ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿರುವುದಾಗಿ ಯುವತಿಯೊಬ್ಬರು ನೀಡಿದ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಕಬಕ ಮುರ ನಿವಾಸಿ ರಾಮಣ್ಣ ಪೂಜಾರಿ ಎಂಬವರ ಪುತ್ರ ನಿತೇಶ್ ಅವರು ನನ್ನನ್ನು ವಿವಾಹವಾಗುವುದಾಗಿ ನಂಬಿಸಿ 2017ರ ಸೆ. 13ರಂದು ನಮ್ಮ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಂದು ದೈಹಿಕ ಸಂಪರ್ಕ ಮಾಡಿದ್ದು ಇದೀಗ ವಿವಾಹ ಪ್ರಸ್ತಾಪದ ವೇಳೆ ನಿತೇಶ್ ಅವರು ಮದುವೆ ಆಗುವುದಿಲ್ಲ ಎಂದು ಹೇಳಿ ವಂಚನೆ ಮಾಡಿದ್ದಾರೆ ಎಂದು ಯುವತಿ ದೂರು ನೀಡಿದ್ದಾರೆ.
ಈ ವಿಚಾರವನ್ನು ಮನೆ ಮಂದಿಗೆ ತಿಳಿಸಿದಾಗ ಆತನ ತಂದೆ ರಾಮಣ್ಣ ಪೂಜಾರಿ ಮತ್ತು ಆತನ ಬಾವ ನಿಕಿತೇಜ್ ಅವರು ಬೆದರಿಕೆ ಹಾಕಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಆಕೆಯ ದೂರಿನಂತೆ ನಿತೇಶ್ ವಿರುದ್ಧ ಮಾನಬಂಗಕ್ಕೆ ಸಂಬಂಧಿಸಿ ಸೆಕ್ಷನ್ 376 ಮತ್ತು ಮೋಸಕ್ಕೆ ಸಂಬಂಧಿಸಿ 417 ಪ್ರಕರಣ ದಾಖಲಾಗಿದೆ. ನಿತೇಶ್ ಅವರ ತಂದೆ ರಾಮಣ್ಣ ಪೂಜಾರಿ ಮತ್ತು ಬಾವ ನಿಕಿತೇಶ್ ಅವರ ವಿರುದ್ಧ ಬೆದರಿಕೆಗೆ ಸಂಬಂಧಿಸಿ 506 ಪ್ರಕರಣ ಮಹಿಳಾ ಠಾಣೆಯ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ನಿತೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.