ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಗ್ರಾಮ ಗ್ರಾಮಗಳಲ್ಲಿ ಯೋಗ ಪ್ರದರ್ಶನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದೇಹವು ಮನಸ್ಸಿನ ದೇವಸ್ಥಾನವಾಗಿದ್ದರೆ, ಯೋಗವು ಸುಂದರವಾದ ದೇವಸ್ಥಾನವನ್ನು ಸೃಷ್ಟಿಸುತ್ತದೆ. ಇಡೀ ವಿಶ್ವವನ್ನೇ ಆಕರ್ಷಿಸುವ ಯೋಗ ನಮ್ಮ ಜೀವನದ ಭಾಗವಾಗಬೇಕು ಎನ್ನುವ ನಿಟ್ಟಿನಲ್ಲಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಯೋಗ ಪ್ರದರ್ಶನವನ್ನು ಕೈಗೊಳ್ಳಲಾಯಿತು.  ಸುತ್ತಮುತ್ತಲಿನ ಗ್ರಾಮಗಳಲ್ಲಿ ಯೋಗ ಪ್ರಾತ್ಯಕ್ಷಿಕೆ ನೀಡುವ ಪಾಣಾಜೆ, ನಿಡ್ಪಳ್ಳಿ, ಬೆಟ್ಟಂಪಾಡಿ ಗ್ರಾಮಗಳಲ್ಲಿ ಮತ್ತು ವಿದ್ಯಾಸಂಸ್ಥೆಯಲ್ಲಿ ಏಕಕಾಲದಲ್ಲಿ ಯೋಗವನ್ನು ಪ್ರದರ್ಶಿಸಲಾಯಿತು.

ನಿಡ್ಪಳ್ಳಿ ಗ್ರಾಮ : ಸಿ. ಎ. ಬ್ಯಾಂಕ್ ನಿಡ್ಪಳ್ಳಿ ಇದರ ಸಭಾಂಗಣದಲ್ಲಿ ಪ್ರಿಯದರ್ಶಿನಿ ವಿದ್ಯಾ ಸಂಸ್ಥೆಯ ಮಕ್ಕಳಿಂದ ಯೋಗ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಂಧ್ಯಾಲಕ್ಷ್ಮೀ ಯವರು ಯೋಗದ ಮಹತ್ವದ ಕುರಿತು ಮಾಹಿತಿ ನೀಡಿದರು. ಹಾಗೂ ಆಡಳಿತ ಮಂಡಳಿಯ ಸದಸ್ಯ ಕರುಣಾಕರ ಶೆಟ್ಟಿ ಇವರು ಉಪಸಿತ್ಥರಿದ್ದರು. ಕಾರ್ಯಕ್ರಮವನ್ನು ಸಹಶಿಕ್ಷಕಿ ಅಶ್ವಿನಿ ನಿರೂಪಿಸಿ, ಸಹಶಿಕ್ಷಕಿ ಸಂಧ್ಯಾ ಸ್ವಾಗತಿಸಿ ವಂದಿಸಿದರು.

ಪಾಣಾಜೆ ಗ್ರಾಮ : ಪಾಣಾಜೆ ಸಿ. ಎ. ಬ್ಯಾಂಕ್‌ನ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಅದ್ಯಕ್ಷರಾಗಿ ಪೋಷಕರಾದ ಗಿರೀಶ್ ಭಟ್ ಬೈಂಕ್ಪೋಡು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಹರೀಶ್ ಕೆ. ಪಾಣಾಜೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ, ಕಾರ್ಯಕ್ರಮವನ್ನು ಸಂಘಟಿಸಿದ ವಿದ್ಯಾಸಂಸ್ಥೆಯ ಪ್ರಯತ್ನಕ್ಕೆ ಹಾಗೂ ಏಕಾಗ್ರತೆಗೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು. ಸಂಸ್ಥೆಯ ಅಧ್ಯಕ್ಷರಾದ ರಂಗನಾಥ್ ರೈ ಗುತ್ತು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಹಶಿಕ್ಷಕಿ ಪವಿತ್ರಾ ನಿರೂಪಿಸಿ, ಮಮತಾ ನಿರ್ವಹಿಸಿದರು. ಮತ್ತು ಸಹಶಿಕ್ಷಕಿ ಶರ್ಮಿಳಾ ವಂದಿಸಿದರು.

ಬೆಟ್ಟಂಪಾಡಿ : ಬೆಟ್ಟಂಪಾಡಿ ಪಂಚಾಯತು ಸಮುದಾಯ ಭವನದಲ್ಲಿ ಯೋಗ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಆಡಳಿತ ಮಂಡಳಿ ಸದಸ್ಯ ಡಾ. ಸತೀಶ್ ರಾವ್ ಉಪಸ್ಥಿತರಿದ್ದರು. ಬೆಟ್ಟಂಪಾಡಿ ಸಹಕಾರ ಸಂಘದ ಕೃಷಿಪತ್ತಿನ ಸಿಬ್ಬಂದಿ ಆರ್. ಬಿ. ಸುವರ್ಣ ಮುಖ್ಯ ಅತಿಥಿಯಾಗಿದ್ದರು. ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶ್ರೀಮಾನ್ ಕೊರಗಪ್ಪ ಗೌಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಸಹಶಿಕ್ಷಕಿ  ಪ್ರಾಪ್ತಿ ಬಿ. ನಿರೂಪಿಸಿದರು.  ನಿಖಿಲಾ ವಂದಿಸಿ, ಸಹಶಿಕ್ಷಕ ಮಿಥುನ್ ನಿರ್ವಹಿಸಿದರು.

ಪ್ರಿಯದರ್ಶಿನಿ ವಿದ್ಯಾಸಂಸ್ಥೆ : ಪ್ರಿಯದರ್ಶಿನಿಯ ವಿದ್ಯಾಸಂಸ್ಥೆಯ ಅಂಗಣದಲ್ಲಿ ಯೋಗ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷ ರಂಗನಾಥ ರೈ ವಹಿಸಿದ್ದರು. ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕರ್ಯಕ್ರಮವನ್ನು ಸಹಶಿಕ್ಷಕ ಪ್ರಶಾಂತ್ ನಿರೂಪಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.