HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಶುಚಿತ್ವ ಕಾಯ್ದು ಕೊಳ್ಳದ ಆರೋಪ: ಬೆಂಗಳೂರು ಅಯ್ಯಂಗಾರ್ ಬೇಕರಿ ತಿಂಡಿ ತಯಾರಿಕಾ ಘಟಕಕ್ಕೆ ನಗರಸಭೆ ದಾಳಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶುಚಿತ್ವ ಕಾಯ್ದುಕೊಳ್ಳದ ದರ್ಬೆಯಲ್ಲಿನ ಅಯ್ಯಂಗಾರ್ ಬೇಕರಿ ಮತ್ತು ಅದಕ್ಕೆ ಹೊಂದಿ ಕೊಂಡಿರುವ ಸಂಸ್ಥೆಯ ತಿಂಡಿ ತಯಾರಿಕಾ ಘಟಕಕ್ಕೆ ಪುತ್ತೂರು ನಗರಸಭೆ ಜೂ. 25ರಂದು ದಾಳಿ ನಡೆಸಿ ಎಚ್ಚರಿಕೆ ನೀಡಿದೆ.

ದರ್ಬೆಯಲ್ಲಿನ ಕಟ್ಟಡವೊಂದರಲ್ಲಿ ಅಯ್ಯಂಗಾರ್ ಬೇಕರಿ ಮತ್ತು ಅದರ ಜೊತೆ ಬೇಕರಿಗೆ ಹೊಂದಿಕೊಂಡು ಬೇಕರಿ ತಿಂಡಿಗಳನ್ನು ತಯಾರಿಸುವ ಘಟಕವಿದ್ದು ಇಲ್ಲಿ ತಿಂಡಿ ತಿನಿಸುಗಳಲ್ಲಿ ಸ್ವಚ್ಛತೆ ಕಾಯ್ದು ಕೊಳ್ಳುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ವೈರಲ್ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಪುತ್ತೂರು ನಗರಸಭೆ ಆರೋಗ್ಯ ನಿರೀಕ್ಷಕರು ದಾಳಿ ನಡೆಸಿದೆ. ದಾಳಿಯ ವೇಳೆ ಆಹಾರ ಪದಾರ್ಥ ಗಳನ್ನು ತಯಾರಿಸುವ ಸ್ಥಳದಲ್ಲಿ ಸ್ವಚ್ಛತೆ ಇಲ್ಲದಿರುವುದು ಮತ್ತು ಹಳಸು ಪದಾರ್ಥಗಳನ್ನು ವಿಲೇ ಮಾಡದೆ ಕೋಣೆಯಲ್ಲಿ ದಾಸ್ತಾನಿರಿಸಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಒಟ್ಟು ಶುಚಿತ್ವವನ್ನು ನಿರ್ಲಕ್ಷಿಸಿದ ಕಾರಣಕ್ಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ, ಪರಿಸರ ಅಭಿಯಂತರ ಗುರುಪ್ರಸಾದ್, ರಾಧಾಕೃಷ್ಣ, ತಿಮ್ಮಪ್ಪ ಅವರು ದಾಳಿಯಲ್ಲಿ ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.