Home_Page_Advt
Home_Page_Advt
Home_Page_Advt

ಸುದಾನ : ಅಂತರಾಷ್ಟ್ರೀಯ ಮಟ್ಟದಲ್ಲಿ ರಜತ ಪದಕ

Puttur_Advt_NewsUnder_1
Puttur_Advt_NewsUnder_1


ಅಮೇರಿಕಾದ ನ್ಯೂಯಾರ್ಕ್‌ನ ಓಸ್‌ವೆಗೊ ಯುನಿವರ್ಸಿಟಿಯಲ್ಲಿ ಜೂ 17 ರಂದು ಜರುಗಿದ ಅಂತಾರಾಷ್ಟ್ರೀಯ ಮಟ್ಟದ ಜೀನಿಯಸ್ ಒಲಿಂಪಿಯಾಡ್‌ನಲ್ಲಿ ಸುದಾನ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿಯರಾದ ಸ್ತುತಿ ಎಮ್ ಎಸ್ ಮತ್ತು ಸಂಧ್ಯಾ ಪ್ರಭು ಅವರ ತಂಡವು ರಜತ ಪದಕವನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದೆ.

ಒಟ್ಟು 79 ದೇಶದ 1269 ಪ್ರಾಜೆಕ್ಟ್‌ಗಳು ಜೀನಿಯಸ್ ಒಲಿಂಪಿಯಾಡ್‌ನಲ್ಲಿ ಭಾಗವಹಿಸಿದ್ದು, ಸುದಾನ ವಿದ್ಯಾರ್ಥಿನಿಯರ ಅನ್ವೇಷಣೆಯಾದ, ‘ಗೆದ್ದಲುಗಳ ಮೇಲೆ ದಡ್ಡಾಲ ಮರದ ತೊಗಟೆಯ ಜಲೀಯಸಾರದ ಪರಿಣಾಮಕಾರಿತ್ವದ ಒಂದು ಅಧ್ಯಯನ’ (A study on an aqueous solution of Careya  arborea on wood termites) ವಿಷಯವು ರಜತ ಪದಕದೊಂದಿಗೆ, ಪ್ರಶಸ್ತಿ ಫಲಕ, HD 8 Amazon tabಗಳನ್ನು ಪಡೆದುಕೊಂಡು ಗಮನಾರ್ಹ ಸಾಧನೆ ಮಾಡಿದೆ. ಈ ಸಂಶೋಧನೆಯು INSEFನ ವಿಭಾಗೀಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿತ್ತು. ಜೊತೆಗೆ US science forum ವತಿಯಿಂದ ಗುರುತಿಸಲ್ಪಟ್ಟು IRIS National level ಸ್ಪರ್ಧೆಯಲ್ಲಿ 500 US Dollars ಬಹುಮಾವನ್ನು ಪಡೆದಿತ್ತು.

ಈ ಜಲೀಯಸಾರವು ಮನೆಯ ಒಳಗೆ ಹಾಗೂ ಹೊರಾಂಗಣಗಳಲ್ಲಿ ಕಾಣಿಸುವ ಎಲ್ಲಾ ತರಹದ ಗೆದ್ದಲು ಹುಳುಗಳ ನಿರ್ಮೂಲನೆಗೆ ರಾಮಬಾಣವಾಗಿದ್ದು, ಯಾವುದೇ ಕೃತಕ ರಾಸಾಯನಿಕಗಳಿಲ್ಲದೇ ಇರುವುದರಿಂದ ಪರಿಸರಕ್ಕೆ ಮತ್ತು ಆರೋಗ್ಯಕ್ಕೆ ಹಾನಿಯನ್ನು ಉಂಟು ಮಾಡುವುದಿಲ್ಲ.

ಸ್ತುತಿ ಎಮ್ ಎಸ್ ರವರು ವಿವೇಕಾನಂದ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀಕೃಷ್ಣಗಣರಾಜ ಭಟ್ ಹಾಗೂ ಸೌಮ್ಯ ಭಟ್ ದಂಪತಿಗಳ ಮಗಳು ಹಾಗೂ ಬಿ ಸಂಧ್ಯಾ ಪ್ರಭುರವರು ಪ್ರಭು ಸ್ಟೀಲ್ ಮಾಲಕ ರಮೇಶ್ ಪ್ರಭು ಹಾಗೂ ರಜನಿ ಪ್ರಭು ದಂಪತಿಗಳ ಮಗಳು. ಇವರಿಗೆ ಸುದಾನ ಶಾಲೆಯ ವಿಜ್ಞಾನ ಶಿಕ್ಷಕಿ ಸಾಧನಾ ಹೆಬ್ಬಾರ್ ಮತ್ತು ಶಂಕರ್ ಭಟ್ ಬದನಾಜೆಯವರು ಮಾರ್ಗದರ್ಶಕರಾಗಿದ್ದರು. ವಿಜೇತರನ್ನು ಶಾಲಾ ಸಂಚಾಲಕರಾದ ರೆ| ವಿಜಯ ಹಾರ್ವಿನ್, ಮುಖ್ಯ ಶಿಕ್ಷಕಿ ಶೋಭಾನಾಗರಾಜ್, ಆಡಳಿತ ಮಂಡಳಿಯ ಸದಸ್ಯರು, ಮತ್ತು ಶಿಕ್ಷಕರು ಅಭಿನಂದಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.