ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ನಿರೀಕ್ಷೆ ರಹಿತ ಸಮಾಜ ಸೇವೆಯಿಂದ ಯಶಸ್ಸು-ವಿಜಯ ವಿಷ್ಣುಮಯ್ಯ

ಪುತ್ತೂರು: ಸಂಘಟನೆಯಲ್ಲಿ ತೊಡಗಿಸಿಕೊಳ್ಳುವವರು ನಿಸ್ವಾರ್ಥರಾಗಿರಬೇಕು. ಸಂಘವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳಬಾರದು. ಯಾವುದೇ ನಿರೀಕ್ಷೆಯನ್ನಿಟ್ಟುಕೊಂಡು ಸಂಘಟನೆಗೆ ಸೇರಲೂಬಾರದು. ನಿರೀಕ್ಷೆಯಿಟ್ಟು ತೊಡಗಿಸಿಕೊಂಡಾಗ ಅದರಿಂದ ನಿರಾಸೆ ಅಧಿಕ. ನಿರೀಕ್ಷೆ ಬಿಟ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಾಗ ಸಮಾಜವೇ ನಮ್ಮನ್ನು ಗುರುತಿಸಿ ಗೌರವಿಸುತ್ತದೆ ಎಂದು ಮಂಗಳೂರು ಲಯನ್ಸ್ ಕ್ಲಬ್‌ನ ಅಧ್ಯಕ್ಷ ವಿಜಯ ವಿಷ್ಣು ಮಯ್ಯ ಹೇಳಿದರು.

ಲಯನ್ಸ್ ಸೇವಾ ಮಂದಿರಲ್ಲಿ ಜೂ.25ರಂದು ನಡೆದ ಪುತ್ತೂರು ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು. ಆರ್ಥಿಕ ಶಕ್ತಿಯಿಂದಾಗಿ ಯಾರೂ ಸಮಾಜದಲ್ಲಿ ನಾಯಕರೆನಿಸಕೊಳ್ಳಲು ಸಾಧ್ಯವಿಲ್ಲ. ಅಣ್ಣ ಹಜಾರೆ, ಮಹಾತ್ಮಾ ಗಾಂಧೀಜಿ ಹಾಗೂ ಸುಧಾ ಮೂರ್ತಿಯವರಂತ ಸರಳ ವ್ಯಕ್ತಿಗಳೇ ನಮಗೆ ಮಾದರಿ ಎಂದರು. ಸಂಘಟನೆಗೆ ಸೇರ ಬಯಸುವವರು ಸಂಘಟನೆಯ ಉದ್ದೇಶವನ್ನು ಅರಿತುಕೊಂಡು ಅದನ್ನು ಈಡೇರಿಸಲು ಪ್ರಯತ್ನಿಸಬೇಕು. ಸಮಾಜದ ಅತ್ಯಂತ ದುರ್ಬಲ ವರ್ಗದವರ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಪ್ರಯತ್ನಿಸಬೇಕು. ಯಾವುದೋ ನಿರೀಕ್ಷೆಯಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡಾಗ ಸಮಾಜವೇ ನಮ್ಮನ್ನು ದೂರ ಇಡುತ್ತದೆ.ನಿರೀಕ್ಷೆಯಿಂದ ನಿರಾಸೆಯೇ ಕಟ್ಟಿಟ್ಟಬುತ್ತಿ. ನಿರೀಕ್ಷೆಯಲ್ಲಿದ್ದ ಸಾಧನೆಯಿಂದ ಯಶಸ್ಸು ನಮ್ಮದಾಗುತ್ತದೆ.

ನಿರೀಕ್ಷೆಯಿಲ್ಲ ಸೇವೇಯೇ ನಮಗೆ ಶ್ರೀರಕ್ಷೆಯಾಗುತ್ತದೆ. ಅದರಿಂದ ಸಮಾಜದ ಪ್ರೀತಿ, ವಿಶ್ವಾಸ ಗಳಿಸಲು ಸಾಧ್ಯ ಎಂದು ಹೇಳಿದರು.ಲಯನ್ಸ್ ಕ್ಲಬ್‌ನ ಜಿಲ್ಲಾ 2ನೇ ಗವರ್ನರ್ ವಸಂತ ಕುಮಾರ್ ಶೆಟ್ಟಿ ಮಾತನಾಡಿ, ಪುತ್ತೂರು ಕ್ಲಬ್ ಜಿಲ್ಲೆಯಲ್ಲಿ ೨ನೇ ಅತೀ ಹಿರಿಯ ಕ್ಲಬ್ ಆಗಿದೆ. ಇಲ್ಲಿನ ಸಾಧನೆ ಸಾಮಾನ್ಯವಲ್ಲ. ಇದರಿಂದಾಗಿ ಕ್ಲಬ್ ಸುವರ್ಣ ಮಹೋತ್ಸವವನ್ನು ಆಚರಿಸುವಂತಾಗಿದೆ. ಸುವರ್ಣ ಮಹೋತ್ಸವದ ಅಂಗವಾಗಿ ಸಮಾಜದಕ್ಕೆ ಶಾಶ್ವತವಾದ ಕೊಡುಗೆಯನ್ನು ನೀಡುವಂತೆ ಅವರು ಹೇಳಿದರು.

ನಿರ್ಗಮನ ಅಧ್ಯಕ್ಷ ವೆಂಕಟ್ರಮಣ ಘಾಟೆ ಮಾತನಾಡಿ, ಸಾಮಾನ್ಯ ವ್ಯಕ್ತಿಯಾಗಿದ್ದ ನನಗೆ ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಅಧ್ಯಕ್ಷನಾಗುವ ಸುಯೋಗ ಲಭಿಸಿದೆ. ತನ್ನ ಅವಧಿಯಲ್ಲಿ ಕೈಗೊಂಡಿರುವ ಎಲ್ಲಾ ಸಮಾಜ ಸೇವಾ ಕಾರ್ಯಗಳಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಅವರು ಕೃತಜ್ಞತೆ ಸಲ್ಲಿಸಿದರು.ನೂತನ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಮಾತನಾಡಿ, ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಪುತ್ತೂರು ಕ್ಲಬ್ ಅಧ್ಯಕ್ಷನಾಗುವ ಅವಕಾಶ ಲಭಿಸಿದೆ. ಈ ಅವಧಿಯಲ್ಲಿ ಕೈಗೊಳ್ಳಲಾಗುವ ಸೇವಾ ಕಾರ್ಯಗಳನ್ನು ಕಾರ್ಯರೂಪದಲ್ಲಿ ತೋರಿಸುವುದಾಗಿ ಅವರು ಹೇಳಿದರು.

ವಲಯಾಧ್ಯಕ್ಷ ಅರವಿಂದ ಭಗವಾನ್ ರೈ, ನಿಕಟಪೂರ್ವ ಅಧ್ಯಕ್ಷ ಆನಂದ ರೈ ಕೆಯ್ಯೂರು, ಕೋಶಾಧಿಕಾರಿ ಜಯಶ್ರೀ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸುವರ್ಣ ಸಂಭ್ರಮಕ್ಕೆ ಚಾಲನೆ:ಪುತ್ತೂರು ಲಯನ್ಸ್ ಕ್ಲಬ್ 50ವರ್ಷಗಳನ್ನು ಪೂರೈಸಿದ್ದು ಇದರ ಸುವರ್ಣ ಮಹೋತ್ಸವದ ಸಂಭ್ರಮಕ್ಕೆ ಹಿರಿಯ ಲಯನ್ಸ್ ಸದಸ್ಯ ಸುಬ್ರಹ್ಮಣ್ಯ ಕೊಳಯತ್ತಾಯ ದೀಪ ಬೆಳಗಿಸಿ ಚಾಲನೆ ನೀಡಿದರು. ಹಿರಿಯ ಸದಸ್ಯ ಮುಳಿಯ ಶ್ಯಾಂ ಭಟ್, ಜನಾರ್ದನ ಭಟ್, ಡಾ.ಎ.ಕೆ ರೈ, ಮಂಗಳೂರು ಲಯನ್ಸ್ ಕ್ಲಬ್‌ನ ಶೇಖರ ಪೂಜಾರಿ ಉಪಸ್ಥಿತರಿದ್ದರು.

ಸುರಕ್ಷತಾ ಸ್ಟಿಕ್ಕರ್ ಬಿಡಗುಡೆ: ಕ್ಲಬ್‌ನ ಸುವರ್ಣ ಮಹೋತ್ಸವದ ಅಂಗವಾಗಿ ಸಂಚಾರ ಸುರಕ್ಷತೆ ಕಾಪಾಡುವ ಜಾಗೃತಿ ಮೂಡಿಸುವ ಸ್ಟಿಕ್ಕರ್‌ನ್ನು ಈ ಸಂದರ್ಭದಲ್ಲಿ ಲಯುನ್ಸ್ ಕ್ಲಬ್‌ನ 2ನೇ ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿ ಬಿಡುಗಡೆ ಮಾಡಿದರು.ಪ್ರತಿಭಾ ಪುರಸ್ಕಾರ:ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಸಿಂಚನಾಲಕ್ಷ್ಮೀ, ಭರತನಾಟ್ಯದಲ್ಲಿ ಸಾಧನೆ ಮಾಡಿದ ಆಶಿತಾ ರಾವ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕ್ಲಬ್‌ನ ವಿದ್ಯಾನಿಧಿ ಯೋಜನೆಯಲ್ಲಿ ಚೇತನ್ ಪಡೀಲು, ಯಶಸ್ವಿನಿ ಈಶ್ವರಮಂಗಲ, ತನುಶ್ರೀ ಮುಗುಳಿ, ಸ್ವಪ್ನ ಮುಗುಳಿ, ಶ್ರೇಯಸ್, ಅಶ್ವಥ್, ಕೌಶಿಕ್ ಹಾಗೂ ನಿಶಿತಾರವರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸನ್ಮಾನ ಕ್ಲಬ್‌ನ ಹಿರಿಯ ಸದಸ್ಯ ಸುಬ್ರಹ್ಮಣ್ಯ ಕೊಳತ್ತಾಯ, ಮಂಗಳೂರು ಕ್ಲಬ್‌ನ ಅಧ್ಯಕ್ಷ ವಿಜಯ ವಿಷ್ಣು ಮಯ್ಯ ಹಾಗೂ ನಿಕಟಪೂರ್ವ ಅಧ್ಯಕ್ಷ ವೆಂಕಟ್ರಮಣ ಘಾಟಯವರನ್ನು ಸನ್ಮಾನಿಸಲಾಯಿತು. ಸದಸ್ಯರ ಸೇರ್ಪಡೆಶಾರದಾ ಕೇಶವ್, ನಯನಾ ರೈ, ನಾಗೇಶ್ ಆಚಾರ್ಯ, ಸುಮಂಗಳಾ ಶೆಣೈ, ಶಾರದಾ ಅರಸ್, ರೋಹಿಣಿ ರಾಘವ ಆಚಾರ್ಯ, ರಾಜೇಶ್ ಬಿ.ಇವರನ್ನು ಕ್ಲಬ್‌ಗೆ ನೂತನ ಸದಸ್ಯರಾಗಿ ಸೇರ್ಪಡೆಗೊಳಿಸಲಾಯಿತು. ಚೈತ್ರಾ ಭಟ್ ಪ್ರಾರ್ಥಿಸಿದರು. ಮುಳಿಯ ಶ್ಯಾಂ ಭಟ್ ಧ್ವಜ ವಂಧನೆ ಸಲ್ಲಿಸಿದರು.

ಅಧ್ಯಕ್ಷ ವೆಂಕಟ್ರಮಣ ಘಾಟೆ ಸ್ವಾಗತಿಸಿದರು. ಸದಸ್ಯರಾದ ಡಾ.ಎ.ಕೆ ರೈ, ಜ್ಯೋತಿ ನಾಯಕ್, ಜಯಶ್ರೀ ಶೆಟ್ಟಿ, ವಿವೇಕಾನಂದ, ಅನ್ನಪೂರ್ಣ, ಜ್ಞಾನೇಶ್ವರಿ ಜೋಷಿ, ಜಯಶ್ರೀ ನಾಯಕ್, ವತ್ಸಲಾ ರಾಜ್ಞಿ, ಕೃಷ್ಣಪ್ರಶಾಂತ್, ಗೋಪಿನಾಥ ಶೆಟ್ಟಿ, ಟಿ.ಎನ್ ಶೆಟ್ಟಿ, ಡಾ.ಎಲ್ ಕೃಷ್ಣ ಪ್ರಸಾದ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿ ಡಾ.ಶೋಭಿತಾ ಸತೀಶ್ ಕಾರ್ಯಕ್ರಮ ನಿರೂಪಿಸಿ, ನೂತನ ಕಾರ್ಯದರ್ಶಿ ಹರಿಪ್ರಸಾದ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.