ಪುತ್ತೂರು: ಶ್ರಮ,ಸೇವೆ ಮತ್ತು ಸಹಾಯ ಎಂಬ ಧ್ಯೇಯದೊಂದಿಗೆ ಸೇವೆ ಮಾಡುತ್ತಿರುವ ಅರಿಯಡ್ಕ ಗ್ರಾಮದ ಮಜ್ಜಾರಡ್ಕ ಶ್ರೀ ವಿಷ್ಣು ಫ್ರೆಂಡ್ಸ್ ವತಿಯಿಂದ 6 ಮತ್ತು 7 ನೇ ಹಂತದ ಸಹಾಯ ನಿಧಿಯನ್ನು ಇತ್ತೀಚೆಗೆ ವಿತರಿಸಲಾಯಿತು. ಮರದಿಂದ ಬಿದ್ದು ಗಾಯಗೊಂಡಿದ್ದ ಪ್ರಸಾದ ಮಡಿವಾಳ ಕೋಡಿಯಡ್ಕ ಹಾಗೂ ಅಪಘಾತದಿಂದ ಗಾಯಗೊಂಡು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹರೀಶ್ ಮಡಿವಾಳ ಕೋಡಿಯಡ್ಕರವರುಗಳಿಗೆ ಒಟ್ಟು 10 ಸಾವಿರ ರೂಪಾಯಿ ಸಹಾಯಧನ ವಿತರಿಸಲಾಯಿತು.
ಶ್ರೀ ವಿಷ್ಣು ಫ್ರೆಂಡ್ಸ್ ಮಜ್ಜಾರಡ್ಕ ಇದರ ಸಂಘಟಕರಾದ ರಾಜೇಶ್ ಕೆ.ಮಯೂರ ಸ್ವಾಮಿನಗರ, ಗಿರೀಶ್ ಪೂಜಾರಿ ಮಜ್ಜಾರಡ್ಕ, ಸಂಘಟನೆಯ ಪ್ರಮುಖ ಸದಸ್ಯರುಗಳಾದ ಜನಾರ್ದನ ಪೂಜಾರಿ ಮಜ್ಜಾರು, ಪ್ರೇಮ್ರಾಜ್ ಹೊಸಮನೆ, ಕೋಚಣ್ಣ ಪೂಜಾರಿ ಎಂಡೆಸಾಗು, ಗುರುಪ್ರಸಾದ್ ಮಜ್ಜಾರು, ನವೀನ ಪೂಜಾರಿ ಮಜ್ಜಾರು, ರಘುನಾಥ ಪೂಜಾರಿ ಗೋಳ್ತಿಲ, ಸದಾಶಿವ ಮಣಿಯಾಣಿ ಗೋಳ್ತಿಲ, ಕಿರಣ್ ಸ್ವಾಮಿನಗರ, ಯೋಗೀಶ್ ಸ್ವಾಮಿನಗರ, ವಿನೋದ್ ಪೂಜಾರಿ ಸ್ವಾಮಿನಗರ,ಲೋಕನಾಥ ಪೂಜಾರಿ ಮಜ್ಜಾರು, ಪುರುಷೋತ್ತಮ ಪೂಜಾರಿ ಗೋಳ್ತಿಲ, ರವಿ ಪೂಜಾರಿ ಮಜ್ಜಾರು, ಚೇತನ್ ಪೂಜಾರಿ ಮಜ್ಜಾರು, ಸಂದೇಶ್ ಬಿ.ಎಚ್, ಸಮಿತ್ ಪೂಜಾರಿ ಮಜ್ಜಾರು, ಸಾಂತಪ್ಪ ಪೂಜಾರಿ ಓಲ್ತಾಜೆ, ಅಶ್ವಥ್ ಪೂಜಾರಿ ತಿಂಗಳಾಡಿ, ಕಿಶೋರ್ ಪೂಜಾರಿ ಸ್ವಾಮಿನಗರ, ಉದಯ ಪೂಜಾರಿ ಸ್ವಾಮಿನಗರ,ಸುನೀಲ್ ಪೂಜಾರಿ ಸ್ವಾಮಿನಗರ, ಯತೀನ್ ಪೂಜಾರಿ ಮಜ್ಜಾರಡ್ಕ, ಲೋಕೇಶ್ ಗೌಡ ಸ್ವಾಮಿನಗರ, ಯತೀಶ್ ಪೂಜಾರಿ ಮಜ್ಜಾರು, ಅನಿಲ್ ಮಣಿಯಾಣಿ ಗೋಳ್ತಿಲ, ಭರತ್ ಓಲ್ತಾಜೆ, ರವಿಕಿರಣ್ ಪೂಜಾರಿ ಎಂಡೆಸಾಗು, ಶಶಿಕಿರಣ್ ಪೂಜಾರಿ ಎಂಡೆಸಾಗು, ದೇವಪ್ಪ ಪೂಜಾರಿ ಸರ್ವೆ ಮತ್ತು ಜಗದೀಶ್ ಪೂಜಾರಿ ಕೋಡಿಯಡ್ಕ ಉಪಸ್ಥಿತರಿದ್ದರು.