Home_Page_Advt
Home_Page_Advt
Home_Page_Advt

ಬಿದ್ದು ಸಿಕ್ಕಿದ ಚಿನ್ನಾಭರಣ ವಾರಸುದಾರರಿಗೆ ಹಿಂದಿರುಗಿಸಿದ ಚಂದ್ರಿಕಾರವರಿಗೆ ಅಭಿನಂದನೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ದಾರಿಯಲ್ಲಿ ಬಿದ್ದು ಸಿಕ್ಕಿದ ಚಿನ್ನದ ಆಭರಣವನ್ನು ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಲ್ಯಾಬ್ ಟೆಕ್ನಿಷಿಯನ್ ಚಂದ್ರಿಕಾ ಅವರನ್ನು ಸುವಿಚಾರ ಬಳಗದ ಸಭೆಯಲ್ಲಿ ಗುರುತಿಸಿ ಗೌರವಿಸಲಾಯಿತು.

ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿರುವ ಚಂದ್ರಿಕಾ ಅವರಿಗೆ ಸುಮಾರು ಅರುವತ್ತು ಸಾವಿರ ರೂಪಾಯಿ ಬೆಲೆಬಾಳುವ ಚಿನ್ನದ ಬ್ರೇಸ್’ಲೆಟ್ ದಾರಿಯಲ್ಲಿ ಬಿದ್ದು ಸಿಕ್ಕಿತ್ತು. ಪತ್ರಿಕೆಯಲ್ಲಿ ಬಂದ ಪ್ರಕಟಣೆ ಗಮನಿಸಿದ ಅವರು ಅದರ ವಾರಸುದಾರ ಕ್ರಿಸ್ಟೋಫರ್ ಬಜಾಜ್ ಸಂಸ್ಥೆಯ ಮೆಕ್ಯಾನಿಕ್ ಅಶೋಕರವರಿಗೆ ಹಸ್ತಾಂತರಿಸಿದ್ದರು. ಫೇಸ್‌ಬುಕ್ ಹಾಗೂ ಪತ್ರಿಕೆಯಲ್ಲಿ ಬಂದ ವರದಿಯನ್ನು ಗಮನಿಸಿದ ಪುತ್ತೂರಿನ ಸುವಿಚಾರ ಬಳಗದ ಸಂಚಾಲಕ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಅವರು ಚಂದ್ರಿಕಾರವರನ್ನು ಬಳಗದ ಸಭೆಗೆ ಕರೆಸಿ ಗುರುತಿಸಿದರು. ಮಂಜಲ್ಪಡ್ಪು ಸಿ.ಎಸ್.ಐ. ವಿದ್ಯಾರ್ಥಿ ಪಾಲನಾ ಕೇಂದ್ರದ ಮೇಲ್ವಿಚಾರಕ ಚಂದ್ರಶೇಖರ ಮೂರ್ತಿ ಅವರು ಚಂದ್ರಿಕಾರವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.