ಪುತ್ತೂರು:ಹೆಸರಾಂತ ಕಂಪನಿಗಳ ಐಎಸ್ಐ ಮಾರ್ಕ್ ಇರುವ ಹೆಲ್ಮೆಟ್ ಮಾರಾಟ ಮಳಿಗೆ ಹೆಲ್ಮೆಟ್ ಝೋನ್ ಜೂ.27ರಂದು ಉರ್ಲಾಂಡಿ ಬೈಪಾಸ್ ರಸ್ತೆಯ ಮಂಗಳಾ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಂಡಿತು.
ನಗರ ಠಾಣಾ ಎಸ್.ಐ ಚೆಲುವಯ್ಯ ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬೈಕ್ ಚಲಾಯಿಸುವ ಸಂದರ್ಭ ಪ್ರತಿಯೊಬ್ಬರು ಹೆಲ್ಮೆಟ್ ಧರಿಸಬೇಕಾಗಿರುವುದು ಕಡ್ಡಾಯ. ನಾವು ಧರಿಸುವ ಹೆಲ್ಮೆಟ್ಗಳು ಗುಣಮಟ್ಟದ್ದಾಗಿರಬೇಕು. ಅದರಲ್ಲಿ ಐಎಸ್ಐ ಮಾರ್ಕ್ ಇರಬೇಕಾಗಿರುವು ಕಡ್ಡಾಯ ಎಂಬುದು ಕಾನೂನಿನಲ್ಲಿದೆ. ಈ ನಿಟ್ಟಿನಲ್ಲಿ ಐಎಸ್ಐ ಮಾರ್ಕ್ನ ಹೆಲ್ಮೆಟ್ಗಳನ್ನೇ ಮಾರಾಟ ಮಾಡುವ ಉದ್ದೇಶದಿಂದ ನೂತನವಾಗಿ ಪ್ರಾರಂಭಗೊಂಡಿರುವ ಸಂಸ್ಥೆಯು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಸಂಚಾರಿ ಠಾಣಾ ಪೊಲೀಸ್ ಸಿಬಂದಿಗಳಾದ ಸ್ಕರಿಯಾ, ಶಿವಪ್ರಸಾದ್, ನಿವೃತ್ತ ಉಪ ವಲಯಾರಣ್ಯಾಧಿಕಾರಿ ಕೃಷ್ಣಪ್ಪ, ಆರೋಗ್ಯ ಇಲಾಖೆಯ ನಿವೃತ್ತ ಸಿಬಂದಿ ರತ್ನಾ, ಜೆ.ಕೆ ಕನ್ಸ್ಟ್ರಕ್ಷನ್ನ ಮ್ಹಾಲಕ ಜಯಕುಮಾರ್ ನಾಯರ್, ಸಹಸ್ರ ಫ್ಯಾನ್ಸಿ ಮ್ಹಾಲಕ ಲೊಕೇಶ್, ಬಿಎಸ್ಎನ್ಎಲ್ ಸಿಬಂದಿ ನಾಮದೇವ, ಮ್ಹಾಲಕರ ತಂದೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿವೃತ್ತ ವಾಸಪ್ಪ, ತಾಯಿ ಲೀಲಾವತಿ, ಪತ್ನಿ ಪ್ರತಿಮಾ, ಪುಷ್ಪಾವತಿ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು.
ಮ್ಹಾಲಕ ಅರುಣ್ ಮಡ್ತಿಲ ಸ್ವಾಗತಿಸಿ ನಮ್ಮಲ್ಲಿ ವೇಗಾ, ಸ್ಟಟ್ಸ್, ಸ್ಟೀಲ್ ಬರ್ಡ್, ಎಲ್ಎಸ್2 ಹಾಗೂ ಎಂ.ಟಿ ಕಂಪನಿಯ ಐಎಸ್ಐ ಮಾರ್ಕ್ ಇರುವ ಹೆಲ್ಮೆಟ್ಗಳು, ಜಾಕೆಟ್, ರೈನ್ಕೋಟ್ಗಳು ಲಬ್ಯವಿದೆ ಎಂದು ಹೇಳಿದರು.