ಪುತ್ತೂರು: ಕಳೆದ 18 ವರ್ಷಗಳಿಂದ ಕುಂಬ್ರ ಪೇಟೆಯ ನಿಶ್ಮಿತಾ ಕಾಂಪ್ಲೆಕ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಲಕ್ಷ್ಮೀ ಜ್ಯುವೆಲ್ಲರಿ ವರ್ಕ್ಸ್ ಶಾಪ್ ನಲ್ಲಿ ಜೂ.26 ರಂದು ಬೆಳಿಗ್ಗೆ ಗಣಹೋಮ ಮತ್ತು ಶ್ರೀ ಲಕ್ಷ್ಮೀಪೂಜಾ ಕಾರ್ಯಕ್ರಮ ಜರಗಿತು. ಶ್ರೀ ಲಕ್ಷ್ಮೀ ಜ್ಯುವೆಲ್ಲರಿ ವರ್ಕ್ಸ್ ಶಾಪ್ 18 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಈ ವಿಶೇಷ ಪೂಜಾ ಕಾರ್ಯಕ್ರಮ ಜರಗಿತು. ರಾಜೇಶ್ ಭಟ್ರವರು ಪೂಜಾ ವಿಧಿ ವಿಧಾನ ನೆರವೇರಿಸಿದರು.
ಈ ಸಂದರ್ಭದಲ್ಲಿ ನಿಶ್ಮಿತಾ ಕಾಂಪ್ಲೆಕ್ಸ್ ಮಾಲಕ ಪುರಂದರ ರೈ ಕೋರಿಕ್ಕಾರು ಸಹಿತ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು. ನೂರಾರು ಮಂದಿ ಗ್ರಾಹಕರು ಆಗಮಿಸಿ ಶುಭ ಹಾರೈಸಿದರು. ಜ್ಯುವೆಲ್ಲರಿ ವರ್ಕ್ಸ್ ಶಾಫ್ ಮಾಲಕ ಉದಯ ಆಚಾರ್ಯ ಕೃಷ್ಣನಗರರವರು ಅತಿಥಿಗಳನ್ನು ಸ್ವಾಗತಿಸಿ, ಪ್ರಸಾದ ನೀಡಿ ಸತ್ಕರಿಸಿ ಗ್ರಾಹಕರ ಸಹಕಾರ ಕೋರಿದರು. ಶುಭ ಉದಯ ಆಚಾರ್ಯ, ಹಿತಾಶ್ರೀ, ಹಿತೇಶ್, ಸತೀಶ್ ಮತ್ತು ಮಾಧವಿ ಹಾಗೂ ರವಿ, ಜನಾರ್ದನ್ ಆಚಾರ್ಯ ಸಹಕರಿಸಿದ್ದರು.
ಚಿನ್ನ,ಬೆಳ್ಳಿ ಆಭರಣಗಳ ತಯಾರಕರು
ಕುಂಬ್ರದ ಶ್ರೀ ಲಕ್ಷ್ಮೀ ಜ್ಯುವೆಲ್ಲರಿ ವರ್ಕ್ಸ್ ಶಾಪ್ ನಲ್ಲಿ ಗ್ರಾಹಕರ ಅನುಕೂಲ ಮತ್ತು ಅಭಿರುಚಿಗೆ ತಕ್ಕಂತೆ ವಿವಿಧ ವಿನ್ಯಾಸದ ಚಿನ್ನ, ಬೆಳ್ಳಿ ಆಭರಣಗಳನ್ನು ಕ್ಲಪ್ತ ಸಮಯದಲ್ಲಿ ತಯಾರಿಸಿ ಕೊಡಲಾಗುತ್ತಿದೆ. ಇದಲ್ಲದೆ ಬೆಳ್ಳಿಯ ಆಭರಣಗಳಿಗೆ ಒಪ್ಪ ಹಾಕಿ ಕೊಡುವ ವ್ಯವಸ್ಥೆಯೂ ಇದೆ. ಮದುವೆ ಮತ್ತು ಇನ್ನಿತರ ಶುಭ ಸಮಾರಂಭಗಳಿಗೆ ಆಭರಣಗಳು ಬಾಡಿಗೆಗೆ ಇಲ್ಲಿ ದೊರೆಯುತ್ತದೆ.ಮನಸೂರೆಗೊಳ್ಳುವ ಆಕರ್ಷಕ ವಿನ್ಯಾಸದ ಆಭರಣಗಳನ್ನು ಮಾಡಬೇಕೆಂದಿದ್ದರೆ ಗ್ರಾಹಕರು ಕುಂಬ್ರದ ಶ್ರೀ ಲಕ್ಷ್ಮೀ ಜ್ಯುವೆಲ್ಲರಿ ವರ್ಕ್ಸ್ ಶಾಪ್ ಅನ್ನು ಸಂಪರ್ಕಿಸಬಹುದಾಗಿದೆ. ವಿವರಗಳಿಗೆ 9449283728 ಗೆ ಸಂಪರ್ಕಿಸಬಹುದು ಎಂದು ಮಾಲಕರು ತಿಳಿಸಿದ್ದಾರೆ.