ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಇದರ ವತಿಯಿಂದ ವಿಟ್ಲ ಪಟ್ಟಣ ಪಂಚಾಯತ್ ನ ಪೌರಕಾರ್ಮಿಕರಿಗೆ ರೈನ್ ಕೋಟ್ ವಿತರಿಸುವ ಕಾರ್ಯಕ್ರಮ ಜೂ.25ರಂದು ವಿಟ್ಲ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತ್ ನ ಉಪಾಧ್ಯಕ್ಷ ಜಯಂತ ನಾಯಕ್ ವಹಿಸಿದ್ದರು ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಪಟ್ಟಣ ಪಂಚಾಯತ್ ಸದಸ್ಯ ವಿ.ರಾಮದಾಸ ಶೆಣೈ ಸ್ವಾಗತಿಸಿದರು.ಲಯನ್ಸ್ ಅಧ್ಯಕ್ಷ ಸಂತೋಷ ಕುಮಾರ್ ಶೆಟ್ಟಿಯವರು ಸ್ವಚ್ಛ ಭಾರತ ಅಡಿಯಲ್ಲಿ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಯೋಜಿಸುವ ಯೋಚನೆಯಿದೆ ಎಂದು ಸರ್ವರ ಸಹಕಾರ ಯಾಚಿಸಿದರು.ಕಾರ್ಯದರ್ಶಿ ಮನೋಜ್ ಕುಮಾರ್ ರೈ,ಕೋಶಾಧಿಕಾರಿ ಮಹಮ್ಮದ್ ಖಲಂದರ್, ಲಯನ್ ಟೇಮರ್ ರವಿಶಂಕರ್, ಸ್ಥಾಯಿಸಮಿತಿ ಅಧ್ಯಕ್ಷ ರವಿಪ್ರಕಾಶ್ ಹಾಗೂ ಪಂಚಾಯತ್ ನ ಇತರ ಸದಸ್ಯರು ಉಪಸ್ಥಿತರಿದ್ದರು. ಪಟ್ಟಣ ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷ ಅರುಣ ಎಂ. ವಂದಿಸಿದರು.
ಜೂನ್ 24 ರಂದು ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ವಿಟ್ಲ ಮಂಗೇಶ ಭಟ್ಟರು ಸಾಮಾಜಿಕ ಕಳಕಳಿಯೊಂದಿಗೆ ರೈನ್ ಕೋಟ್ ಗಳನ್ನು ನೀಡಿ ಸಹಕರಿಸಿದರು.