ಪುತ್ತೂರು: ರೋಟರಿ RID 3181 ಇದರ 2021-22ನೇ ಸಾಲಿನ ಜಿಲ್ಲಾ ಗವರ್ನರ್ ಆಗಿ ಆಯ್ಕೆಯಾದ ರೊ.ರವೀಂದ್ರ ಭಟ್ ರವರನ್ನು ರೋಟರಿ ಕ್ಲಬ್ ಪುತ್ತೂರು ಪೂರ್ವದ ವತಿಯಿಂದ ಪುತ್ತೂರಿನ ಎಲ್ಲಾ ರೋಟರಿ ಕ್ಲಬ್ಗಳ ಸಹಯೋಗದೊಂದಿಗೆ ಜೂ.24ರಂದು ರೋಟರಿ ಮನಿಷ ಸಭಾಂಗಣದಲ್ಲಿ ಅಭಿನಂದಿಸಲಾಯಿತು. ರೋಟರಿ ಪುತ್ತೂರು ಪೂರ್ವದ ಅಧ್ಯಕ್ಷ ಅಬ್ಬಾಸ್ ಮುರ, ಕೆ.ಆರ್.ಶೆಣೈ, ಬಲರಾಮ್ ಆಚಾರ್ಯ, ಜಯಂತ್ ನಡುಬೈಲು, ಡಾ.ಶ್ಯಾಂ ಪ್ರಸಾದ್, ರವಿಕುಮಾರ್, ಶರತ್ ರೈ, ನರಸಿಂಹ ಪೈ, ಡಾ.ಕೇಶವ ಮತ್ತು ಕೆ.ವಿ.ಶೆಣೈ ರವರು ಉಪಸ್ಥಿತರಿದ್ದರು.
ಉಡುಪಿ ಮೂಲದವರಾದ ರವೀಂದ್ರ ಭಟ್ ರವರು ಉದ್ಯಮಿಯಾಗಿದ್ದು ಕಳೆದ ಕೆಲವು ದಶಕಗಳಿಂದ ಮೈಸೂರಿನಲ್ಲಿ ವಾಸಿಸುತಿದ್ದಾರೆ.