ಪುತ್ತೂರು: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇಡ್ಯಡ್ಕ ಇದರ ಶಾಲಾಭಿವೃದ್ಧಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಒಂದು ಲಕ್ಷ ರೂಪಾಯಿ ಅನುದಾನ ಒದಗಿಸಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಅಧಿಕಾರಿ ಉಮೇಶ ಬಿ ಹಾಗೂ ಸವಣೂರು ವಲಯ ಮೇಲ್ವಿಚಾರಕರಾದ ಅಶ್ವಿನಿ ಜೆ ಯವರು ಶಾಲಾ ಮುಖ್ಯ ಗುರು ಹಾಗೂ ಶಾಲಾಭಿವೃದ್ಧಿ ಸಮಿತಿಯವರಿಗೆ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಇಡ್ಯಡ್ಕ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕುಸುಮಾಧರ ಇಡ್ಯಡ್ಕ, ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಇಡ್ಯಡ್ಕ, ಗ್ರಾಮಾಭಿವೃದ್ದಿ ಯೋಜನೆಯ ಚಾರ್ವಾಕ ಒಕ್ಕೂಟದ ಅಧ್ಯಕ್ಷ ಆನಂದ ಪೂಜಾರಿ ಗಾಳಿಬೆಟ್ಟು ಸೇವಾಪ್ರತಿನಿಧಿ ಕುಸುಮಾಧರ ಮರ್ಲಾನಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ದಿನೇಶ್ ಐ ಕೆ , ಕಾಣಿಯೂರು ಕ್ಲಸ್ಟರ್ ಸಿ ಆರ್ ಪಿ ಯಶೋದಾ ಎ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಗೀತಾ ಎಂ ಎ, ಸದಸ್ಯರಾದ ಲಕ್ಷ್ಮಣ ಗೌಡ ಐ ಕೆ, ಪದ್ಮನಾಭ ಕೀಲೆ ಬಾಲಕೃಷ್ಣ ಕೀಲೆ, ಧರ್ನಪ್ಪ ಗೌಡ ಪತ್ತನೆಜಾಲ್, ಲಕ್ಷ್ಮಣ ಕೂಡಿಗೆ, ಮೀನಾಕ್ಷಿ ಕೂಡಿಗೆ, ಪ್ರೇಮ ಕೂಡಿಗೆ ಶಶಿಕಲಾ ಐ, ಅಂಗನವಾಡಿ ಕಾರ್ಯಕರ್ತೆ ವೆದಾವತಿ ಉಪಸ್ಥಿತರಿದ್ದರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಗುರು ಜಯಂತ ವೈ ಸ್ವಾಗತಿಸಿ ವಂದಿಸಿದರು.