ಸವಣೂರು ಸರಕಾರಿ ಪ್ರೌಢಶಾಲಾ ವಿಭಾಗದ ಮಂತ್ರಿಮಂಡಲ ರಚನೆ: ನಾಯಕನಾಗಿ ಮಹಮ್ಮದ್ ಮುಬಶ್ಶಿರ್, ಉಪನಾಯಕಿಯಾಗಿ ಫಾತಿಮತ್ ರೋಝಾ

Puttur_Advt_NewsUnder_1
Puttur_Advt_NewsUnder_1
    ಮಹಮ್ಮದ್ ಮುಬಶ್ಶಿರ್
            ಫಾತಿಮತ್ ರೋಝಾ

ಸವಣೂರು: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಾಲಾ ಮಂತ್ರಿಮಂಡಲದ ಚುನಾವಣಾ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು.

ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಮುಖ್ಯಗುರು ತಾರಾನಾಥ ರೈ ಎಂ ರವರ ಮಾರ್ಗದರ್ಶನದಲ್ಲಿ ಶಾಲಾ ವಿದ್ಯಾರ್ಥಿಗಳೇ ಮತಗಟ್ಟೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು. ಸಹಶಿಕ್ಷಕರಾದ ಗಣೇಶ ಮರಕಾಲ ಹಾಗೂ ರೀನಾ ಎಂ ಡಿ ಚುನಾವಣಾಧಿಕಾರಿಗಳಾಗಿ ಭಾಗವಹಿಸಿದ್ದರು.

ಶಾಲಾ ನಾಯಕ ಹಾಗೂ ಉಪನಾಯಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಹಮ್ಮದ್ ಮುಬಶ್ಶಿರ್ (10ನೇ ತರಗತಿ) ನಾಯಕನಾಗಿ ಹಾಗೂ ಫಾತಿಮತ್ ರೋಝಾ (9ನೇ ತರಗತಿ) ಉಪನಾಯಕಿಯಾಗಿ ಆಯ್ಕೆಯಾದರು.ಇನ್ನುಳಿದಂತೆ ಗೃಹ ಮಂತ್ರಿಯಾಗಿ ಕೀರ್ತನ್ (10ನೇ) , ಶಿಕ್ಷಣ ಮಂತ್ರಿಯಾಗಿ ಶೋಭಾ ಕೆ ಎಸ್ (10ನೇ ), ವಾರ್ತಾ ಮಂತ್ರಿಯಾಗಿ ಫಾತಿಮತ್ ಭಾಷಿತ (10ನೇ), ಶಿಸ್ತು ಮಂತ್ರಿಯಾಗಿ ಮಹಮ್ಮದ್ ಹಾಶಿರ್ (10ನೇ), ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿಯಾಗಿ ರಕ್ಷಾ ಕೆ (10ನೇ), ಸಾಂಸ್ಕೃತಿಕ ಮಂತ್ರಿಯಾಗಿ ಓಂ ಪ್ರಕಾಶ್ (10ನೇ), ಕ್ರೀಡಾ ಮಂತ್ರಿಯಾಗಿ ದೀಪಾಕ್ಷ (10ನೇ), ಆಹಾರ ಮತ್ತು ನೀರಾವರಿ ಮಂತ್ರಿಯಾಗಿ ಸೃಜನ್ (10ನೇ), ಕೃಷಿ ಮಂತ್ರಿಯಾಗಿ ಸಚಿನ್ ಕುಮಾರ್ (10ನೇ) ಹಾಗೂ ವಿದ್ಯಾಶ್ರೀ ಚಂದನ (10ನೇ) ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಯಿತು.ಸಹಶಿಕ್ಷಕರಾದ ರಘು ಬಿ ಆರ್, ಕಿಶನ್ ಬಿ ವಿ, ಜಾನೆಟ್ ಪಾಯಸ್, ನಯನ ಜಿ ಪಾಲೇಕರ್, ಪವಿತ್ರಾ ಉಡುಪ, ಸರಸ್ವತಿ ಎಂ, ಸುರೇಶ್ ಶೆಟ್ಟಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.