ನೆಲ್ಯಾಡಿ: ನೆಲ್ಯಾಡಿ ಸೂರ್ಯನಗರ ಶ್ರೀರಾಮ ವಿದ್ಯಾಲಯಕ್ಕೆ 2109-20ನೇ ಶೈಕ್ಷಣಿಕ ಸಾಲಿಗೆ ಹೊಸದಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ ಜೂ.24 ರಂದು ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಕೆನರಾ ಬ್ಯಾಂಕ್ನ ನೆಲ್ಯಾಡಿ ಶಾಖಾ ವ್ಯವಸ್ಥಾಪಕ ರಾಮಣ್ಣ ನಾಯ್ಕರವರು ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ಉಳಿಸಲು ಪ್ರಯತ್ನಿಸುವ ವಿದ್ಯಾಲಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕಡಬ ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟರಮಣ ಮಂಕುಡೆಯವರು ಭಾರತೀಯ ಪಂಚಮುಖಿ ಶಿಕ್ಷಣದ ಪರಿಚಯ ಮಾಡಿದರು.
ಆಡಳಿತ ಮಂಡಳಿಯ ಗೌರವಾಧ್ಯಕ್ಷ ಜಯಪ್ರಕಾಶ್ ನೆಕ್ರಾಜೆ, ಅಧ್ಯಕ್ಷ ರವಿಚಂದ್ರ ಹೊಸವಕ್ಲು, ಕಾರ್ಯದರ್ಶಿ ಬಾಲಕೃಷ್ಣ ಬಾಣಜಾಲು, ಮುಖ್ಯಗುರು ಗಣೇಶ್ ವಾಗ್ಲೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಹೋಮಕುಂಡಕ್ಕೆ ತುಪ್ಪ ಅರ್ಪಿಸಿ, ಹಿರಿಯರಿಂದ ಸಿಹಿ ಹಾಗು ತಿಲಕವನ್ನಿಟ್ಟು ಆರ್ಶಿವಾದ ಪಡೆದರು. ಶಿಕ್ಷಕಿ ಪ್ರೇಮಲತ ಸ್ವಾಗತಿಸಿ, ಕೊಮಲಾಂಗಿ ವಂದಿಸಿದರು. ಭಾಗೀರಥಿ ಕಾರ್ಯಕ್ರಮ ನಿರೂಪಿಸಿದರು.