ಪೆಟ್ರೋಲ್ , ಡೀಸೆಲ್ ಬೆಲೆ ಚಿನ್ನದ ದರದಂತೆ ದಿನೇ ದಿನೇ ಗಗನಕ್ಕೇರುತ್ತಿದೆ. ಸದ್ಯ ಒಂದು ಲೀಟರ್ ಪೆಟ್ರೋಲ್ ಬೆಲೆ 70 ರೂ.ಗಿಂತಲೂ ಹೆಚ್ಚಿದೆ. ಇದಕ್ಕೆ ಕಾರಣ ತೈಲದ ಅಭಾವ. ಈಗಾಗಲೇ ತೈಲದ ವಿಚಾರವಾಗಿಯೇ ಅಮೆರಿಕ ಮತ್ತು ಇರಾನ್ ನಡುವೆ ಪ್ರಕ್ಷುಬ್ಧ ಪರಿಸ್ಥಿತಿ ಏರ್ಪಟ್ಟಿದೆ. ತೈಲ ನಿಕ್ಷೇಪ ಭಾರತದಲ್ಲಿ ಎಲ್ಲಿಯೂ ಸಿಗದ ಕಾರಣ ಭಾರತ ದುಬಾರಿ ಬೆಲೆ ಕೊಟ್ಟು ಗಲ್ಫ್ ದೇಶಗಳಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಭೂಮಿಯಲ್ಲಿ ನೈಸರ್ಗಿಕವಾಗಿ ದೊರೆಯುವ ಈ ಇಂಧನವನ್ನು ಕೃತಕವಾಗಿ ತಯಾರಿಸುವ ಪ್ರಯೋಗಗಳು ನಡೆಯುತ್ತಲೇ ಇವೆ. ಆದರೆ ಯಾವುದೂ ಕೂಡ ನಿರೀಕ್ಷಿತ ಫಲ ಕೊಟ್ಟಿಲ್ಲ. ಇದೀಗ ಭಾರತದ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ಪ್ಲಾಸ್ಟಿಕ್ ಮೂಲಕ ಪೆಟ್ರೋಲ್ ತಯಾರಿಸುವ ಮೂಲಕ ಹೊಸ ತಂತ್ರಜ್ಞಾನವನ್ನು ಪರಿಚಯಿಸಿಕೊಟ್ಟಿದ್ದಾರೆ. ವೃತ್ತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ಪ್ರೊ.ಸತೀಶ್ ಕುಮಾರ್ ಈ ನೂತನ ಪ್ರಯೋಗದ ರೂವಾರಿಯಾಗಿದ್ದಾರೆ. ಪ್ಲಾಸ್ಟಿಕ್ ಅನ್ನು ಮೂರು ಹಂತಗಳ ಪ್ರಕ್ರಿಯೆಯಲ್ಲಿ ಪರಿವರ್ತಿಸುವ ಮೂಲಕ ಪೆಟ್ರೋಲ್ ಪ್ಯಾರೊಲಿಸಿಸ್ ಅನ್ನು ಉತ್ಪಾದಿಸಬಹುದಾಗಿದೆ ಎಂದು ಸತೀಶ್ ಹೇಳುತ್ತಾರೆ. 2016 ರಿಂದ ಮರುಬಳಕೆ ಮಾಡಲಾಗದ 50 ಟನ್ ಪ್ಲಾಸ್ಟಿಕ್ ಅನ್ನು ಪೆಟ್ರೋಲ್ ಆಗಿ ಪರಿವರ್ತನೆ ಮಾಡಲಾಗಿದ. ಪ್ರಸ್ತುತ ದಿನನಿತ್ಯ 200 ಕೆಜಿ ತ್ಯಾಜ್ಯ ಪ್ಲಾಸ್ಟಿಕ್ ನಿಂದ 200 ಲೀಟರ್ ಪೆಟ್ರೋಲ್ ಉತ್ಪಾದಿಸುತ್ತಿದ್ದಾರೆ. ಇಲ್ಲಿ ಉತ್ಪಾದಿಸಲಾದ ಪೆಟ್ರೋಲ್ , ಡೀಸೆಲ್ನ್ನು ಅಲ್ಲಿನ ಸ್ಥಳೀಯ ಜನರಿಗೆ ಪ್ರತಿ ಲೀಟರ್ಗೆ 40 ಅಥವಾ 50 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.