜು ಸಹಕರಿಸಿದರು .

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.