ಪುತ್ತೂರು: ನಿಂತಿಕಲ್ನ ಧರ್ಮಶ್ರೀ ಆರ್ಕೆಡ್ನಲ್ಲಿ ಕಾರ್ತಿಕೇಯ ಟಯರ್ಸ್ ಜೂ. 27 ರಂದು ಶುಭಾರಂಭಗೊಂಡಿತು. ವೇ|ಮೂ| ಕಲ್ಲಡ್ಕ ಸುಬ್ರಹ್ಮಣ್ಯ ಉಪಾಧ್ಯಾಯ ವೈದಿಕ ಕಾರ್ಯಕ್ರಮ ನೆರವೇರಿಸಿದರು. ಮ್ಹಾಲಕರ ತಂದೆ ತಾಯಿ ಆನಂದ್ ಹಾಗೂ ಜಯಂತಿ ದಂಪತಿ ದೀಪ ಬೆಳಗಿಸಿ ಶುಭ ಹಾರೈಸಿದರು. ನಾರಾಯಣ ಡಿ. ಪುಣಚರವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆರ್ಕೇಡ್ ಮ್ಹಾಲಕ ಮಾಧವ ಗೌಡ ಕಾಮಧೇನು ಬೆಳ್ಳಾರೆ, ಕಾರ್ಕೇರ್ ಮ್ಹಾಲಕ ಚಂದ್ರಶೇಖರ್ ಪುತ್ತೂರು, ಜಗದೀಶ್ ಬೆಳ್ಳಾರೆ, ಕಾಣಿಯೂರು ಶೀಶ ಟೆಕ್ಸ್ಟೈಲ್ಸ್ ಮ್ಹಾಲಕ ಹೇಮಚಂದ್ರ, ಆತೂರು ಕೊಯಿಲ ಕಲ್ಯಾಣ್ ಡ್ರೆಸ್ ಸೆಂಟರ್ನ ಮ್ಹಾಲಕರಾದ ಗೀತಾಂಜಲಿ, ಸುರೇಶ್ ವಳತ್ತಡ್ಕ ಹಾಗೂ ಗಣೇಶ್ ಸಾಮೆತ್ತಡ್ಕ ಉಪಸ್ಥಿತರಿದ್ದರು. ಮ್ಹಾಲಕರಾದ ಕಾರ್ತಿಕ್ ಅಂದ್ರಟ್ಟ ಹಾಗೂ ಯತೀಶ್ ಅಂದ್ರಟ್ಟರವರು ಸ್ವಾಗತಿಸಿದರು.