ಪುತ್ತೂರು: ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ, ಅವರ ಪತ್ನಿ ಕಸ್ತೂರಿಕಲಾ ಎಸ್.ರೈ, ಪುತ್ರ, ಮಂಗಳೂರು ಎ.ಜೆ. ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ.ರಾಜೇಶ್ ರೈ, ಸೊಸೆ ಅಶ್ವಿತಾ ಎಸ್.ರೈರವರು ಜೂ.26ರಂದು ಅಮೆರಿಕಾ ರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಇವರು ಅಮೆರಿಕಾದ ನ್ಯೂಯಾರ್ಕ್ನಲ್ಲಿ ಯಕ್ಷ ಧ್ರುವ ಪಟ್ಲ ಫೌಂಡೇಶನ್ನ 33ನೇ ಶಾಖೆಯ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಮೆರಿಕಾದಲ್ಲಿ ನೆಲಿಸಿರುವ ಸೀತಾರಾಮ ರೈರವರ ಪುತ್ರ ಇಂಜಿನಿಯರ್ ಮಹೇಶ್ ಎಸ್.ರೈ, ಸೊಸೆ ಪಲ್ಲವಿ ಎಂ.ರೈ, ಮತ್ತು ಮೊಮ್ಮಗ ಇಶಾನ್ರವರನ್ನು ಭೇಟಿಯಾಗಲಿದ್ದಾರೆ. ಅಲ್ಲದೇ ಅಮೆರಿಕಾದ ವಾಷಿಂಗ್ಟನ್, ನಯಾಗಾರ್, ನ್ಯೂಜೆರ್ಸಿ, ಫೀನಿಕ್ಸ್, ಅಟ್ಲಾಂಟ್ ಮತ್ತು ಕ್ಯಾಲಿಫೋರ್ನಿಯಾಕ್ಕೆ ಭೇಟಿ ನೀಡಿ ಜು.20ರಂದು ಸ್ವದೇಶಕ್ಕೆ ಆಗಮಿಸಲಿದ್ದಾರೆ.