ಪುತ್ತೂರು : ತುಳುನಾಡಿನ ಕುಂಬಳೆ ಸೀಮೆಯಲ್ಲಿ ಪ್ರಮುಖ ದೈವನರ್ತನ ಸೇವೆಯ ಜೊತೆಗೆ ಉಜಿರೆಯ ಪ್ರತಿಷ್ಠಿತ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಉಪನ್ಯಾಸಕರಾಗಿರುವ ಪಡುಮಲೆಯ ನಿವಾಸಿ ರವೀಶ್ ಪರವ ಪಡುಮಲೆ ಅವರಿಗೆ ದೇಶದ ಅತೀ ದೊಡ್ಡ ತಾಂತ್ರಿಕ ವಿದ್ಯಾಲಯ ‘ವಿಟಿಯು’ ಡಾಕ್ಟರೇಟ್ ನೀಡಿದೆ.
ಸಿವಿಲ್ ಕಾಮಗಾರಿ ಕ್ಷೇತ್ರದಲ್ಲಿ ಪ್ರಸ್ತುತ ಅನುಭವಿಸುತ್ತಿರುವ ಮರಳಿನ ಕೊರತೆಗಾಗಿ, ನೇತ್ರಾವತಿ ಮತ್ತು ಗುರುಪುರ ನದಿ ಅಳಿವೆ ಮರಳುಗಾರಿಕೆಯಿಂದ ದೊರೆತ ಮರಳನ್ನು ಕಬ್ಬಿಣದ ಸರಳುಗಳಿರುವ ಕಾಂಕ್ರೀಟ್ನಲ್ಲಿ ಬಳಸುವುದರಿಂದ ಆಗುವ ಪರಿಣಾಮಗಳ ಕುರಿತು ರವೀಶ್ ಅವರು ಅಧ್ಯಯನ ಮಾಡಿ ಇಂಪಾಕ್ಟ್ ಆಫ್ ಸಾಲಿಸಿಟಿ ಓನ್ ಕ್ವಾಲಿಟಿ ಆಫ್ ಎಸ್ಟುವರಿ ಸ್ಯಾಂಡ್ ಓನ್ ಕಾಂಕ್ರೀಟ್ ಇನ್ ಕೋಸ್ಟಲ್ ರೀಜನ್ ಆಫ್ ಕರ್ನಾಟಕ’ ಮಹಾಪ್ರಬಂಧ ಮಂಡಿಸಿದ್ದರು.
ಈ ಪ್ರಬಂದಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ. ‘ವಿಟಿಯು’ ನ ಮಾಜಿ ರಿಜಿಸ್ಟ್ರಾರ್ ಮತ್ತು ಮಂಗಳೂರಿನ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕರಾಗಿರುವ ಡಾ.ಕೆ.ಇ.ಪ್ರಕಾಶ್ ಮತ್ತು ಬೆಳಗಾವಿ `ಎಐಟಿಎಂ’ ಸಿವಿಲ್ ವಿಭಾಗದ ಪ್ರೊಫೆಸರ್ ಡಾ.ಬಿ.ಟಿ.ಸುರೇಶ್ ಬಾಬು ಅವರಿಗೆ ಮಾರ್ಗದರ್ಶನ ನೀಡಿದರು.