ಪುತ್ತೂರು: ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದ ವಾರ್ಷಿಕ ಮಹಾಸಭೆ ನಡೆಯಿತು. ಸಂಘದ ಅಧ್ಯಕ್ಷ ಉಮೇಶ್ ಮಿತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಫಾರೂಕ್ ಶೇಖ್ ಸ್ವಾಗತಿಸಿದರು. ಕಾರ್ಯದರ್ಶಿ ಯೂಸುಫ್ ರೆಂಜಲಾಡಿ ವರದಿ ವಾಚಿಸಿದರು. ಖಜಾಂಜಿ ಸದಾಶಿವ ಶೆಟ್ಟಿ ಮಾರಂಗ ಲೆಕ್ಕಪತ್ರ ಮಂಡಿಸಿದರು. ನಂತರ ಸಂಘದ 2019-20ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.
ನೂತನ ಅಧ್ಯಕ್ಷರಾಗಿ ಸದಾಶಿವ ಶೆಟ್ಟಿ ಮಾರಂಗ, ಪ್ರ.ಕಾರ್ಯದರ್ಶಿಯಾಗಿ ಶರತ್ ಕುಮಾರ್ ಪಾರ, ಉಪಾಧ್ಯಕ್ಷರಾಗಿ ಶ್ರೀಧರ್ ರೈ ಕೋಡಂಬು, ಜೊತೆ ಕಾರ್ಯದರ್ಶಿಯಾಗಿ ಆಶಿಫ್ ಆನೆಮಜಲು, ಖಜಾಂಜಿಯಾಗಿ ಹಿಲರಿ ಡಿಸೋಜಾ ಆಯ್ಕೆಗೊಂಡರು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಉಮೇಶ್ ಮಿತ್ತಡ್ಕ, ಫಾರೂಕ್ ಶೇಖ್ ಮುಕ್ವೆ, ಯೂಸುಫ್ ರೆಂಜಲಾಡಿ, ರಮೇಶ್ ಕೆಮ್ಮಾಯಿ, ಲಕ್ಷ್ಮೀಕಾಂತ್ ರೈ ಅನಿಕೂಟೇಲು, ಶಿವಕುಮಾರ್ ಈಶ್ವರಮಂಗಲ, ರಾಕೇಶ್ ಬನ್ನೂರು, ನರೇಶ್ ಜೈನ್, ಲೋಕಯ್ಯ, ರಾಜೇಶ್ ಎಂ.ಎಸ್, ಗಂಗಾಧರ ನಿಡ್ಪಳ್ಳಿ, ಪ್ರಶಾಂತ್ ಮಿತ್ತಡ್ಕ, ರಾಜೇಶ್ ಸಂಪ್ಯಾಡಿ, ಹಾಗೂ ರಮೇಶ್ ಅವರನ್ನು ಆಯ್ಕೆ ಮಾಡಲಾಯಿತು. ಜೊತೆ ಕಾರ್ಯದರ್ಶಿ ರಮೇಶ್ ಕೆಮ್ಮಾಯಿ ವಂದಿಸಿದರು. ಯೂಸುಫ್ ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು.
ಅಧಿಕಾರ ಹಸ್ತಾಂತರ
ನೂತನವಾಗಿ ಆಯ್ಕೆಗೊಂಡ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಸದಸ್ಯರಿಗೆ ಸಂಘದ ಗುರುತಿನ ಚೀಟಿಯನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.