ಜೂನ್ 30: ದಯಾನಂದ ರೈ ಮನವಳಿಕೆಗುತ್ತು ಸೇವಾ ನಿವೃತ್ತಿ

   
ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ರೈ ಮನವಳಿಕೆಗುತ್ತು ಜೂ.30ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. ಮಾಣಿಲ ಕೆಳಗಿನ ಮನೆ ದಿ.ಮಹಾಬಲ ರೈ ಮನವಳಿಕೆ ಗುತ್ತು ಹಾಗೂ ವಾರಿಜ ರೈ ರವರ ಪುತ್ರನಾಗಿ ತನ್ನ ಪದವಿ ವಿದ್ಯಾಭ್ಯಾಸ ೧೯೮೦ರಲ್ಲಿ ಮುಗಿಸಿ ನಂತರ ೧೯೮೧ರಲ್ಲಿ ಮಡಿಕೇರಿಯಲ್ಲಿ ಡಿಪ್ಲೋಮೊ ಇನ್ ಕೋ-ಆಪರೇಷನ್ ಸಹಕಾರಿ ಟ್ರೈನಿಂಗ್ ಮಾಡಿ ೧೯೮೨ರಲ್ಲಿ ಆಲಂಕಾರು ಸಿ.ಎ ಬ್ಯಾಂಕಿಗೆ ಗುಮಾಸ್ತರಾಗಿ ಸೇವೆಗೆ ಸೇರಿದ್ದರು.

ಸಂಘದ ಕೊಯಿಲ, ಆಲಂಕಾರು, ಕುಂತೂರು ಶಾಖೆಗಳಲ್ಲಿ ವಿವಿಧ ಹುದ್ದೆಗಳನ್ನು ಆಲಂಕರಿಸಿ ೨೦೧೪ರಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಜವಾಬ್ದಾರಿಯನ್ನು ನಿರ್ವಹಿಸಿಕೊಂಡರು ೨೦೧೪ರಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಳ್ಳುವ ಸಂದರ್ಭದಲ್ಲಿ ಸಂಘವು ೩೩ಕೋಟಿ ಠೇವಣಿ ಹಾಗೂ ೩೯ಕೋಟಿ ಸಾಲ ನೀಡಿ ೨೧ಲಕ್ಷ ಲಾಭಗಳಿಸಿತು. ೨೦೧೯ರಲ್ಲಿ ಆಡಳಿತ ಮಂಡಳಿ ಹಾಗೂ ಎಲ್ಲಾರ ಸಹಕಾರದೊಂದಿಗೆ ತನ್ನ ಮುಖ್ಯಕಾರ್ಯನಿರ್ವಹಣಾಧಿಕಾರಿಯ ಅವಧಿಯಲ್ಲಿ ೪೩ಕೋಟಿ ಠೇವಣಿ ೬೩ಕೋಟಿ ಸಾಲ ನೀಡಿ ಒಟ್ಟು ವ್ಯವಹಾರ ೪೩೮ಕೋಟಿ ನಡೆಸಿ ೧.೧೨ಕೋಟಿ ಲಾಭ ಗಳಿಸಲು ಶಕ್ತವಾಗಿತ್ತು.

ಸುಮಾರು ೫ಕೋಟಿ ಅಂದಾಜು ವೆಚ್ಚದ ಅಭಿವೃದ್ದಿ ಕೆಲಸಕಾರ್ಯಗಳಾದ ಪ್ರದಾನ ಕಛೇರಿಯಲ್ಲಿ ವಿಸ್ತರಿಸಿದ ರೈತರ ಗೋದಾಮು ಕಟ್ಟಡ, ಮಾರಾಟಶಾಖೆ, ಗೊಬ್ಬರ ಖರೀದಿ ಕೇಂದ್ರ, ಕುಡಿಯುವ ನೀರಿನ ಬೋರ್‌ವೆಲ್ ಗೆ ಜಲಪೂರಣ ವ್ಯವಸ್ಥೆ, ಕಟ್ಟಡದ ಮೇಲ್ಛಾವಣಿಗೆ ಶೀಟ್ ಅಳವಡಿಕೆ ಮುಂತಾದ ಕೆಲಸಕಾರ್ಯಗಳನ್ನು ಜಾರಿಗೊಳಿಸುವಳ್ಳಿ ಯಶಸ್ವಿಯಾಗಿದ್ದರು.

ಇವರ ಅಧಿಕಾರವಧಿಯಲ್ಲಿ ಸಂಸ್ಥೆಗೆ ೨೦೧೬-೧೭ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ “ಉತ್ತಮ ಸಹಕಾರಿ ಸಂಘ ಪ್ರಶಸ್ತಿ,” ೧೬-೧೭ನೇ ಸಾಲಿನಲ್ಲಿ ಉತ್ತಮ ಕಾರ್ಯನಿರ್ವಹಿಸಿದಕ್ಕಾಗಿ ಕರ್ನಾಟಕ ರಾಜ್ಯ ಸಹಕಾರಿ ಅಫೇಕ್ಸ್ ಬ್ಯಾಂಕ್ ಪ್ರಶಸ್ತಿ, ಇಂಡಿಯನ್ ಫಾರ್ಮರ್ ಪರ್ಟಿಲೈಸರ್, ಕೋ-ಆಪೇರೆಟಿವ್ ಸಂಸ್ಥೆಯಿಂದ ಇಪ್ಕೋ ಪ್ರಶಸ್ತಿಯನ್ನು ಸಂಸ್ಥೆ ಪಡೆದುಕೊಂಡಿತು. ಒಬ್ಬ ಪ್ರಮಾಣಿಕ, ದಕ್ಷ ಸರಳ ಸಜ್ಜನಿಕೆಯ ಅಧಿಕಾರಿಯಾಗಿ ಸಂಘದ ಸದಸ್ಯ ಗ್ರಾಹಕರೊಂದಿಗೆ ಹಾಗೂ ಊರಿನವರೊಂದಿಗೆ ಉತ್ತಮ ಭಾಂದವ್ಯ ಹೊಂದಿ ತನ್ನ ಬಿಡುವಿನ ವೇಳೆಯಲ್ಲಿ ಶೈಕ್ಷಣಿಕವಾಗಿ ಸುಮಾರು ೧೮ವರ್ಷಗಳಿಂದ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾಗಿ, ೧೨ ವರ್ಷಗಳ ಹಿಂದೆ ದುರ್ಗಾಂಭ ದಲ್ಲಿ ಪಿ.ಯು.ಸಿ ಯನ್ನು ಪ್ರಾರಂಭಗೊಳಿಸಲು ಕಾರಣಿಕರ್ತರಾಗಿದ್ದಾರೆ.

ಧಾರ್ಮಿಕವಾಗಿ ಮನವಳಿಕೆ ಗುತ್ತಿನ ದೈವ ದೇವರುಗಳ ಟ್ರಸ್ಟಿನ ಅಧ್ಯಕ್ಷರಾಗಿ, ೨ಅವಧಿಗೆ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿ, ಸುರುಳಿ ಬಾಲಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾಗಿ, ಸಾಮಾಜಿಕವಾಗಿ ಪುತ್ತೂರು ರಾಮಕೃಷ್ಣ ಪ್ರೌಢಶಾಲೆಯ ಆಡಳಿತ ಮಂಡಳಿಯ ಸದಸ್ಯರಾಗಿ, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾಗಿ, ಪ್ರಸಕ್ತ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರಿನ ಪುತ್ತೂರು ತಾಲೂಕು ಸಮಿತಿಯ ಸಂಚಾಲಕರಾಗಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ನಿ ಶ್ರೀಮತಿ ಅನಿತಾ ಡಿ.ರೈ ಮಗ ದೀಲನ್ ರೈ, ಮಗಳು ದೀಪ್ತಿ ವಿಕಾಸ್ ಶೆಟ್ಟಿ, ಅಳಿಯ ವಿಕಾಸ್ ಶೆಟ್ಟಿ ಯವರೊಂದಿಗೆ ಮನವಳಿಕೆ ಗುತ್ತಿನಲ್ಲಿ ಸುಖ ಜೀವನ ನಡೆಸುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.