ಉಪ್ಪಿನಂಗಡಿ: ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ “ಸ್ವಚ್ಚ ಮೇವ ಜಯತೇ” ಪ್ರಯುಕ್ತ ವಿಶೇಷ ಗ್ರಾಮ ಸಭೆಯು ಜೂನ್ 26ರಂದು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜರಗಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಪೇಟೆಯಲ್ಲಿ ಅಲ್ಲಲ್ಲಿ ಕೆಲವರು ಮನೆಯ ಕಸವನ್ನು ತಂದು ಬಿಸಾಡುವುದು ಕಂಡು ಬರುತ್ತಿದೆ, ಇದರ ದುಷ್ಪರಿಣಾಮದಿಂದಾಗಿ ನಮ್ಮ ಪರಿಸರ ಮಲೀನ ಆಗುವುದರ ಮುಖೇನ ಸಾಂಕ್ರಾಮಿಕ ರೋಗ ಹರಡುವುದಕ್ಕೂ ಕಾರಣವಾಗುತ್ತದೆ, ಈ ನಿಟ್ಟಿನಲ್ಲಿ ಪ್ರತಿಯೋರ್ವರು ಜವಾಬ್ದಾರಿ ಅರಿತು ಈ ಬಗ್ಗೆ ಜನರಲ್ಲಿ ಅರಿವು, ಜಾಗೃತಿ ಮೂಡಿಸಬೇಕು ಎಂದರು.
ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ ಉಪಾಧ್ಯಕ್ಷ ಜಯಂತ ಪೊರೋಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಶೇಖರ ಮಡಿವಾಳ, ಯು.ಕೆ. ಇಬ್ರಾಹಿಂ, ಯು.ಟಿ. ತೌಶೀಫ್, ಶ್ರೀಮತಿ ಜಮೀಳ, ಶ್ರೀಮತಿ ಸುಶೀಲ, ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ ಸದಸ್ಯರುಗಳಾದ ಅಬ್ದುಲ್ ಅಜೀಜ್, ಉದಯ ಅತ್ರಮಜಲು, ಮಹಮ್ಮದ್ ಕೆಂಪಿ, ಪ್ರಶಾಂತ್, ಭರತೇಶ್, ಆರೋಗ್ಯ ಸಹಾಯಕಿ ಶ್ರೀಮತಿ ಗಾಯತ್ರಿ, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಪುಷ್ಪ, ಶ್ರೀಮತಿ ಮಮತಾ, ಶ್ರೀಮತಿ ವನಿತಾ, ಶ್ರೀಮತಿ ಹೇಮಲತಾ, ಶ್ರೀಮತಿ ರೇಖಾ, ಶ್ರೀಮತಿ ಯಶೋಧ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಮೈಮುನಾ ಮೊದಲಾದವರು ಉಪಸ್ಥಿತರಿದ್ದರು.
ಸಭೆಗೆ ಮುನ್ನ ಸದಸ್ಯರುಗಳಿಗೆ ಸ್ವಚ್ಚತೆ ಬಗ್ಗೆ ಪ್ರಮಾಣವಚನ ಭೋಧಿಸಲಾಯಿತು. ಸಭೆಯ ಬಳಿಕ ಸ್ವಚ್ಚತೆ ಬಗ್ಗೆ ಕಿರು ಚಲನ ಚಿತ್ರ ಪ್ರದರ್ಶನ ನಡೆಯಿತು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾಧವ ಸ್ವಾಗತಿಸಿ, ಕಾರ್ಯದರ್ಶಿ ಶ್ರೀಮತಿ ಮರಿಯಮ್ಮ ವಂದಿಸಿದರು.