Home_Page_Advt
Home_Page_Advt
Home_Page_Advt

‘ಸಮಸ್ತ’ ಅಹ್ಲುಸುನ್ನದ ನೈಜ ಹಾದಿ :ಉಸ್ತಾದ್ ರಶೀದ್ ರಹ್ಮಾನಿ

Puttur_Advt_NewsUnder_1
Puttur_Advt_NewsUnder_1
  • ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ಸಂಸ್ಥಾಪನಾ ದಿನಾಚರಣೆ

ನೆಲ್ಯಾಡಿ : ದಕ್ಷಿಣ ಭಾರತದ ಅತ್ಯುನ್ನತ ಧಾರ್ಮಿಕ ಉಲಮಾ ಸಂಘಟನೆಯಾದ ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಪವಿತ್ರ ಇಸ್ಲಾಂ ಧರ್ಮದ ನೈಜರೂಪವಾದ ಅಹ್ಲುಸುನ್ನದ ನೈಜ ಹಾದಿಯಾಗಿದೆ ಎಂದು ಕೋಲ್ಪೆ ಬದ್ರಿಯಾ ಜುಮಾ ಮಸೀದಿ ಖತೀಬರಾದ ಉಸ್ತಾದ್ ಅಬ್ದುರ್ರಶೀದ್ ರಹ್ಮಾನಿ ಹೇಳಿದರು. ಅವರು ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಕೋಲ್ಪೆ ಜಮಾಅತ್ ಸಮಿತಿ ವತಿಯಿಂದ ಬದ್ರಿಯಾ ಮಸೀದಿ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸುಮಾರು ತೊಂಬತ್ತಮೂರು ವರ್ಷಗಳ ಹಿಂದೆ ಸಮುದಾಯದ ವಿಶ್ವಾಸ ಹಾಗೂ ಪರಂಪರೆಯ ಸಂರಕ್ಷಣೆಗಾಗಿ ಅನಿವಾರ್ಯವಾಗಿ ರೂಪುಗೊಂಡ ಈ ಸಂಘಟನೆಯು ಇಂದಿಗೂ ಇಸ್ಲಾಂಧರ್ಮ ದ ಆದರ್ಶ ಸಂರಕ್ಷಣೆಯಲ್ಲಿ ಯಾವುದೇ ಮುಲಾಜಿಲ್ಲದೆ ಸಂವಿಧಾನಾತ್ಮಕವಾಗಿ ನಿರಂತರವಾಗಿ ‌ಕಾರ್ಯ ನಿರ್ವಹಿಸುತ್ತಿದೆ. ಶೈಕ್ಷಣಿಕವಾಗಿಯೂ ಸಮುದಾಯವನ್ನು ಸಬಲೀಕರಣ ಗೊಳಿಸುವಲ್ಲಿ ಮುಂಚೂಣಿಯಲ್ಲಿದೆ. ಈಗಾಗಲೇ ಒಂಬತ್ತು ದಶಕಗಳನ್ನು ಪೂರೈಸಿದ ‘ಸಮಸ್ತ’ ತನ್ನ ಆದರ್ಶ ಬದ್ಧತೆಯಲ್ಲಿ ಯಾವುದೇ ಕಳಂಕ ಮೆತ್ತಿಕೊಳ್ಳದ ಏಕೈಕ ಧಾರ್ಮಿಕ ಸಂಘಟನೆಯಾಗಿದ್ದು ಸಮಸ್ತಕ್ಕೆ ನೇತೃತ್ವ ನೀಡಿದ ಪೂರ್ವಿಕ ಉಲಮಾಗಳ ಶುದ್ಧ ಜೀವನವು ನಮಗೆ ಮಾದರಿಯೆಂದರು.

ಕೋಲ್ಪೆ ಜಮಾಅತ್ ಅಧ್ಯಕ್ಷರಾದ ಅಬೂಬಕ್ಕರ್ ಕೆ.ಕೆ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷರಾದ ,ಅಬ್ದುಲ್ಲಾ ಕುಂಞಿ ಗೋಳಿತೊಟ್ಟು, ಕಾರ್ಯದರ್ಶಿ ಆರ್.ಕೆ ಖಾದರ್,ಲೆಕ್ಕಪರಿಶೋದಕರಾದ, ಕೆ.ಪಿ ಅಬೂಬಕ್ಕರ್, ಖಲಂದರ್ ಷಾ ಧಫ್ ಕಮಿಟಿ ಅಧ್ಯಕ್ಷ ರಾದ ಹಾಜಿ ಕೆ.ಕೆ ಇಸ್ಮಾಯಿಲ್ ಕೋಲ್ಪೆ, ದಫ್ ಸಮಿತಿ ಲೆಕ್ಕ ಪರಿಶೋಧಕರಾದ ಕೆ.ಎಂ ಮುಹಮ್ಮದ್,ಮದ್ರಸ ಉಸ್ತುವಾರಿಯಾದ ಯು.ಕೆ ಅಬ್ದುಲ್ ಹಮೀದ್ ,ಎಸ್ ಕೆ ಎಸ್ ಎಸ್ ಎಫ್ ಕೋಲ್ಪೆ ಕ್ಲಸ್ಟರ್ ಅಧ್ಯಕ್ಷರಾದ ರಹೀಂ ಎಂ.ಕೆ, ಎಸ್ ಕೆ ಎಸ್ ಎಸ್ ಎಫ್ ಗೋಳಿತೊಟ್ಟು ಶಾಖೆ ಅಧ್ಯಕ್ಷರಾದ ಇಲ್ಯಾಸ್ ಕೋಂಕೋಡಿ, ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಗಂಡಿಬಾಗಿಲು, ಝಕರಿಯಾ ಕೆ.ಕೆ, ಹನೀಫ್ ಮರ್ಲಾಪು, ದಾವೂದ್ ಆರ್, ಸಲೀಂ ಎಂ.ಕೆ, ಅನ್ಸೀಫ್ ಕೋಂಕೋಡಿ ಉಪಸ್ಥಿತರಿದ್ದರು.

ನೂರಾನಿಯ್ಯ ಮದ್ರಸಾ ಮುಖ್ಯ ಅಧ್ಯಾಪಕರಾದ ಯೂಸುಫ್ ಮುಸ್ಲಿಯಾರ್ ತುರ್ಕಳಿಕೆ ಸ್ವಾಗತಿಸಿದರು.ಮದ್ರಸಾ ವಿದ್ಯಾರ್ಥಿಗಳು, ಜಮಾಅತ್ ಸದಸ್ಯರು ಹಾಜರಿದ್ದು ,ಎಸ್ ಕೆ ಎಸ್ ಎಸ್ ಎಫ್ ಕೋಲ್ಪೆ ಶಾಖೆ ಪ್ರಧಾನ ಕಾರ್ಯದರ್ಶಿ ಸಾದಿಕ್ ಕಾರ್ಯಕ್ರಮ ನಿರ್ವಹಿಸಿ, ಅಧ್ಯಾಪಕರಾದ ಹಮೀದ್ ಮುಸ್ಲಿಯಾರ್ ಉರುವಾಲ್ ಪದವು ಧನ್ಯವಾದಗೈದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.