HomePage_Banner
HomePage_Banner

ಆರೆಲ್ತಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ‘ನೋ ಬ್ಯಾಗ್ ಡೇ’ – ದೈವ ಸಾನಿಧ್ಯ ಪರಿಚಯ

ಸವಣೂರು: ಇಲ್ಲಿನ ಆರೆಲ್ತಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೋ ಬ್ಯಾಗ್ ಡೇ ಪ್ರಯುಕ್ತ ಮಕ್ಕಳ ಹೊರಸಂಚಾರ ಕಾರ್ಯಕ್ರಮ ಹಾಗೂ ‘ದೈವ ಸಾನಿಧ್ಯ ಪರಿಚಯ’ ಎಂಬ ವಿನೂತನ ಪ್ರಯೋಗ ನಡೆಯಿತು. ಸ್ಥಳೀಯ ದೈವಸ್ಥಾನದ ಉಳ್ಳಾಕುಲು ಮತ್ತು ಕೆಡೆಂಜೊಡಿತ್ತಾಯ ದೈವಗಳ ಸನ್ನಿಧಿಯಲ್ಲಿ ದೈವಗಳ ಐತಿಹ್ಯ ಮತ್ತು ಆರಾಧನಾ ಕ್ರಮಗಳ ಕುರಿತು ಮಕ್ಕಳಿಗೆ ಪರಿಚಯ ಮಾಡಿಸಲಾಯಿತು.ಆರೆಲ್ತಡಿ ಕಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿಯ ಸ್ಥಾಪಕಾಧ್ಯಕ್ಷ ಮುರಳಿ ಮೋಹನ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ತಂಬಿಲ ಸೇವೆ ನಡೆಸಿ ಮಕ್ಕಳಿಗೆ ಪ್ರಸಾದ ವಿತರಿಸಲಾಯಿತು.ದೈವದ ಪೂಜಾರಿ ವೆಂಕಪ್ಪ ಗೌಡ ಕುದ್ಮನಮಜಲು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕಿನಾರ, ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಸದಸ್ಯರುಗಳಾದ ಮೋನಪ್ಪ ಗೌಡ, ಗೋಪಾಲಕೃಷ್ಣ ಗೌಡ, ದೈವದ ಪಾತ್ರಿಗಳಾದ ಕುಂಞ, ಪೂವಪ್ಪ ಆರೆಲ್ತಡಿ, ಎಸ್ಡಿಎಂಸಿ ಅಧ್ಯಕ್ಷ ನಾರಾಯಣ ಗೌಡ ಕೆಡೆಂಜಿಮಾರು, ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ಕುದ್ಮನಮಜಲು ಮತ್ತು ರಾಜೀವಿ ವಿ ಶೆಟ್ಟಿ ಉಪಸ್ಥಿತರಿದ್ದರು.

ಎಸ್ಡಿಎಂಸಿ ಸದಸ್ಯರು ಮತ್ತು ಮಕ್ಕಳ ಪೋಷಕರು ಹಾಗೂ ಊರವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಜಗನ್ನಾಥ್ ಎಸ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ಗೌರವ ಶಿಕ್ಷಕಿಯರಾದ ಸರಿತಾ ಮತ್ತು ದಯಾಮಣಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.