Home_Page_Advt
Home_Page_Advt
Home_Page_Advt

ಜನ ಸಮೃದ್ಧಿ ಸಮೂಹ ಸಂಸ್ಥೆಗಳ ‘ಸಾಧನ ಸಂಭ್ರಮ’ 5ನೇ ವಾರ್ಷಿಕೋತ್ಸವ

Puttur_Advt_NewsUnder_1
Puttur_Advt_NewsUnder_1
  • ರಕ್ತದಾನ ಶಿಬಿರ- ಸನ್ಮಾನ -ವಿದ್ಯಾರ್ಥಿವೇತನ ವಿತರಣೆ
  • ಸಹಕಾರಿ ಸಂಸ್ಥೆಗಳು ಬಡವರ ಪರವಿರಲಿ: ಕೃಷ್ಣಬೈರೇಗೌಡ
  • ತನ್ನ ಹಿತದ ಜೊತೆಗೆ ಸಮಾಜದ ಹಿತವನ್ನು ಕಾಪಾಡುವುದು ಅಗತ್ಯ: ಸ್ವಾಮೀಜಿ
  • ಸಂಸ್ಥೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ: ದೊಡ್ಡರಂಗೇಗೌಡ

ವಿಟ್ಲ: ಸಹಕಾರಿ ಸಂಸ್ಥೆಗಳು ಬಡವರು ಹಾಗೂ ಮಾಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಸಲಹೆ ನೀಡಿದ್ದಾರೆ.

ಅವರು ಜೂ.23ರಂದು ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆದ ಜನ ಸಮೃದ್ಧಿ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ “ಸಾಧನ ಸಂಭ್ರಮ” 5ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸಾಲ ಸೌಲಭ್ಯ ಮತ್ತು ಇನ್ನಿತರೆ ಆರ್ಥಿಕ ನೆರವು ನೀಡುವ ಮೂಲಕ ಜೀವನ ಮಟ್ಟ ಸುಧಾರಾಣೆಯಲ್ಲಿ ಸಹಕಾರಿ ಸೊಸೈಟಿಗಳು ಪ್ರಮುಖ ಪಾತ್ರ ವಹಿಸಬೇಕು ಎಂದರು.

ಶಿವಗಂಗಾ ಕ್ಷೇತ್ರದ ಮಲಯ ಶಾಂತಮುನಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ತನ್ನ ಹಿತದ ಜೊತೆಗೆ ಸಮಾಜದ ಹಿತವನ್ನು ಬಯಸಿದರೆ ನಿಜವಾದ ಸಮೃದ್ಧ ಸಮಾಜ ನಿರ್ಮಾಣಕ್ಕೆ ದಾರಿಯಾಗುತ್ತದೆ. ಕೇವಲ ಮನುಷ್ಯನಷ್ಟೇ ಅಲ್ಲದೆ ಜಗತ್ತಿನ ಸಕಲ ಪ್ರಾಣಿಗಳ ಲೇಸನ್ನು ಬಯಸುವುದೇ ನಿಜವಾದ ಮನುಜ ಲಕ್ಷಣ. ಜಾತಿ,ಮತ, ಬೇಧಗಳೆಂಬ ಗೋಡೆಗಳನ್ನು ತೊಡೆದುಹಾಕಿ, ಸ್ನೇಹದ ಸೇತುವೆಗಳನ್ನು ನಿರ್ಮಾಣ ಮಾಡಿದಾಗ ಪರಸ್ಪರರಲ್ಲಿ ಸ್ನೇಹಭಾವ ಮೂಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಾಹಿತಿ ದೊಡ್ಡರಂಗೇಗೌಡರವರು ಮಾತನಾಡಿ, ಸಂಸ್ಥೆಯು ತನ್ನ ಕಾರ್ಯ ಚಟುವಟಿಕೆಗಳ ಜೊತೆಗೆ ಸದಸ್ಯರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ವಿನಯವನ್ನು ಬೆಳೆಸಿಕೊಳ್ಳಬೇಕು. ಯುವಜನಾಂಗ ಸಮಾನತೆ ಸಂಸ್ಕೃತಿ ಹೊಂದಿರುವ ಭಾರತದ ಏಳಿಗೆಗೆ ಕೊಡುಗೆ ನೀಡಬೇಕು ಎಂದರು.

ಇದೇ ಸಂದರ್ಭದಲ್ಲಿ ರೆಡ್‌ಕ್ರಾಸ್ ಸೊಸೈಟಿಯ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ರಕ್ತದಾನ ಶಿಬಿರದಲ್ಲಿ 150 ಯುನಿಟ್ ರಕ್ತ ಸಂಗ್ರಹಿಸಲಾಯಿತು. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳನ್ನು ಪುರಸ್ಕರಿಸಲಾಯಿತು. ಬಡತನದಲ್ಲಿರುವ ಸಂಸ್ಥೆಯ ಸದಸ್ಯರೊಬ್ಬರ ಪುತ್ರಿ 4ನೇ ತರಗತಿಯ ಕೀರ್ತನಾ ಎಂಬ ವಿದ್ಯಾರ್ಥಿನಿಗೆ ಪದವಿಯವರೆಗೆ ತಗಲುವ ಶಿಕ್ಷಣದ ವೆಚ್ಚವನ್ನು ಭರಿಸಲು ಸಂಸ್ಥೆಯು ದತ್ತು ಪಡೆಯಿತು.

ಈ ಸಂದರ್ಭದಲ್ಲಿ ಸಾಲುಮರದ ತಿಮ್ಮಕ್ಕ, ಶಿವಗಂಗಾ ಕ್ಷೇತ್ರದ ಮಲಯ ಶಾಂತಮುನಿ ದೇಶಿಕೇಂದ್ರ ಸ್ವಾಮೀಜಿರವರನ್ನು ಚಿತ್ರನಟ ರವಿಶಂಕರ್, ಜನಸಮೃದ್ಧಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ. ರಾಮು ಮತ್ತಿತರರು ಗೌರವಿಸಿದರು. ನಿರ್ದೇಶಕ ಗಿರೀಶ್ ಪುತ್ತೂರು ಸಹಿತ ಸಂಸ್ಥೆಯ ನಿರ್ದೇಶಕರುಗಳು ಹಾಗೂ ಶೇರುದಾರರು, ಗ್ರಾಹಕರು ಸಲಹೆಗಾರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.